ಮಂಡ್ಯ [ಜೂ.28] : ಕೆಆರ್ ಎಸ್ ನಿಂದ ಮಂಡ್ಯಕ್ಕೆ ನೀರು ಹರಿಸಲು ಕರ್ನಾಟಕ ಸರ್ಕಾರ ಮುಂದಾಗದ ಹಿನ್ನೆಲೆಯಲ್ಲಿ  ಸಿಎಂ ಗೆ ಖಡಕ್ ವಾರ್ನಿಂಗ್  ನೀಡಲಾಗಿದೆ. 

ಸಿಎಂ ಕುಮಾರಸ್ವಾಮಿ ಅವರೇ ನೀವು ಮಂಡ್ಯದ ಜಮೀನಿನ ಮೇಲೆ ಓಡಾಡಬೇಕು. ಈಗ ನೀವು ನೀರು ಕೊಡದೇ ಹೋದರೆ ಮಂಡ್ಯದಲ್ಲಿ ಹೇಗೆ ಓಡಾಡುತ್ತೀರೋ ನೋಡುತ್ತೇವೆ ಎಂದು ರೈತ ಮುಖಂಡ ಬಡಗಲಪುರ ನಾಗೇಂದ್ರ ಎಚ್ಚರಿಸಿದ್ದಾರೆ. 

ನಮಗೆ ದೆಹಲಿಗೆ ಹೋಗಿ ಹೋರಾಟ ಮಾಡಿ ಎನ್ನುತ್ತೀರಿ. ನಿಮ್ಮನ್ನು ಆಯ್ಕೆ ಮಾಡಿರುವುದು ನಮ್ಮ ಕೆಲಸ ಮಾಡುವುದಕ್ಕೆ. ನಮ್ಮ ಅಹವಾಲನ್ನು ನೀವು ದೆಹಲಿಯಲ್ಲಿ ಪ್ರತಿನಿಧಿಸಬೇಕು. ಆದರೆ ನಮ್ಮ ಅಹವಾಲಿಗೆ ನಿಮ್ಮಿಂದ ಯಾವುದೇ ಪ್ರತಿಕ್ರಿಯೆ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

"

ಇನ್ನು ನಿಮಗೆ ಜನರ ಹಿತದೃಷ್ಟಿಯಿಂದ ಕೆಲಸ ಮಾಡಲು ಆಗದಿದ್ದರೆ ರಾಜೀನಾಮೆ ಕೊಟ್ಟು ಹೋಗಿ ಎಂದು ರೈತ ಮುಖಂಡ ಬಡಗಲಪುರ ನಾಗೇಂದ್ರ, ಮುಖ್ಯಮಂತ್ರಿ ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.

"

"