Asianet Suvarna News Asianet Suvarna News

ಕನಕಪುರ ಬಳಿ ಮಿಲಿಟರಿ ಜೀವಂತ ಶೆಲ್‌ಗಳು ಪತ್ತೆ

ಶೆಲ್‌ಗಳು ನೀರಿನಲ್ಲಿ ಇರುವ ಕಾರಣ ಇವುಗಳ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ| ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಾತನೂರು ಪೊಲೀಸರು| ಇವು ಸೈನ್ಯದಲ್ಲಿ ಬಳಸುವ ಶೆಲ್‌ಗಳು ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ| ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಸಂಗಮದ ಸಮೀಪ ಅರ್ಕಾವತಿ ನದಿಯಲ್ಲಿ ಪತ್ತೆ| 

Military Shells found in Kanakapura in Ramanagar District grg
Author
Bengaluru, First Published Dec 18, 2020, 9:14 AM IST

ರಾಮನಗರ(ಡಿ.18): ಜಿಲ್ಲೆ ಕನಕಪುರ ತಾಲೂಕಿನ ಸಂಗಮದ ಸಮೀಪ ಅರ್ಕಾವತಿ ನದಿಯಲ್ಲಿ ಸೈನ್ಯದಲ್ಲಿ ಬಳಕೆ ಮಾಡಲಾಗುವ ಜೀವಂತ ಶೆಲ್‌ಗಳು ಪತ್ತೆಯಾಗಿವೆ. 

ಗುರುವಾರ ಸಂಜೆಯ ವೇಳೆ ಈ ಸ್ಥಳದಲ್ಲಿ ದನ ಮೇಯಿಸುತ್ತಿದ್ದ ದನಗಾಯಿಯೊಬ್ಬರಿಗೆ ಅನುಮಾನಾಸ್ಪದ ವಸ್ತು ಕಂಡು ಬಂದ ಹಿನ್ನೆಲೆಯಲ್ಲಿ ಸಾತನೂರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಸಾತನೂರು ಪೊಲೀಸರು ಭೇಟಿ ನೀಡಿದಾಗ ಇದು ಸೈನ್ಯದಲ್ಲಿ ಬಳಸುವ ಶೆಲ್‌ಗಳು ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ. 

'ದೂರು ನೀಡಲು ಹೋದ ಮಹಿಳೆ ಬಳಿ PSI ಹಿಂಗಾ ನಡೆದುಕೊಳ್ಳೋದು'

ಶೆಲ್‌ಗಳು ನೀರಿನಲ್ಲಿ ಇರುವ ಕಾರಣ ಇವುಗಳ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಕತ್ತಲಾದ ಹಿನ್ನೆಲೆಯಲ್ಲಿ ಶೆಲ್‌ಗಳನ್ನು ಹಾಗೇ ನದಿಯಲ್ಲೇ ಬಿಟ್ಟಿದ್ದು, ಶುಕ್ರವಾರ ಬಾಂಬ್‌ ನಿಷ್ಕ್ರೀಯ ದಳದ ನೆರವಿನೊಂದಿಗೆ ಈ ಶೆಲ್‌ಗಳನ್ನು ಹೊರತೆಗೆಯುವ ಕಾರ್ಯವನ್ನು ಕೈಗೊಳ್ಳಲಿರುವುದಾಗಿ ಪೊಲೀಸ್‌ ಮೂಲಗಳು ಮಾಹಿತಿ ನೀಡಿವೆ.

ಕೆಲ ತಿಂಗಳ ಹಿಂದೆ ಇದೇ ರೀತಿ ಸೈನ್ಯಕ್ಕೆ ಬಳಕೆ ಮಾಡುವ ಶೆಲ್‌ಗಳು ಸಂಗಮ ಸಮೀಪ ಪತ್ತೆಯಾಗಿದ್ದವು. ಇದೀಗ ಮತ್ತೆ ಪತ್ತೆಯಾಗಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಕೆಲವರ್ಷಗಳ ಹಿಂದೆ ಈ ಪ್ರದೇಶದಲ್ಲಿ ಮಿಲಿಟರಿ ತಂಡವೊಂದು ಯುದ್ಧ ತರಬೇತಿ ನಡೆಸಿದ್ದು, ಈ ಸಮಯದಲ್ಲಿ ಶೆಲ್‌ಗಳನ್ನು ಅವರು ಇಲ್ಲಿ ಬಿಟ್ಟು ಹೋಗಿರಬಹುದೆಂದು ಶಂಕಿಸಲಾಗಿದೆ.
 

Follow Us:
Download App:
  • android
  • ios