ಕೊಪ್ಪಳ: ಸಿಜೇರಿಯನ್ ಹೆರಿಗೇಲಿ ಮಗು ಸಾವು, 2 ತಾಸಲ್ಲಿ ತಾಯಿಯೂ ಮೃತ!

ಕುಷ್ಟಗಿಯಲ್ಲಿ ವೈದ್ಯರು ಸರಿಯಾಗಿ ಚಿಕಿತ್ಸೆ ನೀಡಿದ್ದರೆ ಸ್ಥಳೀಯವಾಗಿಯೇ ತಾಯಿ, ಮಗುವಿಗೆ ತೊಂದರೆ ಆಗುತ್ತಿರಲಿಲ್ಲ. ಆದರೆ ಅಲ್ಲಿಯ ವೈದ್ಯರು ಚಿಕಿತ್ಸೆ ನೀಡದೆ ಕೊಪ್ಪಳಕ್ಕೆ ಕಳುಹಿಸಿದರು. ಇಲ್ಲಿ ಬಂದರೆ ಇಲ್ಲಿನ ವೈದ್ಯರು ತಾಯಿ, ಮಗುವಿನ ಜೀವ ಉಳಿಸದೆ ನಿರ್ಲಕ್ಷ್ಯದಿಂದ ಬಾಣಂತಿ, ಮಗು ಸಾವಿಗೆ ಕಾರಣವಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಕುಟುಂಬಸ್ಥರು

Maternal and Infant dies After Cesarean in Koppal District Hospital grg

ಕುಕನೂರು(ಜ.01): ಕೊಪ್ಪಳ ಜಿಲ್ಲಾ ಆಸತ್ರೆಯಲ್ಲಿ ತಾಲೂಕಿನ ಆಡೂರು ಗ್ರಾಮದ ಬಾಣಂತಿಯೊಬ್ಬರು ಮೃತಪಟ್ಟಿರುವ ಘಟನೆ ಮಂಗಳವಾರ ಬೆಳಗ್ಗೆ ನಡೆದಿದ್ದು, ವೈದ್ಯರ ನಿರ್ಲಕ್ಷ್ಯದ ಕೇಳಿಬಂದಿದೆ. ಆರೋಪ ಗ್ರಾಮದ ರೇಣುಕಾ ಪ್ರಕಾಶ ಹಿರೇಮನಿ (22) ಮೃತ ಬಾಣಂತಿ. 

ತವರೂರು ಚಿಕ್ಕ ಬನ್ನಿಗೋಳ ಗ್ರಾಮದಿಂದ ಸೋಮವಾರ ರಾತ್ರಿ ಹೆರಿಗೆ ನೋವು ಕಂಡ ಕಾರಣ ರೇಣುಕಾಳನ್ನು ಕುಟುಂಬಸ್ಥರು ಕುಷ್ಟಗಿಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಅಲ್ಲಿನ ವೈದ್ಯರು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ನಾರ್ಮಲ್ ಡೆಲಿವರಿ ಆಗದ ಕಾರಣ ವೈದ್ಯರು ಸಿಜೇರಿಯನ್ ಮಾಡಿದ್ದಾರೆ. ಆ ವೇಳೆಯೇ ಮಗು ಸಾವನ್ನಪಿದೆ. ಇದಾದ ಎರಡು ತಾಸುಗಳ ನಂತರ ಬಾಣಂತಿ ರೇಣುಕಾ ಸಹ ಸಾವನಪ್ಪಿದ್ದಾಳೆ, ವೈದ್ಯರು ರೇಣುಕಾ ಸಾವನ್ನಪ್ಪಿದ ನಂತರ ಬಂದು ಬಾಣಂತಿ ಸಾವನ್ನಪ್ಪಿದ್ದಾಳೆ, ಶವ ತೆಗೆದುಕೊಂಡು ಹೋಗಿ ಎಂದು ಹೇಳಿದರು. ನಿಖರ ಕಾರಣ ನೀಡಲಿಲ್ಲ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. 

ಬೆಳಗಾವಿ: ಚಿಕಿತ್ಸೆ ಸಿಗದೇ ಗರ್ಭದಲ್ಲೇ ಶಿಶು ಸಾವು, ಬಾಣಂತಿ ಸ್ಥಿತಿ ಗಂಭೀರ

ಕುಷ್ಟಗಿಯಲ್ಲಿ ವೈದ್ಯರು ಸರಿಯಾಗಿ ಚಿಕಿತ್ಸೆ ನೀಡಿದ್ದರೆ ಸ್ಥಳೀಯವಾಗಿಯೇ ತಾಯಿ, ಮಗುವಿಗೆ ತೊಂದರೆ ಆಗುತ್ತಿರಲಿಲ್ಲ. ಆದರೆ ಅಲ್ಲಿಯ ವೈದ್ಯರು ಚಿಕಿತ್ಸೆ ನೀಡದೆ ಕೊಪ್ಪಳಕ್ಕೆ ಕಳುಹಿಸಿದರು. ಇಲ್ಲಿ ಬಂದರೆ ಇಲ್ಲಿನ ವೈದ್ಯರು ತಾಯಿ, ಮಗುವಿನ ಜೀವ ಉಳಿಸದೆ ನಿರ್ಲಕ್ಷ್ಯದಿಂದ ಬಾಣಂತಿ, ಮಗು ಸಾವಿಗೆ ಕಾರಣವಾಗಿದ್ದಾರೆ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಬಡ ಕುಟುಂಬ: 

2024ರ ಫೆಬ್ರವರಿ ತಿಂಗಳಿನಲ್ಲಿ ರೇಣುಕಾ ಹಾಗೂ ಆಡೂರಿನ ಪ್ರಕಾಶ ವಿವಾಹವಾಗಿತ್ತು. ಗರ್ಭಿಣಿಯಾಗಿದ್ದ ರೇಣುಕಾಳನ್ನು ತವರ ಮನೆಯಲ್ಲಿ ಬಿಟ್ಟು ಪ್ರಕಾಶ, ಆತನ ತಾಯಿ ಬೆಂಗಳೂರಿಗೆ ಕೆಲಸಕ್ಕೆ ಹೋಗಿದ್ದರು. ಮಗು ಹುಟ್ಟಿದ ಸಂತಸದ ಸುದ್ದಿ ಕೇಳಬೇಕಿದ್ದ ಬೆಂಗಳೂರಿನಲ್ಲಿದ್ದ ಪ್ರಕಾಶ ಹಿರೇಮನಿಗೆ ಹೆಂಡತಿ, ಮಗುವಿನ ಸಾವಿನ ಸುದ್ದಿ ನೋವು ತಂದಿದೆ. ಕುಟುಂಬದ ಆಕ್ರಂದನ ಮುಗಿಲು ಮುಟ್ಟಿತ್ತು.

ರೇಣುಕಾ ಸಿಜೇರಿಯನ್ ಆದ 2 ತಾಸಿಗೆ ಸಾವನ್ನಪ್ಪಿದ್ದಾಳೆ. ವೈದ್ಯರು ನಿರ್ಲಕ್ಷ್ಯ ಮಾಡಿದ್ದಾರೆ. ಸರಿಯಾಗಿ ಚಿಕಿತ್ಸೆ ನೀಡಿಲ್ಲ. ಅಲ್ಲದೆ ಮಗುವನ್ನು ಸಹ ಉಳಿಸಿ ಕೊಳ್ಳಲಿಲ್ಲ. ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ: ದೇವಪ್ಪ ಗಾಳೆಪ್ಪ ಹರಿಜನ, ಬಸವರಾಜ ಹಿರೇಮನಿ ಮೃತ ಬಾಣಂತಿ ಸಂಬಂಧಿಕರು

ಬಾಣಂತಿ ಮನೆಗೆ ಬಿಜೆಪಿ ಜಿಲ್ಲಾಧ್ಯಕ್ಷರ ಭೇಟಿ

ಕುಕನೂರು ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿ ಹಾಗೂ ಹಸುಗೂಸು ಸಾವನ್ನಪ್ಪಿದ್ದು, ವೈದ್ಯರ ನಿರ್ಲಕ್ಷ್ಯಕ್ಕೆ ತಕ್ಕ ಕ್ರಮ ಆಗಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣವರ್‌ ಆಗ್ರಹಿಸಿದರು. 

ಬಳ್ಳಾರಿ ಘಟನೆ ಮಾಸುವ ಮುನ್ನವೇ ಕೊಪ್ಪಳದಲ್ಲಿ ಮತ್ತೋರ್ವ ಬಾಣಂತಿ ಸಾವು!

ತಾಲೂಕಿನ ಆಡೂರು ಗ್ರಾಮದಲ್ಲಿ ಸಾವನಪ್ಪಿದ ಬಾಣಂತಿ ಮನೆಗೆ ತೆರಳಿದ ಅವರು, ಬಾಣಂತಿಯರ ಸಾವು ಇದೊಂದು ನೋವಿನ ಸಂಗತಿ. ಕಣ್ಣು ತೆಗೆಯಬೇಕಿದ್ದ ಹಸುಗೂಸು ಸಹ ಹುಟ್ಟುತ್ತಲೆ ಕಣ್ಣು ಮುಚ್ಚಿದೆ. ವೈದ್ಯರು ತಮ್ಮ ಕರ್ತವ್ಯ ಮರೆತು ನಿರ್ಲಕ್ಷ್ಯ ತೋರುತ್ತಿದ್ದಾರೆ. ಬಾಣಂತಿಯರ ಸಾವು ಕೊನೆಯಾಗಬೇಕು. ವೈದ್ಯರು ಕಾಳಜಿ ವಹಿಸಬೇಕು. ಬಾಣಂತಿ, ಹಸುಗೂಸು ಸಾವಿಗೆ ಕಾರಣರಾದ ವೈದ್ಯರ ಮೇಲೆ ಶಿಸ್ತು ಕ್ರಮ ಆಗಬೇಕು. ಇದೇ ಸಾವು ಜಿಲ್ಲೆಯಲ್ಲಿ ಕೊನೆಯಾಗಬೇಕು. ಬಡವರು ಸರ್ಕಾರಿ ಆಸ್ಪತ್ರೆ ನಂಬಿ ಬರುತ್ತಾರೆ. ಆದರೆ ಅಲ್ಲಿ ನಿಷ್ಕಾಳಜಿ ತೋರುವುದು ಯಾವ ನ್ಯಾಯ. ಜೀವ ಉಳಿಸುವ ವೈದ್ಯರು ಜೀವ ತೆಗೆಯುವ ಕಾರ್ಯ ಮಾಡುತ್ತಿದ್ದಾರೆಯೇ, ಇದು ಆತ್ಮಾವಲೋಕನ ಮಾಡಿಕೊಳ್ಳುವ ಘಟನೆ ಆಗಿದೆ. ಕೂಡಲೇ ಆರೋಗ್ಯ ಇಲಾಖೆ ಜಿಲ್ಲೆಯಲ್ಲಿ ವೈದ್ಯರ ನಿರ್ಲಕ್ಷ್ಯತನವನ್ನು ಕೊನೆಗಾಣಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು. 

ಹೇಮಲತಾ ಸಾಂತ್ವನ: 

ವೈದ್ಯರು ದೇವರು ಎಂಬುದನ್ನು ಮರೆಯಬಾರದು ಎಂದು ಸ್ಥಳಕ್ಕೆ ಆಗಮಿಸಿದ ಎಂ.ಎಲ್.ಸಿ ಹೇಮಲತಾ ನಾಯಕ ಹೇಳಿದರು. ರೇಣುಕಾ ಕುಟುಂಬಕ್ಕೆ ಸಾಂತ್ವನ ಹೇಳಿ, ಸಾವನ್ನಪ್ಪಿದ್ದ ಹಸುಗೂಸನ್ನು ಎತ್ತಿಕೊಂಡು ಕಣ್ಣೀರು ಸುರಿಸಿದರು.ದೇವರಿಗೆ ಮುಗ್ಧ ಮಗುಕಾಣಲಿಲ್ಲವೇ. ತಾಯಿ ಮಗು ಏನು ತಪ್ಪು ಮಾಡಿದ್ದರು ಎಂದು ಕಂಬನಿ ಮಿಡಿದರು.

Latest Videos
Follow Us:
Download App:
  • android
  • ios