*   ನಿಧಿ ಆಸೆಗಾಗಿ ತೆರವುಗೊಳಿಸಲಾಗಿದೆ ಎಂಬುದು ಸುಳ್ಳು ವದಂತಿ*   ಸ್ಥಳಕ್ಕೆ ಭೇಟಿ ನೀಡಿದ ನಂತರ ಹೆಚ್ಚಿನ ಮಾಹಿತಿ ನೀಡುವೆ ಎಂದ ಸಿಂಗ್‌*   ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್‌ ಸಮರ್ಥನೆ 

ಗಂಗಾವತಿ(ಮೇ.29):  ತಾಲೂಕಿನ ಪಂಪಾಸರೋವದ ವಿಜಯಲಕ್ಷ್ಮೀ ದೇವಸ್ಥಾನದ ವಿಗ್ರಹ ಮತ್ತು ಗರ್ಭಗುಡಿ ತೆರವುಗೊಳಿಸಿರುವುದು ಶಾಸೊತ್ರೕಕ್ತವಾಗಿದೆ ಎಂದು ಪ್ರವಾಸೋದ್ಯಮ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್‌ ಸಮರ್ಥಿಸಿಕೊಂಡರು.

ಶನಿವಾರ ನಗರದಲ್ಲಿ ಆಯೋಜಿಸಿದ್ದ ‘ಅಮೃತ ಭಾರತಿಗೆ ಕನ್ನಡದಾರತಿ’ ಕಾರ್ಯಕ್ರಮದಲ್ಲಿ ಭಾಗವಹಿಸುವ ಮುನ್ನ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪಂಪಾ ಸರೋವರದಲ್ಲಿರುವ ವಿಜಯಲಕ್ಷ್ಮೀ ದೇವಸ್ಥಾನ ಐತಿಹಾಸಿಕವಾಗಿದೆ. ಈ ದೇವಸ್ಥಾನದ ಜಿರ್ಣೋದ್ಧಾರವನ್ನು ಸಚಿವ ಶ್ರೀರಾಮುಲು ಕೈಗೆತ್ತಿಗೊಂಡಿದ್ದಾರೆ. ಅಲ್ಲಿ ಏನೇ ಕೆಲಸ ಮಾಡಿದರೂ ಸಂಬಂಧಪಟ್ಟ ಇಲಾಖೆಯ ಅನುಮತಿ ಪಡೆದು ಕಾಮಗಾರಿ ಮಾಡುತ್ತಿದ್ದಾರೆಂದು ಸಮರ್ಥಿಸಿಕೊಂಡರು.

ಮುಸ್ಲಿಂರು ನಮ್ಮ ಅಣ್ಣ ತಮ್ಮಂದಿರು ಇದ್ದಂತೆ: ಸಂಸದ ಕರಡಿ

ಗರ್ಭಗುಡಿ ಮತ್ತು ಮೂಲ ದೇವರ ವಿಗ್ರಹಕ್ಕೆ ಧಕ್ಕೆ ಬಾರದಂತೆ ಇಲಾಖೆ ಸೂಚನೆ ನೀಡಿದ್ದರೂ ಇದನ್ನು ಉಲ್ಲಂಘಿಸಿ ಗರ್ಭಗುಡಿ ಕಿತ್ತಿದ್ದಾರೆ ಎನ್ನುವ ಪ್ರಶ್ನೆಗೆ ಯಾವುದೇ ಸಂಬಂಧವಿಲ್ಲ. ಎಲ್ಲದಕ್ಕೂ ಅನುಮತಿ ಇದೆ ಎಂದು ಹೇಳಿ ಮಾತಿನಿಂದ ಜಾರಿಕೊಂಡರು. ನಿಧಿ ಆಸೆಗಾಗಿ ತೆರವುಗೊಳಿಸಲಾಗಿದೆ ಎಂಬುದು ಸುಳ್ಳು ವದಂತಿ. ಸ್ಥಳಕ್ಕೆ ಭೇಟಿ ನೀಡಿದ ನಂತರ ಹೆಚ್ಚಿನ ಮಾಹಿತಿ ನೀಡುವೆ ಎಂದರು. ಕೆಲವರು ನಿಧಿಗಾಗಿ ಸಂಶಯ ಎನ್ನುವ ಅರೋಪ ಮಾಡಿದ್ದಾರೆ ಎನ್ನುವುದಕ್ಕೆ ನನ್ನ ಮೇಲೂ ಕೆಲವರು ಅನುಮಾನ ಮಾಡುತ್ತಾರೆ. ಏನು ಮಾಡುವುದು? ಎಂದು ಹಾರಿಕೆಯ ಉತ್ತರ ನೀಡಿದರು. ಈ ಸಂದರ್ಭದಲ್ಲಿ ಶಾಸಕ ಪರಣ್ಣ ಮುನವಳ್ಳಿ ಇದ್ದರು.