Asianet Suvarna News Asianet Suvarna News

ಬಲೆ ತೆಲಿಪಾಲೆ: ಮಸ್ಕಿರಿ ಕುಡ್ಲ ತಂಡಕ್ಕೆ ಪ್ರಶಸ್ತಿ

ಬಲೆ ತೆಲಿಪಾಲೆ ಕಾರ್ಯಕ್ರಮದಲ್ಲಿ ಮಸ್ಕಿರಿ ಕುಡ್ಲ ತಂಡಕ್ಕೆ ಪ್ರಶಸ್ತಿ ಬಂದಿದೆ.  2 ಲಕ್ಷ ರು. ನಗದು ಬಹುಮಾನ ಹಾಗೂ ಸ್ಮರಣಿಕೆ ನೀಡಲಾಗಿದೆ. ದ್ವಿತೀಯ ಸ್ಥಾನವನ್ನು ಸಮರ ಸಾರಥಿ ಪಡೆದಿದ್ದು, 1 ಲಕ್ಷ ರು. ನಗದು ಬಹುಮಾನ ಪಡೆದಿದೆ.

 

Maskiri Kudla won Bale Thelipale season 7 in Mangalore
Author
Bangalore, First Published Feb 28, 2020, 8:51 AM IST

ಮಂಗಳೂರು(ಫೆ.28) : ಶಾಸ್ತಾವು ಶ್ರೀ ಭೂತನಾಥೇಶ್ವರ ದೇವಸ್ಥಾನ ಹಾಗೂ ನಮ್ಮ ಟಿವಿ ವಾಹಿನಿ ಜಂಟಿ ಆಶ್ರಯದಲ್ಲಿ ಮೂಡಿ ಬಂದಿರುವ ಬಲೆ ತೆಲಿಪಾಲೆ-7 ಅಂತಿಮ ಸುತ್ತು ಮಂಗಳೂರಿನ ಪುರಭವನದಲ್ಲಿ ನಡೆಯಿತು.

ಕಾರ್ಯಕ್ರಮದ ಅಂತಿಮ ಸುತ್ತಿನಲ್ಲಿ 9 ತಂಡಗಳು ಭಾಗವಹಿಸಿದ್ದವು. ಪ್ರಥಮ ಸ್ಥಾನವನ್ನು ಮಸ್ಕಿರಿ ಕುಡ್ಲ ಪಡೆದಿದ್ದು, 2 ಲಕ್ಷ ರು. ನಗದು ಬಹುಮಾನ ಹಾಗೂ ಸ್ಮರಣಿಕೆ ಪಡೆಯಿತು. ದ್ವಿತೀಯ ಸ್ಥಾನವನ್ನು ಸಮರ ಸಾರಥಿ ಪಡೆದಿದ್ದು, 1 ಲಕ್ಷ ರು. ನಗದು ಬಹುಮಾನ, ತೃತೀಯ ಸ್ಥಾನವನ್ನು ರಾಜಶ್ರೀ ಕುಡ್ಲ 50 ಸಾವಿರ ರು. ನಗದು ಬಹುಮಾನ, ನಾಲ್ಕನೇ ಸ್ಥಾನವನ್ನು ಕಲಾಶ್ರೀ ಕುಡ್ಲ 30 ಸಾವಿರ ರು. ನಗದು ಬಹುಮಾನ ಪಡೆದುಕೊಂಡಿತು.

ಮಂಗಳೂರು-ಬೆಂಗಳೂರು ರಾತ್ರಿ ರೈಲು ಬುಕ್ಕಿಂಗ್‌ ರದ್ದು

ತೀರ್ಪುಗಾರರಾಗಿ ಸಂಗೀತ ನಿರ್ದೇಶಕ ಗುರುಕಿರಣ್‌, ಶಾಸ್ತಾವು ಶ್ರೀ ಭೂತನಾಥೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ವಿಜಯನಾಥ ವಿಠಲ ಶೆಟ್ಟಿಹಾಗೂ ನಮ್ಮ ಟಿವಿಯ ನಿರ್ದೇಶಕ ಶಿವಶರಣ್‌ ಶೆಟ್ಟಿಪಾಲ್ಗೊಂಡಿದ್ದರು.

Follow Us:
Download App:
  • android
  • ios