ಮೈಸೂರು : ಇತರೆ ಪಕ್ಷ ತೊರೆದು ಶಾಸಕರ ಸಮ್ಮುಖದಲ್ಲಿ ಜೆಡಿಎಸ್‌ ಸೇರ್ಪಡೆ

  • ಕಾಂಗ್ರೆಸ್‌ನ್ನು ತೊರೆದು ಜೆಡಿಎಸ್‌ನತ್ತ ಒಲವು ತೋರುತ್ತಿರುವುದುರಿಂದ ಪಕ್ಷದ ಸಂಘಟನೆ ಮತ್ತಷ್ಟು ಬಲಿಷ್ಠ
  • ಟಿ ನರಸೀಪುರ ಜೆಡಿಎಸ್ ಶಾಸಕ ಎಂ. ಅಶ್ವಿನ್‌ಕುಮಾರ್‌ ಹೇಳಿಕೆ
many leaders Joins JDS in T narasipura snr

 ಟಿ. ನರಸೀಪುರ (ಸೆ.10):  ಕಾಂಗ್ರೆಸ್‌ನ್ನು ತೊರೆದು ಜೆಡಿಎಸ್‌ನತ್ತ ಒಲವು ತೋರುತ್ತಿರುವುದುರಿಂದ ಪಕ್ಷದ ಸಂಘಟನೆ ಮತ್ತಷ್ಟು ಬಲಿಷ್ಠವಾಗುತ್ತದೆ ಎಂದು ಕ್ಷೇತ್ರ ಶಾಸಕ ಎಂ. ಅಶ್ವಿನ್‌ಕುಮಾರ್‌ ಹೇಳಿದರು.

ಶಾಸಕರ ನಿವಾಸದಲ್ಲಿ ಇತರೆ ಪಕ್ಷಗಳನ್ನು ತೊರೆದು ಜೆಡಿಎಸ್‌ ಸೇರ್ಪಡೆಗೊಂಡ ಸರಳ ಕಾರ್ಯಕ್ರಮದಲ್ಲಿ ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಅವರು, ಪಕ್ಷದ ತತ್ವ ಸಿದ್ಧಾಂತವನ್ನು ಒಪ್ಪಿ ಇತರೆ ಪಕ್ಷಗಳನ್ನು ತೊರೆದು ಜೆಡಎಸ್‌ನತ್ತ ಮುಖ ಮಾಡುತ್ತಿರುವುದು ಪಕ್ಷದ ಸಂಘಟನೆಗೆ ಹೊಸ ಹುರುಪು ಬರುತ್ತದೆ ಎಂದರು.

ಕಾಂಗ್ರೆಸ್‌ಗೆ ಬಾಯ್,JDSಗೆ ಹಾಯ್ ಎಂದ ಮಾಜಿ ಸಂಸದರ ಪುತ್ರ

ಈ ಬಾರಿ ತಾಪಂ ಕ್ಷೇತ್ರವನ್ನು ಜಾತ್ಯತೀತ ಜನತಾದಳ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಎಲ್ಲ ವಿಶ್ವಾಸವನ್ನು ಹೊಂದಿದೆ, ಕಾರ್ಯಕರ್ತರು ಹುಮ್ಮಸ್ಸಿನಿಂದ ಪಕ್ಷ ಸಂಘಟನೆಗೆ ತೊಡಗಿದ್ದಾರೆ ಎಂದು ಅವರು ತಿಳಿಸಿದರು.

ಜಿಪಂ ಹಾಗೂ ತಾಪಂಗಳಲ್ಲಿ ಪಕ್ಷ ಹೆಚ್ಚಿನ ಸ್ಥಾನ ಗಳಿಸಲು ಕ್ಷೇತ್ರಾದ್ಯಂತ ಪ್ರವಾಸ ಕೈಗೊಂಡು ಕಾರ್ಯಕರ್ತರಿಗೆ ಹೆಚ್ಚಿನ ಶಕ್ತಿ ತುಂಬಿ, ಪಕ್ಷ ಸಂಘಟನೆಗೆ ಒತ್ತು ನೀಡಿ, ಇತರೆ ಪಕ್ಷವನ್ನು ತೊರೆದು ನಮ್ಮ ಪಕ್ಷದ ಮೇಲೆ ವಿಶ್ವಾಸವಿಟ್ಟು ಬರುವ ಎಲ್ಲ ಕಾರ್ಯಕರ್ತರನ್ನು ಸ್ವಾಗತಿಸುವ ಮೂಲಕ ಪಕ್ಷವನ್ನು ಮತ್ತಷ್ಟುಬಲ ವೃದ್ಧಿ ಗೊಳಿಸಲಾಗುತ್ತದೆ ಎಂದು ಹೇಳಿದರು,

ಪಕ್ಷದ ಕ್ಷೇತ್ರ ಅಧ್ಯಕ್ಷ ಚಿನ್ನಸ್ವಾಮಿ ನೇತೃತ್ವದಲ್ಲಿ ಪಕ್ಷ ಸಂಘಟನೆಗೆ ಚಾಲನೆ ನೀಡಲಾಗಿದ್ದು, ಜೆಡಿಎಸ್‌ ಬೆಂಬಲವಿಲ್ಲದೆ ಯಾವುದೇ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂಬದನ್ನು ರಾಜ್ಯದ ಜನ ನಗರಪಾಲಿಕೆ ಚುನಾವಣೆಯಲ್ಲಿ ಮನದಟ್ಟು ಮಾಡಿಕೊಟ್ಟಿದ್ದಾರೆ, ಇದನ್ನು ಅರಿತು ವಿವಿಧ ಪಕ್ಷದ ಮುಖಂಡರು ಜೆಡಿಎಸ್‌ನತ್ತ ಮುಖ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದರು.

ಕ್ಷೇತ್ರ ಅಧ್ಯಕ್ಷ ಚಿನ್ನಸ್ವಾಮಿ, ತಾಲೂಕು ಕುರುಬರ ಸಂಘದ ನಿರ್ದೇಶಕ ಅಶ್ವಿನ್‌, ಗ್ರಾಪಂ ಸದಸ್ಯ ಮಹೇಶ್‌, ಮಹದೇವು ಇದ್ದರು.

Latest Videos
Follow Us:
Download App:
  • android
  • ios