Asianet Suvarna News Asianet Suvarna News

ಬೆಂಗ್ಳೂರಿನಲ್ಲಿ ಮತ್ತೊಂದು ಭೀಕರ ಅಪಘಾತ, ಈ ಬಾರಿ ಸಿಎಂ ಮನೆಯ ಬಳಿ!

  • ಕಂಟೈನರ್ ಹಾಗೂ ಅಂಬ್ಯುಲೆನ್ಸ್ ನಡುವೆ ಭೀಕರ ಅಪಘಾತ 
  • ಅಪಘಾತದ ರಭಸಕ್ಕೆ  ಕಂಟೈನರ್ ಡಿವೈಡರ್ ಮೇಲೆ ಪಲ್ಟಿ
Milk container collide into Ambulance in Bengaluru snr
Author
Bengaluru, First Published Sep 19, 2021, 9:42 AM IST
  • Facebook
  • Twitter
  • Whatsapp

ಬೆಂಗಳೂರು (ಸೆ.19):  ಕಂಟೈನರ್ ಹಾಗೂ ಅಂಬ್ಯುಲೆನ್ಸ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು ರಭಸಕ್ಕೆ  ಕಂಟೈನರ್ ಡಿವೈಡರ್ ಮೇಲೆ ಪಲ್ಟಿಯಾಗಿದೆ. 

ಅಂಬ್ಯುಲೇನ್ಸ್ ಗೆ ಟಚ್ ಆಗುತ್ತದೆ ಎಂದು ಬಲಭಾಗಕ್ಕೆ  ಕಂಟೈನರ್ ಚಾಲಕ  ಬಂದಿದ್ದು, ಈ ವೇಳೆ ನಿಯಂತ್ರಣ ತಪ್ಪಿ ಡಿವೈಡರ್ ಮೇಲೆ ಕಂಟೈನರ್ ಪಲ್ಟಿಯಾಗಿ ಬಿದ್ದಿದೆ.

ನಂದಿನಿ ಹಾಲು ಸರಬರಾಜು ಮಾಡುವ ಕಂಟೈನರ್ ಲಾರಿ ಅಪಗಾತಕ್ಕೆ ಈಡಾಗಿದೆ. ಆದರೆ ಈ ವೇಳೆ ಅದೃಷ್ಟವಶಾತ್ ಯಾವುದೇ ಸಾವು ಸಂಭವಿಸಿಲ್ಲ.

ಆಂಬ್ಯುಲೆನ್ಸ್ ಮತ್ತು ಕಂಟೈನರ್ ಚಾಲಕರಿಬ್ಬರಿಗೂ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಿಎಂ ಬಸವರಾಜ್ ಬೊಮ್ಮಾಯಿ ನೂತನ  ನಿವಾಸದ ಕೂಗಳತೆ ದೂರದಲ್ಲಿ ನಡೆದಿರೋ ಘಟನೆ.

ರೇಸ್ ಕೋರ್ಸ್ ರಸ್ತೆಯ ಖಾಸಗಿ ಹೋಟೆಲ್ ಮುಂದೆಯೇ ಅಪಘಾತ ನಡೆದಿದ್ದು, ರೇಸ್ ಕೋರ್ಸ್ ರಸ್ತೆಯ ಒಂದು ಭಾಗದ ರಸ್ತೆಗೆ ಟಾರ್ ಹಾಕುವ ಕಾರ್ಯ ನಡೆಯುತ್ತಿದೆ.  ಹಾಗಾಗಿ ಮತ್ತೊಂದು ಭಾಗದ ರಸ್ತೆಯನ್ನ ದ್ವಿಮುಖ ಮಾರ್ಗವಾಗಿ ಮಾಡಿದ್ದಾರೆ. ಒನ್ ವೇ ಎಂದು ಎಂದಿನಂತೆ ಹೋಗುತ್ತಿದ್ದ ಕಂಟೈನರ್ ಚಾಲಕ ಮುಂದೆ ಆಂಬ್ಯುಲೆನ್ಸ್ ಟಿಟಿ ಬಂದಿರೋದನ್ನ ನೋಡಿ ಅಪಘಾತ‌ ತಪ್ಪಿಸಲು ಹೋಗಿ ಈ ಅವಘಡವಾಗಿದೆ. 

ಅಪಘಾತವಾದ ಬಳಿಕ ಮತ್ತೊಂದು ಕಂಟೈನರ್ ಕರೆಸಿ ಹಾಲನ್ನ ಶಿಫ್ಟ್ ಮಾಡಲಾಗಿದೆ. ಹೈಗ್ರೌಂಡ್ಸ್ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Follow Us:
Download App:
  • android
  • ios