ಮಣ್ಣು ತೆಗೆಯುವ ವೇಳೆ ಗಾಯಗೊಂಡ ನಾಗರ ಹಾವಿಗೆ ಚಿಕಿತ್ಸೆ
ಜೆಸಿಬಿ ಯಂತ್ರದಿಂದ ಮಣ್ಣು ತೆಗೆಯುವ ವೇಳೆ ಗಾಯಗೊಂಡ ನಾಗರ ಹಾವು| ಹಾವಿಗೆ ಪಶು ವೈದ್ಯರಿಂದ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದ ಜನರು| ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಉಂಟೂರು ಕಟ್ಟೆಬಳಿಯ ಶೆಟ್ಟಿಗಳ ಕೊಪ್ಪ ಗ್ರಾಮದಲ್ಲಿ ನಡೆದ ಘಟನೆ| ಚಿಕಿತ್ಸೆ ಬಳಿಕ ಹಾವನ್ನು ಮರಳಿ ಕಾಡಿಗೆ ಬಿಡಲಾಯಿತು|
ತೀರ್ಥಹಳ್ಳಿ(ಏ.22): ಜೆಸಿಬಿ ಯಂತ್ರದಿಂದ ಮಣ್ಣು ತೆಗೆಯುವ ವೇಳೆ ಗಾಯಗೊಂಡ ನಾಗರ ಹಾವಿಗೆ ಪಶು ವೈದ್ಯರಿಂದ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಉಂಟೂರು ಕಟ್ಟೆಬಳಿಯ ಶೆಟ್ಟಿಗಳ ಕೊಪ್ಪ ಗ್ರಾಮದಲ್ಲಿ ನಡೆದಿದೆ.
ಸತ್ಯವತಿ ಮಾನಪ್ಪ ಹೆಗಡೆ ಎಂಬುವವರು ಮನೆಯಲ್ಲಿ ಜೆಸಿಬಿ ಯಂತ್ರದಲ್ಲಿ ಮಣ್ಣು ತೆಗೆಯುವ ವೇಳೆಯಲ್ಲಿ ಮಣ್ಣಿನ ಅಡಿಯಲ್ಲಿದ್ದ ನಾಗರ ಹಾವಿಗೆ ತೀವ್ರ ಗಾಯವಾಗಿತ್ತು. ಆಕಸ್ಮಿಕವಾಗಿ ನಾಗರ ಹಾವಿಗೆ ಗಾಯವಾದ ಹಿನ್ನೆಲೆಯಲ್ಲಿ ಚಿಕಿತ್ಸೆ ನೀಡಲು ಪಶುವೈದ್ಯ ಯುವರಾಜ ಹೆಗ್ಡೆ ಬಳಿ ಸತ್ಯವತಿ ಕುಟುಂಬ ಕೋರಿತು.
ಗಬ್ಬದ ಹಸು ಕಾಲು ಕಡಿದು ಕಸಾಯಿಖಾನೆಗೆ ಸಾಗಿಸಲು ಯತ್ನಿಸಿದ ಪಾಪಿ
ಹಲವಾರು ತಜ್ಞ ವೈದ್ಯರೊಂದಿಗೆ ಸಮಾಲೋಚನೆ ಮಾಡಿ, ಅಗತ್ಯ ಮಾಹಿತಿಗಳನ್ನು ಮತ್ತು ಚಿಕಿತ್ಸಾ ವಿಧಾನಗಳನ್ನು ಚರ್ಚಿಸಿ ಸ್ಥಳಕ್ಕೆ ಭೇಟಿ ನೀಡಿದ ಯುವರಾಜ್ ಹೆಗ್ಡೆ ಉರಗ ತಜ್ಞ ಮಾರುತಿ ನೆರವಿನೊಂದಿಗೆ ಹಾವಿಗೆ ಅರಿವಳಿಕೆ ನೀಡಿ ಹಾವಿಗೆ ಚಿಕಿತ್ಸೆ ನೀಡಿದರು. ನಂತರ ಹಾವನ್ನು ಕಾಡಿಗೆ ಬಿಡಲಾಯಿತು.