ಪುತ್ತೂರು(ಮೇ 30): ರಾಜ್ಯದೊಳಗೆ ಪ್ರಯಾಣಿಕ ರೈಲು ಓಡಾಟ ನಡೆಸುವ ಕುರಿತಂತೆ ನೈರುತ್ಯ ರೈಲ್ವೆ ಪ್ರಕಟಿಸಿರುವ ಪ್ರಥಮ ಹಂತದ ಪಟ್ಟಿಯಲ್ಲಿ ಮಂಗಳೂರು- ಬೆಂಗಳೂರು ಮತ್ತು ಕಾರವಾರ- ಮಂಗಳೂರು- ಬೆಂಗಳೂರು ಪ್ರಯಾಣಿಕರ ರೈಲುಗಳ ಹೆಸರಿಲ್ಲದ ಕಾರಣ ಈ ರೈಲು ಓಡಾಟ ಮತ್ತಷ್ಟುವಿಳಂಬವಾಗಲಿದ್ದು, ದ್ವಿತೀಯ ಹಂತದಲ್ಲಿ ಓಡಾಟಕ್ಕೆ ಅವಕಾಶ ಸಿಗುವ ಸಾಧ್ಯತೆಗಳು ಕಂಡು ಬಂದಿದೆ.

ಜೂನ್‌ 1ರಿಂದ ರಾಜ್ಯದ ಒಳಗಡೆ ಅಂತರ್‌ಜಿಲ್ಲಾ ಪ್ರಯಾಣಿಕ ರೈಲುಗಳ ಓಡಾಟ ಆರಂಭವಾಗಲಿದೆ. ನೈರುತ್ಯ ರೈಲ್ವೆಯ ಮೈಸೂರು ವಿಭಾಗ ವ್ಯಾಪ್ತಿಯಲ್ಲಿ ಮಂಗಳೂರು- ಬೆಂಗಳೂರು ಮತ್ತು ಕಾರವಾರ- ಮಂಗಳೂರು- ಬೆಂಗಳೂರು ಪ್ರಯಾಣಿಕ ರೈಲುಗಳು ಬರುತ್ತವೆ. ದ್ವಿತೀಯ ಹಂತದ ಪಟ್ಟಿಯಲ್ಲಿ ಉಭಯ ರೈಲುಗಳ ಓಡಾಟ ಸೇರ್ಪಡೆಗೊಳ್ಳಲಿರುವ ಸಾಧ್ಯತೆ ಬಗ್ಗೆ ಸಂಸದ ನಳಿನ್‌ ಕುಮಾರ್‌ ಕಟೀಲು ಮಾಹಿತಿ ನೀಡಿದ್ದಾರೆ.

ಗರ್ಭಿಣಿಗೆ ಫ್ಲ್ಯಾಟ್‌ ಪ್ರವೇಶ ನಿರಾಕರಿಸಿದ ಅಪಾರ್ಟ್‌ಮೆಂಟ್‌ಗೆ ನೋಟಿಸ್

ಲೋಕಲ್‌ ರೈಲ್‌ಗೆ ಅಳವಡಿಕೆಗೆ ಆಗ್ರಹ: ಮೀಟರ್‌ಗೇಜ್‌ ರೈಲು ಹಳಿಗಳ ಕಾಲದಿಂದಲೇ ಮಂಗಳೂರು- ಕಬಕ ಪುತ್ತೂರು ಹಾಗೂ ಮಂಗಳೂರು- ಕಬಕ ಪುತ್ತೂರು- ಸುಬ್ರಹ್ಮಣ್ಯ ರಸ್ತೆ ರೈಲು ನಿಲ್ದಾಣಗಳ ನಡುವೆ ಲೋಕಲ್‌ ರೈಲು ಬಂಡಿಗಳ ಓಡಾಟವಿತ್ತು. ಕೊರೊನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಲೋಕಲ್‌ ರೈಲು ಓಡಾಟ ಕೂಡಾ ಸ್ಥಗಿತಗೊಂಡಿದೆ. ಮಂಗಳೂರು- ಬೆಂಗಳೂರು ಪ್ರಯಾಣಿಕ ರೈಲು ಬಂಡಿಗಳ ಓಡಾಟ ಆರಂಭವಾದ ಬೆನ್ನಲ್ಲೇ ಮಂಗಳೂರು- ಕಬಕ ಪುತ್ತೂರು- ಸುಬ್ರಹ್ಮಣ್ಯರಸ್ತೆ ರೈಲು ನಿಲ್ದಾಣಗಳ ನಡುವಣ ಲೋಕಲ್‌ ರೈಲು ಬಂಡಿಯ ಓಡಾಟ ಆರಂಭಿಸುವಂತೆ ಕೋರಿ ಕುಕ್ಕೆಶ್ರೀ ಸುಬ್ರಹ್ಮಣ್ಯ- ಮಂಗಳೂರು ರೈಲ್ವೆ ಪ್ರಯಾಣಿಕರ ಹಿತರಕ್ಷಣಾ ವೇದಿಕೆಯು ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕರಿಗೆ ಪತ್ರ ಬರೆದು ಆಗ್ರಹಿಸಿದೆ. ಈ ಬಗ್ಗೆ ಸಂಸದ ನಳಿನ್‌ ಕುಮಾರ್‌ ಅವರಿಗೂ ಮನವಿ ನೀಡಿದೆ.

ಬೀದಿ ವ್ಯಾಪಾರಿಗಳಿಗೆ ಜ್ವರ- ಉಸಿರಾಟದ ಸಮಸ್ಯೆ: ಆಸ್ಪತ್ರೆಗೆ ದಾಖಲು, ಕೊರೋನಾ ಭೀತಿ

ಮಂಗಳೂರು- ಬೆಂಗಳೂರು, ಕಾರವಾರ- ಬೆಂಗಳೂರು ನಡುವಣಾ ಪ್ರಯಾಣಿಕ ರೈಲು ಬಂಡಿಗಳ ಆರಂಭದ ಕುರಿತಂತೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರ ಗಮನಕ್ಕೆ ತರಲಾಗಿದೆ. ಸಚಿವರಿಂದ ಪೂರಕ ಸ್ಪಂದನ ವ್ಯಕ್ತವಾಗಿದೆ. ಹಾಗಾಗಿ ಶೀಘ್ರದಲ್ಲಿ ರೈಲು ಆರಂಭಗೊಳ್ಳಲಿದೆ. ರೈಲ್ವೆ ಬಳಕೆದಾರರ ಸಂಘಟನೆಗಳು ಕೂಡಾಪ್ರಯಾಣಿಕ ರೈಲು ಬಂಡಿಗಳ ಓಡಾಟಕ್ಕೆ ಆಗ್ರಹಿಸಿದ ಮನವಿ ಕೈ ಸೇರಿದೆ. ಕೊರೊನಾ ಕಾರಣದಿಂದಾಗಿ ಏರುಪೇರಾಗಿರುವ ವ್ಯವಸ್ಥೆಯನ್ನು ಸರಿಪಡಿಸಲಾಗುವುದು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.