'HDK ಸಿಎಂ ಇದ್ದಿದ್ರೆ ಸಿದ್ದರಾಮಯ್ಯ ಇನ್ನೂ ಬಾಡಿಗೆ ಮನೆಯಲ್ಲಿ ಇರತಿದ್ರು'

ಯಡಿಯೂರಪ್ಪನವರ ನಾಯಕತ್ವ ಬದಲಾಗುವ ಮಾತೇ ಇಲ್ಲ, ಅವರನ್ನ ಅಲ್ಲಾಡಿಸೋದು ಯಾರಿಂದಲೂ ಸಾಧ್ಯವಿಲ್ಲ. ಮುಂದಿನ ಎಲ್ಲ ಚುನಾವಣೆಗಳು ಯಡಿಯೂರಪ್ಪನವರ ನೇತೃತ್ವದಲ್ಲಿಯೇ ಆಗುತ್ತೆವೆ. ಯಾರೋ ಒಬ್ಬರು ಹೇಳಿರುವುದರಿಂದ ನಾಯಕತ್ವ ಬದಲಾವಣೆ ಆಗಲ್ಲ: ಸಚಿವ ಬಿ.ಸಿ.ಪಾಟೀಲ್‌

Minister B C Patil Talks Over Former CM Siddaramaiah grg

ಹಾವೇರಿ(ನ.02): ಮನುಷ್ಯರನ್ನ, ನಾಯಿಗೆ ಟಗರಿಗೆ, ಬಂಡೆಗೆ ಹೋಲಿಸೋದು ಇದ್ಯಾವ ಸಂಸ್ಕೃತಿ?, ಈ ರೀತಿ ಮಾತನಾಡುವುದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಂಸ್ಕೃತಿ ಅಲ್ಲ. ಕುಮಾರಸ್ವಾಮಿ ಸಿಎಂ ಇದ್ದಿದ್ರೆ ಇನ್ನು ಸಹ ಬಾಡಿಗೆ ಮನೆಯಲ್ಲಿ ಇರಬೇಕಾಗುತ್ತಿತ್ತು. ಯಡಿಯೂರಪ್ಪ ಸಿಎಂ ಆಗಿದ್ದಕ್ಕೆ ವಿಪಕ್ಷ ನಾಯಕರಾಗಿದ್ದಾರೆ ಎಂದು ಸಚಿವ ಬಿ.ಸಿ.ಪಾಟೀಲ್‌ ಟಾಂಗ್‌ ಕೊಟ್ಟಿದ್ದಾರೆ. 

ಇಂದು(ಸೋಮವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವು 17 ಜನ ಬಿಜೆಪಿಗೆ ಬಂದಿದ್ದರಿಂದ ಸಿದ್ದರಾಮಯ್ಯ ವಿಪಕ್ಷ ನಾಯಕರಾಗಿದ್ದಾರೆ. ವಿಪಕ್ಷ ನಾಯಕ ಸ್ಥಾನ ಅಲ್ಲಾಡುತ್ತೋ ಅನ್ನೋ ಭಯ ಇದೆ. ಡಿಕೆಶಿ ಹೇಳಿದ್ರು ನಾವೆಲ್ಲಾ ರಾಜಕೀಯ ಸಮಾಧಿ ಆಗುತ್ತೇವೆ ಅಂತ. ಆದ್ರೆ ನಾವೆಲ್ಲಾ ಯಾರೂ ರಾಜಕೀಯವಾಗಿ ಸಮಾಧಿಯಾಗಲಿಲ್ಲ. ಬೇರೆಯವರನ್ನ ರಾಜಕೀಯವಾಗಿ ನಿರ್ನಾಮ‌ ಮಾಡುವುದೇ ಸಿದ್ದರಾಮಯ್ಯ, ಡಿಕೆಶಿ ಅವರ ಸಂಸ್ಕೃತಿಯಾಗಿದೆ ಎಂದು ಉಭಯ ನಾಯಕರ ವಿರುದ್ಧ ಸಚಿವರು ಹರಿಹಾಯ್ದಿದ್ದಾರೆ. 

'ಸಿದ್ದರಾಮಯ್ಯ, ಡಿಕೆಶಿ ಪರಸ್ಪರ ಮುಗಿಸಲು ಕಾಯುತ್ತಿದ್ದಾರೆ'

ನಾಯಿಗಳಲ್ಲಿಯೂ ನಿಯತ್ತು ಇರುತ್ತೆ. ಇವರ ಸಾಕಿರೋ ನಾಯಿಗಳು ಕಚ್ಚೋ ನಾಯಿಗಳಾಗಿವೆ. ನಾಯಿ ಎಂಬ ಪದ ಬಳಿಸಿದ್ದು ಅವರ ಘನತೆಗೆ ತಕ್ಕುದಲ್ಲ ಎಂದು ತಿಳಿಸಿದ್ದಾರೆ. ನಾಯಕತ್ವ ಬದಲಾವಣೆಗೆ ಕುರಿತಂತೆ ಪ್ರತಿಕ್ರಿಯೆ ನೀಡಿದ ಸಚಿವ ಬಿ.ಸಿ.ಪಾಟೀಲ್‌ ಅವರು,  ಯಡಿಯೂರಪ್ಪನವರ ನಾಯಕತ್ವ ಬದಲಾಗುವ ಮಾತೇ ಇಲ್ಲ, ಅವರನ್ನ ಅಲ್ಲಾಡಿಸೋದು ಯಾರಿಂದಲೂ ಸಾಧ್ಯವಿಲ್ಲ. ಮುಂದಿನ ಎಲ್ಲ ಚುನಾವಣೆಗಳು ಯಡಿಯೂರಪ್ಪನವರ ನೇತೃತ್ವದಲ್ಲಿಯೇ ಆಗುತ್ತೆವೆ. ಯಾರೋ ಒಬ್ಬರು ಹೇಳಿರುವುದರಿಂದ ನಾಯಕತ್ವ ಬದಲಾವಣೆ ಆಗಲ್ಲ. ಪಕ್ಷದ ವರಿಷ್ಠರು ಇಲ್ಲಿಯವರೆಗೂ ಈ ಬಗ್ಗೆ ಮಾತನಾಡಿಲ್ಲ. ಅವರ ನಾಲಿಗೆ ಚಟಕ್ಕೆ‌ ಪ್ರಚಾರದ ಗೀಳಿಗಾಗಿ ಹೀಗೆ ಮಾತನಾಡುತ್ತಿದ್ದಾರೆ ಎಂದು ಪರೋಕ್ಷವಾಗಿಯೇ ಬಸವನಗೌಡ ಯತ್ನಾಳಗೆ ಟಾಂಗ್ ಕೊಟ್ಟಿದ್ದಾರೆ. 

ಸಿರಾ, ಆರ್‌ಆರ್ ನಗರವನ್ನು ಬಹಳ ದೊಡ್ಡ ಮಟ್ಟದ ಅಂತರದಲ್ಲಿ ಗೆಲ್ಲುತ್ತೇವೆ. ಯಡಿಯೂರಪ್ಪ ಹಾಗೂ ಮೋದಿ ಅವರ ಕೆಲಸ ನೋಡಿ ನಮ್ಮ ಅಭ್ಯರ್ಥಿಗಳನ್ನು ಗೆದ್ದೆ ಗೆಲ್ಲಿಸುತ್ತಾರೆ. ಸಿರಾದಲ್ಲಿಯೂ ಬಿಜೆಪಿ ಅಕೌಂಟ್‌ ಓಪನ್‌ ಮಾಡುತ್ತೆ ಎಂದು ತಿಳಿಸಿದ್ದಾರೆ. 
 

Latest Videos
Follow Us:
Download App:
  • android
  • ios