ಉಡುಪಿ(ಜ.25): ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ್ದ ಬಾಂಬರ್ ಆದಿತ್ಯ ಆತ್ಮಹತ್ಯೆಗೂ ಸಿದ್ಧತೆ ಮಾಡಿಕೊಂಡಿದ್ನಾ..? ತನಿಖೆಯ ಸಂದರ್ಭ ಪೊಲೀಸರಿಗೆ ಇಂತಹದೊಂದು ಸುಳಿವು ಸಿಕ್ಕಿದೆ.

ಪೊಲೀಸರು ಸ್ಥಳ ಮಹಜರು ನಡೆಸುವ ಸಂದರ್ಭ ಪೊಲೀಸರಿಗೆ ಈ ಕುರಿತು ಸುಳಿವು ಸಿಕ್ಕಿದೆ. ಎಸಿಪಿ ಬೆಳ್ಳಿಯಪ್ಪ ನೇತೃತ್ವದ ತಂಡ ಉಡುಪಿಯ ಬ್ಯಾಂಕ್‌ನಲ್ಲಿ ಪರಿಶೀಲನೆ ನಡೆಸಿ ಸ್ಥಳ ಮಹಜರು ಮಾಡಿದ್ದರು. ಈ ಸಂದರ್ಭ ಬ್ಯಾಂಕ್ ಲಾಕರ್ನಿಂದ ಅನುಮಾನಾಸ್ಪದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಬಾಂಬರ್ ಆದಿತ್ಯರಾವ್‌ನ ಇಂಟ್ರೆಸ್ಟಿಂಗ್ ಕಹಾನಿ ಕೇಳಿದ ಪೊಲೀಸರು

ಅನುಮಾನಾಸ್ಪದ ವಸ್ತುಗಳನ್ನು ವಶಕ್ಕೆ ಪಡೆದ ಪೊಲೀಸರು, ಬಾಂಬ್ ತಯಾರಿಕೆಗೆ ಬೇಕಾದ ಕಚ್ಚಾವಸ್ತುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ವರ್ಷದ ಹಿಂದೆಯೇ ಆದಿತ್ಯ ರಾವ್‌ ಲಾಕರ್ ಓಪನ್ ಮಾಡಿದ್ದ. ವಿಮಾನ ನಿಲ್ದಾಣದಲ್ಲಿ ಸ್ಪೋಟಿಸಲು ವರ್ಷದ ಹಿಂದೆಯೇ ಆದಿತ್ಯ ತಯಾರಿ ನಡೆಸಿದ್ದ ಎಂಬ ಬಗ್ಗೆಯೂ ಶಂಕೆ ವ್ಯಕ್ತವಾಗಿದೆ.

ಆತ್ಮಹತ್ಯೆಗೂ ಪ್ಲಾನ್..?

ಆದಿತ್ಯ ರಾವ್ ಆತ್ಮಹತ್ಯೆಗೂ ತಯಾರಿ ಮಾಡಿಕೊಂಡಿದ್ದ ಎನ್ನಲಾಗುತ್ತಿದೆ. ಬಾಂಬರ್ ಆದಿತ್ಯ ಸೈನೈಡ್ ಪುಡಿ ಸಂಗ್ರಹಿಸಿ ಇಟ್ಟಿದ್ದ ಎಂಬ ವಿಚಾರ ಬೆಳಕಿಗೆ ಬಂದಿದೆ. ಮಂಗಳೂರಿನ ಬಂಗಾರದ ಅಂಗಡಿಯಿಂದ ಸೈನೈಡ್ ಸಂಗ್ರಹಿಸಿದ್ದು, ಬ್ಯಾಂಕ್ ಲಾಕರ್ ನಲ್ಲಿ ಸೈನೈಡ್ ಇಟ್ಟಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದಿತ್ಯನ ಸಹೋದರ ಸೈನೈಡ್ ಬಗ್ಗೆ ಮಾಹಿತಿ ಕೊಟ್ಟಿದ್ದ.