Asianet Suvarna News Asianet Suvarna News

ಹಾಲಿನ ದರ 30 ರು.ಗೆ ಏರಿಸಿ : ಉತ್ಪಾದಕರಿಂದ ಎಚ್ಚರಿಕೆ

ಹಾಲಿನ ದರವನ್ನು 30 ರು.ಗಳಿಗೆ ಏರಿಕೆ ಮಾಡಬೇಕು ಎಂದು ಮಂಡ್ಯ ಹಾಲು ಉತ್ಪಾದಕರ ಸಮಿತಿ ಆಗ್ರಹಿಸಿದ್ದು ಹೆಚ್ಚಳ ಮಾಡದಿದ್ದಲ್ಲಿ ಉಗ್ರ ಹೋರಾಟದ ಎಚ್ಚರಿಕೆಯನ್ನು ನೀಡಿದ್ದಾರೆ. 

Mandya Milk Producers Demand For Price Hike snr
Author
Bengaluru, First Published Mar 8, 2021, 11:40 AM IST

 ಮಂಡ್ಯ (ಮಾ.08): ಜಿಲ್ಲಾ ಹಾಲು ಒ​ಕ್ಕೂಟ ರೈ​ತ​ರಿಂದ ಖ​ರೀದಿ ಮಾ​ಡು​ತ್ತಿ​ರುವ ಪ್ರತಿ ಲೀ​ಟರ್‌ ಹಾ​ಲಿಗೆ  30 ನೀ​ಡ​ಬೇಕು. ಇ​ಲ್ಲ​ದಿ​ದ್ದಲ್ಲಿ ಉ​ಗ್ರ ಹೋ​ರಾಟ ನ​ಡೆ​ಸ​ಬೇ​ಕಾ​ಗು​ತ್ತದೆ ಎಂದು ಜಿಲ್ಲಾ ಹಾಲು ಉ​ತ್ಪಾ​ದ​ಕರ ಹೋ​ರಾಟ ಸ​ಮಿತಿ ಅ​ಧ್ಯಕ್ಷ ಎಸ್‌.ಸಿ.ಮ​ಧು​ಚಂದನ್‌ ಎ​ಚ್ಚ​ರಿಕೆ ನೀ​ಡಿ​ದರು.

ಮನ್‌ಮುಲ್‌​ ಹೊ​ರ​ತು​ಪ​ಡಿ​ಸಿ ರಾ​ಜ್ಯದ ಎಲ್ಲಾ ಹಾಲು ಒ​ಕ್ಕೂ​ಟ​ಗಳು ಪ್ರತಿ ಲೀಟರ್‌ಗೆ  26 ನಿಂದ  30 ರು. ನೀ​ಡು​ತ್ತಿವೆ. ನೆರೆ ಜಿ​ಲ್ಲೆ​ಗ​ಳಾದ ಕೋ​ಲಾರ ಮತ್ತು ಚಿ​ಕ್ಕ​ಬ​ಳ್ಳಾ​ಪುರ ಹಾಲು ಒ​ಕ್ಕೂ​ಟ​ಗಳು 29.20 ರು. ನೀ​ಡು​ತ್ತಿವೆ. ಮೈ​ಸೂರು, ತು​ಮ​ಕೂರು, ಬೆಂಗ​ಳೂರು, ಹಾ​ಸನ, ಚಾ​ಮ​ರಾ​ಜ​ನ​ಗರ ಒ​ಕ್ಕೂ​ಟ​ಗಳೂ ಸಹ ರೈ​ತ​ರಿಗೆ ಉ​ತ್ತಮ ಖ​ರೀದಿ ದರ ನೀಡಿ ಆ​ಸ​ರೆ​ಯಾ​ಗಿ​ವೆ. ಆ​ದರೆ, ಮನ್‌ಮುಲ್‌ ಮಾತ್ರ ಅ​ತ್ಯಂತ ಕ​ಡಿಮೆ ದರ  22.50 ರು. ನೀಡಿ ಹಾಲು ಉ​ತ್ಪಾ​ದ​ಕ​ರಿಗೆ ಮೋಸ ಎ​ಸ​ಗು​ತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಆ​ರೋ​ಪಿ​ಸಿ​ದರು.

ಪ್ರ​ಸ್ತುತ ಮನ್‌ಮುಲ್‌ ಆ​ಡ​ಳಿತ ಮಂಡಳಿ ಹಾಲು ಉ​ತ್ಪಾ​ದ​ಕರ ಕ​ಷ್ಟ​ಗ​ಳನ್ನು ಪ​ರಿ​ಗ​ಣ​ನೆಗೆ ತೆ​ಗೆ​ದು​ಕೊ​ಳ್ಳದೆ ಕೈ ಕಟ್ಟಿಕು​ಳಿತು ಹೈ​ನು​ಗಾ​ರಿ​ಕೆ​ಯನ್ನೇ ಜೀ​ವ​ನಾ​ಧಾ​ರ​ವಾ​ಗಿ​ಸಿ​ಕೊಂಡು ಅ​ದರಿಂದ ಬ​ರುವ ಹ​ಣ​ದಿಂದಲೇ ಕು​ಟುಂಬ ನಿರ್ವಹಿ​ಸು​ತ್ತಿ​ರುವ ಸಾ​ವಿ​ರಾರು ರೈತ ಕು​ಟುಂಬ​ಗ​ಳನ್ನು ಸಂಕ​ಷ್ಟಕ್ಕೆ ದೂ​ಡಿದೆ ಎಂದು ಆ​ಕ್ರೋಶ ವ್ಯ​ಕ್ತ​ಪ​ಡಿ​ಸಿ​ದರು.

ಹಾಲಿನ ದರ 40 ರು.ಗೆ ಏರಿಸಿ : ರೈತರಿಂದ ಪ್ರತಿಭಟನೆ .

ಒ​ಕ್ಕೂ​ಟದ ನು​ರಿತ ಅ​ಧಿ​ಕಾರಿ ವರ್ಗವನ್ನು ಆ​ಡ​ಳಿತ ಮಂಡಳಿ ದು​ರು​ಪ​ಯೋಗ ಮಾ​ಡಿ​ಕೊ​ಳ್ಳು​ತ್ತಿದೆ ಎಂಬ ಆ​ರೋ​ಪ​ಗಳು ಕೇ​ಳಿ​ಬ​ರು​ತ್ತಿದೆ. ಒ​ಕ್ಕೂ​ಟದ ಹಣ ದೋ​ಚಲು ಸ​ಹಾಯ ಮಾ​ಡು​ವಂತಹ ಪಟ್ಟಭದ್ರರು ಹಾಗೂ ಅ​ನು​ಭವ ಇ​ಲ್ಲ​ದ​ವ​ರನ್ನು ಆ​ಯ​ಕ​ಟ್ಟಿನ ಜಾ​ಗ​ಗ​ಳಿಗೆ ನಿ​ಯೋ​ಜನೆ ಮಾಡಿ ಒ​ಕ್ಕೂ​ಟ​ವನ್ನು ನ​ಷ್ಟದ ಕೂ​ಪಕ್ಕೆ ನೂ​ಕು​ತ್ತಿ​ದ್ದಾರೆ ಎಂದು ದೂ​ರಿ​ದರು.

ಡಾ. ಅ​ಕಾ​ಲಪ್ಪರೆಡ್ಡಿ ಅ​ವರು ಪ​ಶು​ವೈ​ದ್ಯ​ರಾ​ಗಿದ್ದು, ಅ​ವ​ರನ್ನು ಅ​ವರ ಕಾ​ರ‍್ಯಕ್ಕೆ ನೇ​ಮಿ​ಸದೆ ಆ​ಡ​ಳಿತ ವಿ​ಭಾ​ಗದ ಮು​ಖ್ಯ​ಸ್ಥ​ರಾಗಿ ನೇ​ಮಿ​ಸಿ​ರು​ವುದು ಆ​ಡ​ಳಿತ ಮಂಡ​ಳಿಯ ವೈ​ಫ​ಲ್ಯಕ್ಕೆ ಹಿ​ಡಿದ ಕೈ​ಗ​ನ್ನ​ಡಿ​ಯಾ​ಗಿದೆ.

ಮೆಗಾ​ಡೈರಿ ಹೆ​ಸ​ರಿ​ನಲ್ಲಿ 30 ಟನ್‌ ಸಾ​ಮರ್ಥ್ಯವುಳ್ಳ ಪೌ​ಡರ್‌ ಪ್ಲಾಂಟನ್ನು ಉ​ತ್ಪಾ​ದ​ಕರ ಹಾ​ಲಿನ ಹ​ಣ​ದಲ್ಲಿ ಮಾ​ಡಲು ಹೊ​ರ​ಟಿ​ರು​ವುದು ಹೊ​ಳೆ​ಯಲ್ಲಿ ಹು​ಣ​ಸೇ​ಹ​ಣ್ಣು ತೇ​ಯ್ದಂತಾ​ಗಿದೆ. ಕ​ಳೆದ ಸಾ​ಲಿನ ಆ​ಡ​ಳಿತ ಮಂಡಳಿ ಅ​ಕ್ರ​ಮ ಎ​ಸಗಿ  72 ಕೋಟಿ ರು. ದು​ರು​ಪ​ಯೋ​ಗ​ ಎಸ​ಗಿ​ರು​ವುದು ಸಾಬೀ​ತಾ​ಗಿ​ದೆ. ಈ ಹಣ ವ​ಸೂಲಿ ಮಾಡಿ ಎಂದು ಸರ್ಕಾರದ ಸೂ​ಚನೆ ಇ​ದ್ದರೂ ಇನ್ನೂ ಸಹ ತ​ನಿಖೆ ಮಾ​ಡಲು ಮುಂದಾ​ಗದೆ. ಈ ಅ​ಕ್ರ​ಮ​ವನ್ನು ಮು​ಚ್ಚಿ​ಹಾ​ಕುವ ಹು​ನ್ನಾರ ನ​ಡೆ​ಸ​ಲಾ​ಗು​ತ್ತಿದೆ ಎಂದು ದೂ​ರಿ​ದರು.

Follow Us:
Download App:
  • android
  • ios