ಮೈಸೂರು(ಮಾ.0): ನಾಲ್ಕು ತಿಂಗಳ ಹಿಂದೆ ಅವರಿಬ್ಬರ ನಿಶ್ಚಿತಾರ್ಥ ನೆರವೇರಿತ್ತು. ಯುವತಿ ತಾನು ಮದುವೆಯಾಗುವ ಯುವಕನನ್ನು ಸಪ್ರೈಸ್‌ ಕೊಡೋದಾಗಿ ಮನೆಗೆ ಕರೆಸಿಕೊಂಡಿದ್ದಳು. ತನ್ನ ಭಾವಿ ವಧುವನ್ನು ನೋಡಲು ಹೋದ ಯುವಕನಿಗೆ ಆಕೆ ಕೊಟ್ಟ ಸಪ್ರೈಸ್ ಮಾತ್ರ ಭಯಾನಕ.

ಸಪ್ರೈಸ್ ಕೊಡುವುದಾಗಿ ಯುವಕನನ್ನು ಮನೆಗೆ ಕರೆಸಿಕೊಂಡ ಯುವತಿ ಆತನ ಕಣ್ಣಿಗೆ ಬಟ್ಟೆ ಕಟ್ಟಿದ್ದಾಳೆ. ನಂತರ ಚಾಕು ಇರಿದು ಎಸ್ಕೇಪ್ ಆಗಿದ್ದಾಳೆ. ಇಂತಹದೊಂದು ವಿಲಕ್ಷಣ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

ಗೆಳೆಯನ ಮಂಚಕ್ಕೆ ದೂಡಿದ ಪತಿ, ಗೃಹಿಣಿ ಆತ್ಮಹತ್ಯೆ

ಮದುವೆ ನಿಶ್ಚಯವಾಗಿದ್ದ ಯುವನಿಗೆ ಮದುವೆ ಹುಡುಗಿಯಿಂದಲೇ ಚಾಕು ಇರಿತವಾಗದ್ದು, ಪಿರಿಯಾಪಟ್ಟಣದ ತಾಲೂಕಿನ ಸುರಗಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಸುರಗಳ್ಳಿ ಗ್ರಾಮದ ರವಿಕುಮಾರ್ ಚಾಕು ಇರಿತಕೊಳಗಾದ ಯುವಕ. ವಿ.ಜಿ.ಕೊಪ್ಪಲಿನ ಅರುಣಿ ಚಾಕು ಇರಿದ ಯುವತಿ.

ನಾಲ್ಕು ತಿಂಗಳ ಹಿಂದೆ ಇಬ್ಬರಿಗೂ ವಿವಾಹ ನಿಶ್ಚಯವಾಗಿತ್ತು. ಸೋಮವಾರ ಸಂಜೆ ಯುವತಿ ಮನೆಗೆ ತೆರಳಿದ್ದ ವೇಳೆ ಘಟನೆ ನಡೆದಿದೆ. ನಿನಗೆ ಸರ್ಪ್ರೈಸ್ ತೋರಿಸುತ್ತೇವೆ ಅಂತ ಕಣ್ಣಿಗೆ ಬಟ್ಟೆ ಕಟ್ಟಿ ಕೃತ್ಯ ನಡೆಸಲಾಗಿದೆ. ಇದೀಗ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿರುವ ಯುವತಿ ಕೃತ್ಯದ ಕಾರಣವನ್ನೂ ಬಿಚ್ಚಿಟ್ಟಿದ್ದಾಳೆ.

ಕಾಲೇಜ್‌ ಡೇ ದಿನ ಮದ್ಯ ಸೇವನೆ: ಡಿಗ್ರಿ ವಿದ್ಯಾರ್ಥಿ ಆತ್ಮಹತ್ಯೆ

ವ್ಯಾಸಂಗ ಮಾಡಲು ಇಷ್ಟ ಇತ್ತು. ಆದರೆ ಮನೆಯಲ್ಲಿ ಎಷ್ಟೇ ಹೇಳಿದರೂ ಕೇಳದೆ ಮದುವೆ ನಿಶ್ಚಯ ಮಾಡಿದ್ದಾರೆ. ಇದರಿಂದ ಬೇಸತ್ತು ತಾನೇ ಚಾಕು ಇರಿದಿರುವುದಾಗಿ ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ. ಬೆಟ್ಟದಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.