ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಮತ್ತೊಬ್ಬ ಬಾಣಂತಿ ಸಾವು: ಸಾವಿನ ಸಂಖ್ಯೆ 5ಕ್ಕೇರಿಕೆ

ಬಳ್ಳಾರಿ ಜಿಲ್ಲೆಯ ಕೂಡ್ಲಗಿ ಪಟ್ಟಣದ ಸುಮಯ್ಯ ಎಂಬುವರು ಮೃತ ಬಾಣಂತಿ. ಇವರು ಬಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. 
 

Maternal Death Toll Rise to 5th in Ballari District Hospital grg

ಬಳ್ಳಾರಿ(ಡಿ.06): ಬಾಣಂತಿಯರ ಸಾವಿನಿಂದ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಗುರುವಾರ ಮತ್ತೊಂದು ಬಾಣಂತಿಯ ಸಾವು ಸಂಭವಿಸಿದೆ. ಇದರಿಂದಾಗಿ ನವೆಂಬರ್ 10ರ ನಂತರ ಆಸ್ಪತ್ರೆಯಲ್ಲಿ ಮೃತಪಟ್ಟ ಬಾಣಂತಿಯರ ಸಾವಿನ ಸಂಖ್ಯೆ 5ಕ್ಕೆ ಏರಿದೆ.     

ಕೂಡ್ಲಗಿ ಪಟ್ಟಣದ ಸುಮಯ್ಯ (24) ಎಂಬುವರು ಮೃತ ಬಾಣಂತಿ. ಇವರು ಬಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ನಿತ್ಯ ಡಯಾಲಿಸಿಸ್ ಮಾಡಲಾಗುತ್ತಿತ್ತು. ಗುರುವಾರ ತೀವ್ರ ತೊಂದರೆಯಾದ ಹಿನ್ನೆಲೆಯಲ್ಲಿ ಸಾವಾಗಿದೆ. 

ಬಳ್ಳಾರಿ ಬಾಣಂತಿಯರ ಸಾವಿನ ತನಿಖಾ ವರದಿಯೂ ಬಂತು; ಆದ್ರೂ ಸಚಿವ ಜಮೀರ್ ಬರಲಿಲ್ಲ!c

ಜಿಲ್ಲಾಸ್ಪತ್ರೆಯಲ್ಲಿ ನವೆಂಬರ್ 10ರಂದು ಏಳು ಬಾಣಂತಿಯರ ಹೆರಿಗೆಯಾಗಿತ್ತು. ಇದರಲ್ಲಿ ನಾಲ್ವರು ಸಾವನ್ನಪ್ಪಿದ್ದು ಇದೀಗ ಮತ್ತೊಬ್ಬರು ಸಾವನ್ನಪ್ಪಿದ್ದಾರೆ. ಇನ್ನುಳಿದ ಇಬ್ಬರು ಡಿಸ್ಟಾರ್ಜ್‌ ಆಗಿದ್ದಾರೆ. ಇದಕ್ಕೂ ಮೊದಲು ರೋಜಾ ಎಂಬುವರು ನ.20 ರಂದು, ನಂದಿನಿ ಮತ್ತು ಲಲಿತಮ್ಮ ಎಂಬು ವರುನ.12ರಂದು, ಮುಸ್ಕಾನ್ ಎಂಬುವರು 23ರಂದು ಮೃತಪಟ್ಟಿದ್ದರು.

ಬಳ್ಳಾರಿ ಬಾಣಂತಿಯರ ಸಾವು ಪ್ರಕರಣ: ಆಸ್ಪತ್ರೆಗಳಲ್ಲಿ 'ರಿಂಗ‌ರ್' ಗ್ಲುಕೋಸ್ ಬಳಕೆಗೆ ಬ್ರೇಕ್

ಬೆಂಗಳೂರು:  ಬಳ್ಳಾರಿಯಲ್ಲಿ ಬಾಣಂತಿಯರ ಸಾವು ಪ್ರಕರಣ ಸಂಭವಿಸಿರುವ ಹಿನ್ನೆಲೆಯಲ್ಲಿ ಮುಂಜಾಗ್ರತೆ ಕ್ರಮವಾಗಿ ರಾಜ್ಯಾ ದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ ರಿಂಗರ್‌ಲ್ಯಾಕ್ಟೇಟ್ ಐವಿ ದ್ರಾವಣ (ಗ್ಲುಕೋಸ್) ಬಳಕೆಯನ್ನು ತಡೆ ಹಿಡಿಯಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದರು. 

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐವಿ ದ್ರಾವಣದಿಂದಲೇ ಸಾವು ಸಂಭವಿಸಿದೆಯೇ ಎಂಬುದು ಇನ್ನೂ ಖಚಿತವಾಗಿಲ್ಲ. ಆದರೆ ಈ ಬಗ್ಗೆ ಅನುಮಾನಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಮುಂಜಾಗ್ರತೆಯ ದೃಷ್ಟಿಯಿಂದ ಈ ಕೈಗೊಳ್ಳಲಾಗಿದೆ. ಅನಾಹುತಕ್ಕೆ ದ್ರಾವಣ ಕಾರಣವೇ ಎಂಬ ಬಗ್ಗೆ ಅನರೋಬಿಕ್ ಟೆಸ್ಟ್ ವರದಿ ಬಳಿಕ ಸ್ಪಷ್ಟತೆ ಸಿಗಲಿದೆ. ಮುಂದಿನ ವಾರ ವರದಿ ಬರಬಹುದು ಎಂದಿದ್ದರು. 

ಬಾಣಂತಿಯರ ಸರಣಿ ಸಾವಿಗೆ ನ್ಯಾಯ ಸಿಗುತ್ತಾ? ದಿನೇಶ್ ಗುಂಡೂರಾವ್ ನಡೆಸಿದ ಸಭೆಯಲ್ಲಿ ಆಗಿದ್ದೇನು?

ರಿಂಗರ್‌ಲ್ಯಾಕ್ಟೇಟ್ ಗ್ಲುಕೋಸ್ ಅನ್ನು ಈ ಹಿಂದಿನಿಂದಲೂ ಆಸ್ಪತ್ರೆಗಳಲ್ಲಿ ಬಳಕೆ ಮಾಡಲಾಗುತ್ತಿತ್ತು. ಎಂದಿನಂತೆ ಬಾರಿಯೂ ಔಷಧ ಸರಬರಾಜು ನಿಗಮಕ್ಕೆ 192 ಬ್ಯಾಚ್‌ಗಳಲ್ಲಿ ಐವಿ ದ್ರಾವಣ ಪೂರೈಕೆಯಾಗಿತ್ತು. ಇದರ ಬಳಕೆ ಸಂದರ್ಭದಲ್ಲಿ ಎರಡು ಬ್ಯಾಚ್ ಗಳ ಬಗ್ಗೆ ಕೆಲವು ಅನುಮಾನಗಳು ವ್ಯಕ್ತವಾದಾಗ ಮುಂಜಾಗ್ರತೆ ದೃಷ್ಟಿಯಿಂದ ಸಂಪೂರ್ಣವಾಗಿ ಎಲ್ಲ 192 ಬ್ಯಾಚ್‌ಗಳ ದ್ರಾವಣವನ್ನು ಆಸ್ಪತ್ರೆಗಳಲ್ಲಿ ಬಳಸದಂತೆ ತಡೆಹಿಡಿಯಲಾಗಿತ್ತು ಎಂದು ಹೇಳಿದ್ದರು. 
ಆದರೂ ಘಟನೆ ಹೇಗೆ ನಡೆಯಿತು ಎಂಬ ಪ್ರಶ್ನೆಗೆ, ಆ ಬಳಿಕ ಕಂಪನಿಯವರು ಹೈಕೋಟ್ ಕ್ರಮರ್ ನಿಂದ ಆದೇಶ ಪಡೆದ ಹಿನ್ನೆಲೆ ಡ್ರಗ್ ಲ್ಯಾಬೋರೇಟರಿಯಲ್ಲಿ ಪರೀಕ್ಷೆ ನಡೆಸಲಾಯಿತು. ಈ ವೇಳೆ ದ್ರಾವಣ ಬಳಸಬಹುದು ಎಂಬ ವರದಿ ಬಂತು. ಸಿ.ಡಿ.ಎಲ್. ವರದಿ ಆಧಾರದ ಮೇಲೆ ರಾಜ್ಯದಲ್ಲಿ ತಜ್ಞರ ತಾಂತ್ರಿಕ ಸಮಿತಿ ರಚಿಸಿ ಮತ್ತೊಮ್ಮೆ ಪರೀಕ್ಷಿಸಿ ಸ್ಟಾಂಡರ್ಡ್ ಕ್ವಾಲಿಟಿಯ ಕೆಲವು ಬ್ಯಾಚ್‌ಗಳ ದ್ರಾವಣವನ್ನು ಬಳಸಲು ಅವಕಾಶ ಮಾಡಿಕೊಡಲಾಗಿತ್ತು. ಹಲವು ಸರ್ಕಾರಿ ಆಸ್ಪತ್ರೆಗಳಲ್ಲಿ ದ್ರಾವಣದ ಬಳಕೆಯಾಗಿದ್ದು, ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಮಾತ್ರ ಈ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ. ತಿಮ ವರದಿ ಬಳಿಕವಷ ಖ ಹೀಗಾಗಿ ಅಂತಿಮ ವರದಿ ಬಳಿಕವಷ್ಟೇ ಖಚಿತ ಮಾಹಿತಿ ತಿಳಿಯಲಿದೆ ಎಂದು ಹೇಳಿದ್ದರು. 

ಅನರೋಬಿಕ್ ಟೆಸ್ಟ್‌ನಲ್ಲಿ ಸ್ಪಷ್ಟತೆ: 

ಬಳ್ಳಾರಿ ಆಸ್ಪತ್ರೆಗೆ ಪೂರೈಕೆಯಾದ ಬ್ಯಾಚ್‌ಗಳನ್ನು ಅನರೋಬಿಕ್ ಟೆಸ್ಟ್‌ಗೆ ಕಳುಹಿಸಲಾಗಿದೆ. ಬಾಣಂತಿಯರ ಸಾವಿಗೆ ಐವಿ ದ್ರಾವಣವೂ ಒಂದು ಕಾರಣವಾಗಿರಬಹುದಾ ಅಥವಾ ಇಲ್ಲವಾ? ಎಂಬುದರ ಬಗ್ಗೆ ಆನರೋಬಿಕ್ ಪರೀಕ್ಷೆಯಲ್ಲಿ ಸ್ಪಷ್ಟತೆ ಸಿಗಲಿದೆ. ಬಳಿಕ ಐವಿ ದ್ರಾವಣ ಬಳಕೆ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಅಲ್ಲಿಯವರೆಗೆ ಮುಂಜಾಗ್ರತ ಕ್ರಮವಾಗಿ ಐವಿ ರಿಂಗರ್ ಲ್ಯಾಕ್ಟೇಟ್ ಬಳಕೆಯನ್ನು ರಾಜ್ಯಾದ್ಯಂತ ತಡೆ ಹಿಡಿಯಲಾಗಿದೆ ನೀಡಿದ್ದರು. 

Latest Videos
Follow Us:
Download App:
  • android
  • ios