ಫೋನ್‌ ಸ್ವಿಚಾಫ್‌ ಮಾಡಿದ್ದಕ್ಕೆ ಭಾವಿ ಪತ್ನಿಯನ್ನೇ ಕೊಂದ!

ಫೋನ್ ಸ್ವಿಚ್ ಮಾಡಿದ್ದಾಳೆ ಎನ್ನುವ ಕ್ಷುಲ್ಲಕ ಕಾರಣಕ್ಕೆ ಭಾರಿ ಪತ್ನಿಯನ್ನೇ ಯುವಕನೋರ್ವ ಕೊಲೆಗೈದಿದ್ದಾನೆ. 

Man Killed His Future Wife in Belagavi

ಮೂಡಲಗಿ [ಡಿ.11]: ತಾನು ಕರೆ ಮಾಡಿದಾಗ ಫೋನ್‌ ಸ್ವಿಚ್‌ ಆಫ್‌ ಆದ ಹಿನ್ನೆಲೆಯಲ್ಲಿ ಕೋಪಗೊಂಡ ಭಾವಿ ಪತಿಯೊಬ್ಬ ಯುವತಿಯ ಕುತ್ತಿಗೆಗೆ ವೈರ್‌ನಿಂದ ಬಿಗಿದು ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುಜನಟ್ಟಿಗ್ರಾಮದಲ್ಲಿ ಸೋಮವಾರ ನಡೆದಿದೆ. 

ಗ್ರಾಮದ ತೋಟದ ನಿವಾಸಿ ಸಿದ್ಧಾರೂಢ ಲಕ್ಷ್ಮಣ ಬಂಡ್ರೋಳಿ ಎಂಬುವರ ಪುತ್ರಿ ನಿಂಗವ್ವಳ(18) ಕೊಲೆಯಾದವಳು. ಪ್ರಕರಣಕ್ಕೆ ಸಂಬಂಧಿಸಿದಂತೆ ಸವದತ್ತಿ ತಾಲೂಕಿನ ಮುಗಳಿಯಾಳ ಗ್ರಾಮದ ರಮೇಶ್‌ ಲಕ್ಷ್ಮಣ ಕತ್ತಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಸವದತ್ತಿ ತಾಲೂಕಿನ ಮುಗಳಿಯಾಳ ಗ್ರಾಮದ ರಮೇಶ್‌ ಲಕ್ಷ್ಮಣ ಕತ್ತಿ ಎಂಬಾತನೊಂದಿಗೆ ಒಂದು ವರ್ಷದ ಹಿಂದೆ ನಿಂಗವ್ವ ಸಿದ್ಧಾರೂಢ ಬಂಡ್ರೋಳಿ ಅವಳ ವಿವಾಹ ಮಾಡುವುದಾಗಿ ಹಿರಿಯರು ನಿಶ್ಚಯಿಸಿದ್ದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಯುವಕ ಫೋನ್‌ನಲ್ಲಿ ಯುವತಿ ಜೊತೆ ಮಾತನಾಡುತ್ತಿದ್ದ. ಡಿ.9 ರಂದು ನಿಂಗವ್ವಳಿಗೆ ಫೋನ್‌ ಮಾಡಿದಾಗ ಆಕೆ ಫೋನ್‌ ಸ್ವಿಚ್‌ ಆಫ್‌ ಇಟ್ಟುಕೊಂಡಿದ್ದಾಳೆ. ಇದರಿಂದ ಕೋಪಗೊಂಡ ಯುವಕ ರಮೇಶ್‌ ಯುವತಿಯ ಮನೆಗೆ ಬಂದಿದ್ದಾನೆ. ಆಗ ನಿಂಗವ್ವ ಬೇರೆಯವರ ಮನೆಗೆ ಹೋಗಿದ್ದಳು. 

ಈ ಸಂಗತಿ ತಿಳಿದು ಯುವತಿಯನ್ನು ಆಕೆಯ ಮನೆಗೆ ಕರೆದುಕೊಂಡು ಬಂದಿದ್ದಾನೆ. ಆಗ ನಿಂಗವ್ವಳ ಕುತ್ತಿಗೆಗೆ ವೈರ್‌ನಿಂದ ಬಿಗಿದು ಕೊಲೆ ಮಾಡಿದ್ದಾನೆ. ಈ ಬಗ್ಗೆ ಯುವತಿ ತಂದೆ ಮೂಡಲಗಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

Latest Videos
Follow Us:
Download App:
  • android
  • ios