ಮಂಗಳೂರು, (ಆ.24): ಮಂಗಳೂರಿನಲ್ಲಿ  ಮತ್ತೆ ಇಬ್ಬರು ಅನುಮಾನಸ್ಪದ ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮೊನ್ನೇ ಅಷ್ಟೇ ಕೇಂದ್ರ ಕ್ರೈಂ ಬ್ರಾಂಚ್ ಬೋರ್ಡ್‌ ಇರುವ ವಾಹನದಲ್ಲಿ ಸುತ್ತಾಡುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದರು.

ಇದರ ಬೆನ್ನಲ್ಲೇ ಇಂದು (ಶನಿವಾರ) ಮತ್ತಿಬ್ಬರನ್ನು ಬಂಧಿಸಿದ್ದಾರೆ. ಕಾಶ್ಮೀರ ಮೂಲದ ಶೌಖತ್ ಅಹಮದ್ ಲೋನೆ ಹಾಗೂ ಚಂಡೀಗಢ ಮೂಲದ ಬಲ್ಜಿಂಧರ್ ಸಿಂಗ್ ಬಂಧಿತರು.

ಟೆರರ್ ಅಲರ್ಟ್: ಶಂಕಿತರನ್ನು ಮಂಗಳೂರು ಪೊಲೀಸರು ಖೆಡ್ಡಾಗೆ ಬೀಳಿಸಿದ್ದು ಹೀಗೆ...

ಈ ಇಬ್ಬರು ಡಬ್ಲ್ಯೂ.ಹೆಚ್.ಓ ದ ನಿರ್ದೇಶಕರು ಎಂದು ಹೇಳಿಕೊಂಡು ಆಗಸ್ಟ್ 16 ರಂದು ಮಂಗಳೂರಿಗೆ ಬಂದು ಮಂಗಳೂರಿನ ಲಾಡ್ಜ್‌ನಲ್ಲಿ ವಾಸ್ತವ್ಯ ಹೂಡಿದ್ದರು.

ಇವರ ಮೇಲೆ ಪೊಲೀಸರಿಗೆ ಅನುಮಾನ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಫೋಟೋ ಬಿಡುಗಡೆ ಮಾಡಿದ್ದು, ಇವರ ಬಗ್ಗೆ ಮಾಹಿತಿ ಇದ್ರೆ ನೀಡುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.