ಕುಣಿಗಲ್‌ನಲ್ಲಿ ರಾಗಿ ಖರೀದಿ ಘಟಕ ಆರಂಭ
ರಾಗಿ ಖರೀದಿಗೆ ಸರ್ಕಾರ 3846 ರು.ಗಳನ್ನು ನಿಗದಿಪಡಿಸಿದ್ದು ರೈತರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಶಾಸಕ ಡಾ.ರಂಗನಾಥ್ ತಿಳಿಸಿದ್ದಾರೆ.
ಕುಣಿಗಲ್: : ರಾಗಿ ಖರೀದಿಗೆ ಸರ್ಕಾರ 3846 ರು.ಗಳನ್ನು ನಿಗದಿಪಡಿಸಿದ್ದು ರೈತರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಶಾಸಕ ಡಾ.ರಂಗನಾಥ್ ತಿಳಿಸಿದ್ದಾರೆ.
ಕುಣಿಗಲ್ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಕೇಂದ್ರದಲ್ಲಿ ರಾಗಿ ಖರೀದಿ ಘಟಕವನ್ನು ಉದ್ಘಾಟನೆ ಮಾಡಿ ಶಾಸಕ ಡಾ. ರಂಗನಾಥ್ ಮಾತನಾಡಿದರು.
ಕಳೆದ ಬಾರಿಗಿಂತ 201 ರು. ಗಳನ್ನು ಈ ಬಾರಿ ಹೆಚ್ಚಿಸಲಾಗಿದೆ. ರೈತರು ಸದುಪಯೋಗ ಪಡಿಸಿಕೊಂಡು ಸಂಬಂಧಪಟ್ಟ ದಾಖಲಾತಿಗಳ ಒದಗಿಸಿ ರಾಗಿ ಮಾರಾಟ ಮಾಡುವಂತೆ ಸಲಹೆ ನೀಡಿದರು.
ಮುಂದಿನ ಜನವರಿ ಒಂದರಿಂದ ಮಾರ್ಚ್ 31ರವರೆಗೆ ರಾಗಿ ಖರೀದಿ ಮಾಡಲು ಅವಕಾಶ ಕೊಡಲಾಗಿದೆ. ಈ ಸಾಲಿನಲ್ಲಿ ರಾಜ್ಯದಲ್ಲಿ ಎಂಟು ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ. ಈ ಬಾರಿ ಬಯೋಮೆಟ್ರಿಕ್ ವ್ಯವಸ್ಥೆ ಜಾರಿ ಮಾಡಲಾಗಿದೆ. ರೈತರೇ ನೇರವಾಗಿ ಬಂದು ರಾಗಿ ಮಾರಾಟ ಮಾಡಬೇಕಿದೆ ಎಂದರು.
ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ಶ್ರೀಧರ್ ಆಹಾರ ಶಿರಸ್ತೇದಾರ್ ರಾಜು ಖರೀದಿ ಅಧಿಕಾರಿಗಳಾದ ಕೃಷ್ಣಮೂರ್ತಿ ಸಹಾಯಕ ಕೃಷಿ ನಿರ್ದೇಶಕ ರಂಗನಾಥ್, ಸೇರಿದಂತೆ ಹಲವರು ಅಧಿಕಾರಿಗಳು ಇದ್ದರು