Mandya : ಕಾಂಗ್ರೆಸ್‌ ಬೆಂಬಲಿತ ಮುಖಂಡಗೆ ಭರ್ಜರಿ ಗೆಲವು

ತಾಲೂಕಿನ ಹೊಸವೀಡು ಗ್ರಾಮದ ಗ್ರಾಪಂ ಸದಸ್ಯ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಸೋಮನಾಯಕ ಆಯ್ಕೆಯಾಗಿದ್ದಾರೆ.

Mandya   victory for the Congress-backed leader snr

 ನಂಜನಗೂಡು :  ತಾಲೂಕಿನ ಹೊಸವೀಡು ಗ್ರಾಮದ ಗ್ರಾಪಂ ಸದಸ್ಯ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಸೋಮನಾಯಕ ಆಯ್ಕೆಯಾಗಿದ್ದಾರೆ.

ಈ ಹಿಂದೆ ಗ್ರಾಪಂ ಸದಸ್ಯರಾಗಿದ್ದ ಜಯನಾಯಕ ಅವರ ಮರಣದಿಂದ ತೆರವಾಗಿದ್ದ ಸ್ಥಾನಕ್ಕೆ ಭಾನುವಾರ ಚುನಾವಣೆ ನಡೆಸಲಾಗಿತ್ತು. ಬುಧವಾರ ತಹಸೀಲ್ದಾರ್‌ ಕಚೇರಿಯಲ್ಲಿ ನಡೆದ ಮತ ಎಣಿಕೆ ಪ್ರಕ್ರಿಯೆಯಲ್ಲಿ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿ ಸೋಮನಾಯಕ 441 ಮತಗಳನ್ನು ಪಡೆದು ವಿಜಯದ ನಗೆ ಬೀರಿದರು. ಇವರ ಪ್ರತಿಸ್ಪರ್ಧಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಚೆನ್ನಮಲ್ಲ ಸ್ವಾಮಿ 139 ಮತಗಳನ್ನು ಪಡೆದು ಪರಾಭವಗೊಂಡರು. ಚುನಾವಣಾಧಿಕಾರಿಯಾಗಿ ಮಹದೇವ ಪ್ರಸಾದ್‌ ಕಾರ್ಯ ನಿರ್ವಹಿಸಿದರು.

ಶಿವ ಮಲ್ಲೇಗೌಡ, ಪುಟ್ಟಸ್ವಾಮಿಗೌಡ, ಮರೇಗೌಡ, ಸಿದ್ದರಾಜು, ಸುರೇಶ್‌, ಬಸವಣ್ಣ, ಮಹದೇವಪ್ಪ, ನೀಲಕಂಠೇಗೌಡ, ಮಹದೇವ ನಾಯಕ ಇದ್ದರು.

ಸಿಡಿದೆದ್ದವರಿಗೆ ಸಿದ್ದಿ ಸಾಂತ್ವನ

ಬೆಂಗಳೂರು (ಜು.28): ಕಾಂಗ್ರೆಸ್‌ ಶಾಸಕರ ಕ್ಷೇತ್ರಗಳಿಗೆ ಅನುದಾನ ಕೊರತೆ ಹಾಗೂ ಸ್ಥಳೀಯ ವರ್ಗಾವಣೆಗಳಲ್ಲಿ ತಮ್ಮ ಶಿಫಾರಸಿಗೆ ಸಚಿವರು ಬೆಲೆ ನೀಡುತ್ತಿಲ್ಲ ಎಂಬ ಅಸಮಾಧಾನ ಕಾಂಗ್ರೆಸ್‌ ಶಾಸಕಾಂಗ ಸಭೆಯಲ್ಲಿ ಸ್ಫೋಟಗೊಂಡಿದ್ದು, ಇದರ ಬೆನ್ನಲ್ಲೇ ತಿಂಗಳಿಗೆ ಒಂದು ಜಿಲ್ಲಾವಾರು ಸಭೆ ಕರೆದು ಶಾಸಕರ ಸಮಸ್ಯೆಗಳನ್ನು ಖುದ್ದಾಗಿ ಬಗೆಹರಿಸುವಂತೆ ಮತ್ತು ಶಾಸಕರ ಶಿಫಾರಸುಗಳಿಗೆ ಮನ್ನಣೆ ನೀಡುವಂತೆ ಸಚಿವರಿಗೆ ತಾಕೀತು ಮಾಡುವ ಭರವಸೆ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಶಾಸಕರ ಅಸಮಾಧಾನವನ್ನು ಶಮನಗೊಳಿಸುವ ಪ್ರಯತ್ನ ಮಾಡಿದರು.

ಅಲ್ಲದೆ, ತಮ್ಮ ಎರಡು ಅವಧಿಯ ಅಧಿಕಾರಾವಧಿಯಲ್ಲಿ ಯಾವತ್ತೂ ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಶಾಸಕರೇ ಪತ್ರ ಬರೆದ ಘಟನೆ ನಡೆದಿಲ್ಲ. ಸಮಸ್ಯೆಗಳಿದ್ದರೆ ನೇರವಾಗಿ ನನ್ನನ್ನು ಸಂಪರ್ಕಿಸಿ ಸಮಸ್ಯೆ ಇತ್ಯರ್ಥ ಪಡಿಸಿಕೊಳ್ಳಬಹುದಿತ್ತು. ಪತ್ರ ಬರೆಯುವ ಮೂಲಕ ಪಕ್ಷ ಹಾಗೂ ಸರ್ಕಾರಕ್ಕೆ ಹಾನಿಯಾಗುವಂತಾಗಿದೆ ಎಂದು ಮುಖ್ಯಮಂತ್ರಿಯವರು ಅಸಮಾಧಾನ ವ್ಯಕ್ತಪಡಿಸಿ, ಇನ್ನು ಯಾವತ್ತೂ ಇಂತಹ ಪತ್ರ ಬರೆಯದಂತೆ ಶಾಸಕರಿಗೆ ತಾಕೀತು ಮಾಡಿದ ಘಟನೆಯೂ ನಡೆದಿದೆ. ಇದಕ್ಕೆ ಪತ್ರ ಬರೆದ ಶಾಸಕರಾದ ಬಸವರಾಜ ರಾಯರೆಡ್ಡಿ ಹಾಗೂ ಬಿ.ಆರ್‌. ಪಾಟೀಲ್‌ ಅವರು, ಸಭೆಯ ಕ್ಷಮೆಯನ್ನು ಕೋರಿದ್ದು, ತಮ್ಮ ಅಳಲು ತೋಡಿಕೊಳ್ಳುವ ಸದುದ್ದೇಶದಿಂದಷ್ಟೇ ಪತ್ರ ಬರೆದಿದ್ದೆವು. 

ಕೇರಳ ಮಾದರಿಯಲ್ಲಿ ಗ್ರಾಪಂಗಳ ಅಭಿವೃದ್ಧಿ: ಶಾಸಕ ದರ್ಶನ್‌ ಪುಟ್ಟಣ್ಣಯ್ಯ

ಆದರೆ, ಪಿತೂರಿಕಾರರು ನಕಲಿ ಪತ್ರವೊಂದನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿ ವಿಷಯ ದೊಡ್ಡದಾಗುವಂತೆ ಮಾಡಿದ್ದಾರೆ. ವಿಷಯ ಇಂತಹ ತಿರುವು ತೆಗೆದುಕೊಳ್ಳುತ್ತದೆ ಎಂಬ ಕಲ್ಪನೆಯಿರಲಿಲ್ಲ ಎಂದು ಸಮಜಾಯಿಷಿಯನ್ನು ನೀಡಿದರು ಎಂದು ತಿಳಿದುಬಂದಿದೆ. ಇದಕ್ಕೂ ಮುನ್ನ ಶಿವಲಿಂಗೇಗೌಡ, ಬಿ.ಆರ್‌. ಪಾಟೀಲ್‌, ವೀರೇಂದ್ರ (ಪಪ್ಪಿ), ವಿನಯ ಕುಲಕರ್ಣಿ ಹಾಗೂ ಶರತ್‌ ಬಚ್ಚೇಗೌಡ ಮೊದಲಾದ ಶಾಸಕರು ವರ್ಗಾವಣೆ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕೆಲ ಇಲಾಖೆಯ ಸಚಿವರ ನಡವಳಿಕೆ ವಿರುದ್ಧ ತೀವ್ರ ಆಕ್ರೋಶ ಹೊರ ಹಾಕಿದರು. 

ಸಚಿವರು ಶಾಸಕರ ವರ್ಗಾವಣೆ ಶಿಫಾರಸು ಪತ್ರಗಳಿಗೆ ಬೆಲೆಯನ್ನೇ ನೀಡುತ್ತಿಲ್ಲ. ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಸಚಿವರೇ ನೇರವಾಗಿ ಕರೆಸಿಕೊಂಡು ವರ್ಗಾವಣೆ ಮಾಡುತ್ತಿದ್ದಾರೆ. ಹೀಗಾದರೆ ಶಾಸಕರು ಯಾಕೆ ಬೇಕು? ಎಂದು ಕಿಡಿಕಾರಿದರು. ಚಿತ್ರದುರ್ಗದ ವೀರೇಂದ್ರ ಪಪ್ಪಿ ಅವರಂತೂ, ಕಳೆದ ಚುನಾವಣೆಯಲ್ಲಿ ನಮ್ಮ ವಿರುದ್ಧ ಕೆಲಸ ಮಾಡಿದ ಅಧಿಕಾರಿಗಳನ್ನೇ ಮುಂದುವರೆಸಲಾಗಿದೆ. ಈ ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತೆ ಒತ್ತಾಯ ಮಾಡಿದರೂ ಸಚಿವರು ಕ್ಯಾರೆ ಎನ್ನುತ್ತಿಲ್ಲ. ಹೀಗಾದರೆ ಕ್ಷೇತ್ರದಲ್ಲಿ ಹೇಗೆ ಕೆಲಸ ಮಾಡಬೇಕು ಎಂದು ಪ್ರಶ್ನಿಸಿದರು ಎನ್ನಲಾಗಿದೆ.

Latest Videos
Follow Us:
Download App:
  • android
  • ios