ಕುಡಿದ ಅಮಲಿನಲ್ಲಿ ತಂದೆಯೊಬ್ಬ ನಡುರಾತ್ರಿಯಲ್ಲಿ ತನ್ನ ಒಂದೂವರೆ ವರ್ಷದ ಹೆಣ್ಣು ಮಗುವಿನೊಂದಿಗೆ ಬೈಕ್‌ ಸಮೇತ ನಿದ್ದೆಗೆ ಜಾರಿದ ಘಟನೆ ಇತ್ತೀಚೆಗೆ ನಡೆದಿದೆ.

ಉತ್ತರ ಕನ್ನಡ(ಮೇ.07): ಕೋವಿಡ್‌-19 ನಿಮಿತ್ತ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮದ್ಯ ಮಾರಾಟ ಸ್ಥಗಿತಗೊಳಿಸಲಾಗಿತ್ತು. ಹೀಗಾಗಿ ಮೇ 4ರಂದು ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ಇದರಿಂದಾಗಿ ಯಾದಗಿರಿ ಮೂಲದ ಬೈಕ್‌ ಸವಾರ ಕಂಠಪೂರ್ತಿ ಕುಡಿದು ತನ್ನ ಒಂದೂವರೆ ವರ್ಷದ ಹೆಣ್ಣು ಮಗುವಿನೊಂದಿಗೆ ತಡರಾತ್ರಿ ಯಾದಗಿರಿ ತೆರಳುವಾಗ ಕತಗಾಲ ಸಮೀಪ ದೇವಿಮನೆ ಘಟ್ಟದಲ್ಲಿ ಮದ್ಯದ ಅಮಲಿನಲ್ಲಿ ಬೈಕ್‌ ಚಲಾಯಿಸಲು ಸಾಧ್ಯವಾಗದೇ ತನ್ನ ಮಗುವಿನೊಂದಿಗೆ ನಿದ್ರೆಗೆ ಜಾರಿದ್ದಾನೆ.

ಕೊಡಗು-ಕೇರಳ ಸಂಚಾರಕ್ಕೆ ಸೇವಾ ಸಿಂಧು ಪಾಸ್‌ಗೆ ಮಾತ್ರ ಅವಕಾಶ

ಈ ಸಂದರ್ಭದಲ್ಲಿ ಏನು ಅರಿಯದ ಹಸುಳೆ ನಿದ್ರೆಯಲ್ಲಿತ್ತು ಎನ್ನಲಾಗಿದೆ. ಅದೃಷ್ಟವಶಾತ್‌ ಕಾಡುಪ್ರಾಣಿಗಳು ಮಗುವಿಗೆ ಯಾವುದೇ ತೊಂದರೆ ಮಾಡಿಲ್ಲ. ಆನಂತರ ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಆಗಮಿಸಿ ತಂದೆ ಮತ್ತು ಮಗಳನ್ನು ಕತಗಾಲಕ್ಕೆ ಕರೆತಂದು ಮಾರನೇ ದಿನ ಯಾದಗಿರಿಗೆ ಕಳುಹಿಸಿ ಮಾನವೀಯತೆ ಮೆರೆದಿದ್ದಾರೆ.