Asianet Suvarna News Asianet Suvarna News

ಕಾಸರಗೋಡಲ್ಲಿ ಕೋವಿಡ್‌ ಅಂಕುಶಕ್ಕೆ ಶಿಕ್ಷಕರ ಪಡೆ..!

* ಮಾಶ್‌ ಹೆಸರಿನ ಈ ತಂಡದಿಂದ ಜನರಲ್ಲಿ ಜಾಗೃತಿ
* ಜಾಗೃತಿ ಎಫೆಕ್ಟ್: ಶೇ.20 ಇದ್ದ ಪಾಸಿಟಿವಿಟಿ ಶೇ.16ಕ್ಕೆ
* ಜಾಗ್ರತ ಸಮಿತಿ ಕೂಡ ಪ್ರತಿಯೊಂದು ಮನೆಯ ಕಣ್ಗಾವಲು 
 

Mash Team Started Corona Campaign at Kasaragod inm Kerala grg
Author
Bengaluru, First Published Jun 11, 2021, 7:46 AM IST

ಮಂಗಳೂರು(ಜೂ.11): ಕೇರಳ-ಕರ್ನಾಟಕದ ಗಡಿನಾಡು ಕಾಸರಗೋಡಿನಲ್ಲಿ ಈಗ ಕೋವಿಡ್‌ ಕಾರಣಕ್ಕೆ ಸೆಮಿ ಲಾಕ್‌ಡೌನ್‌ ಜಾರಿಯಲ್ಲಿದೆ. ಈ ಹಿನ್ನೆಲೆಯಲ್ಲಿ 2 ವಾರದ ಹಿಂದೆ ಶೇ.20ಕ್ಕೆ ಏರಿಕೆಯಾಗಿದ್ದ ಕೋವಿಡ್‌ ಪಾಸಿಟಿವಿಟಿ ಪ್ರಮಾಣ ಬುಧವಾರದ ವೇಳೆಗೆ ಶೇ.16.8ಕ್ಕೆ ಇಳಿಕೆಯಾಗಿದೆ.

ಇದಕ್ಕೆ ಕಾರಣ ಶಕ್ತಿಮೀರಿ ಶ್ರಮಿಸುತ್ತಿರುವುದು ಅಲ್ಲಿನ ‘ಮಾಶ್‌’ ತಂಡ. ಮಾಶ್‌ ಎಂದರೆ ಮಲಯಾಳಂ ಭಾಷೆಯಲ್ಲಿ ಶಿಕ್ಷಕರನ್ನು(ಮೇಷ್ಟ್ರೇ) ಎಂದು ಕರೆಯುವುದು ರೂಢಿ. ಹಾಗಾಗಿ ಮಾಶ್‌(ಎಂಎಎಎಸ್‌ಎಚ್‌-ಮಾಸ್ಟರ್ಸ್‌ ಎಗೆನೆಷ್‌ಟಆ್ಯಂಟಿ ಸೋಶಿಯಲ್‌ ಹ್ಯೂಮನ್ಸ್‌) ತಂಡವನ್ನು ಕಾಸರಗೋಡು ಜಿಲ್ಲಾಡಳಿತ ಹುಟ್ಟು ಹಾಕಿ ಇದರ ಮೂಲಕ ಕೋವಿಡ್‌ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ.

ಲಕ್ಷ ಲಕ್ಷ ಲಸಿಕೆ ಡೋಸ್ ಪೋಲು: ಜಾರ್ಖಂಡ್‌ನಲ್ಲಿ ಗರಿಷ್ಠ,ಕೇರಳದಲ್ಲಿ ಕನಿಷ್ಠ!

ಮಾಶ್‌ ಹೆಸರಿನ ಈ ತಂಡದಲ್ಲಿ ಶಿಕ್ಷಕರನ್ನು ನೋಡೆಲ್‌ ಅಧಿಕಾರಿಯಾಗಿ ಪ್ರತಿ ವಾರ್ಡ್‌ಗೆ ನೇಮಿಸಲಾಗಿದೆ. ಇವರು ದಿನಂಪ್ರತಿ ವಾರ್ಡ್‌ಗೆ ಭೇಟಿ ನೀಡಿ ಕೋವಿಡ್‌ ಬಗ್ಗೆ ತಿಳಿವಳಿಕೆ ನೀಡುತ್ತಾರೆ. 

ಪ್ರತಿ ವಾರ್ಡ್‌ನಲ್ಲಿರುವ ಜಾಗ್ರತ ಸಮಿತಿ ಕೂಡ ಪ್ರತಿಯೊಂದು ಮನೆಯ ಕಣ್ಗಾವಲು ಹೊಂದಿರುತ್ತದೆ. ಹೀಗಾಗಿ ಯಾವುದೇ ಮನೆ ಕೋವಿಡ್‌ ವಿಚಾರದಲ್ಲಿ ತಪ್ಪಿಸಿಕೊಳ್ಳುವಂತಿಲ್ಲ. ಅಲ್ಲಿ ಶೇ.10ಕ್ಕಿಂತ ಕಡಿಮೆ ಪಾಸಿಟಿವಿಟಿ ಪ್ರಮಾಣ ಇಳಿಸುವ ಗುರಿಯನ್ನು ಈ ತಂಡ ಹೊಂದಿದೆ. ಕೇರಳದ 14 ಜಿಲ್ಲೆಗಳಿಗೆ ಹೋಲಿಸಿದರೆ, ಕಾಸರಗೋಡಿನಲ್ಲಿ ಈ ತಂಡದ ಅವಿರತ ಶ್ರಮದಿಂದ ಕೋವಿಡ್‌ ನಿಯಂತ್ರಣದಲ್ಲಿದೆ ಎನ್ನುತ್ತಾರೆ ತಂಡದ ಸದಸ್ಯ ಗುರುರಾಜ್‌.
 

Follow Us:
Download App:
  • android
  • ios