ಮಂಡ್ಯ [ಸೆ.20]: ಮಂಡ್ಯದ ಮನ್ ಮುಲ್ ನಲ್ಲಿ ಅಧಿಕಾರ ಹಿಡಿಯಬೇಕೆಂದುಕೊಂಡಿದ್ದ ಜೆಡಿಎಸ್ ಗೆ ಆಘಾತ ಎದುರಾಗಿದೆ.

ಮಂಡ್ಯ ಹಾಲು ಒಕ್ಕೂಟದಲ್ಲಿಯೂ ಆಪರೇಷನ್ ಕಮಲ ನಡೆದಿದ್ದು, ಜೆಡಿಎಸ್ ನಿಂದ ಆಯ್ಕೆಯಾಗಿದ್ದ ಸ್ವಾಮಿ  ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಎಂಎಲ್ ಸಿ ಪುಟ್ಟಣ್ಣ ನೇತೃತ್ವದಲ್ಲಿ ಬೆಂಗಳೂರಿನ ಕಚೇರಿಯಲ್ಲಿ ಬಿಜೆಪಿ ಸೇರಿದ್ದು, ಇದರಿಂದ 8 ಸ್ಥಾನ ಪಡೆದಿದ್ದ ಜೆಡಿಎಸ್ ಸಂಖ್ಯಾಬಲ ಇದೀಗ 7ಕ್ಕೆ ಕುಸಿದಿದೆ.

ಒಟ್ಟು 12 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, 3 ಕಾಂಗ್ರೆಸ್, 1 ಸ್ಥಾನದಲ್ಲಿ ಬಿಜೆಪಿ ಗೆಲುವು ಪಡೆದಿತ್ತು. ಸದ್ಯ ಒಂದು ಸ್ಥಾನ ಪಡೆದ ಬಿಜೆಪಿ ಇಲ್ಲಿ ಕಾಂಗ್ರೆಸ್ ಬೆಂಬಲದಿಂದ ಅಧಿಕಾರಕ್ಕೆ ಏರಲು ಯತ್ನಿಸುತ್ತಿದೆ.