ಬೆಂಗಳೂರು, (ಮೇ.28): ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಾನೆ ಎಂದು ಸ್ನೇಹಿತನನ್ನೇ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಪಟೇಗಾರಪಾಳ್ಯದಲ್ಲಿ ನಡೆದಿದೆ.

ರಾಬಿನ್(35) ಹತ್ಯೆಯಾದವನು. ಆರೋಪಿ ತನ್ವೀರ್ ಖಾನ್ ಅಲಿಯಾಸ್‌ ಶಾರುಖ್ ಖಾಖ್​​ ಕೃತ್ಯ ಎಸಗಿದ್ದಾನೆ.

ಮೃತ ರಾಬಿನ್ ಹಾಗೂ ಆತನ ಪತ್ನಿ ಜತೆ ಆರೋಪಿ ತನ್ವೀರ್ ಕೂಡ ಚಿಂದಿ ಆಯುವ ಕೆಲಸ ಮಾಡುತ್ತಿದ್ದು, ನಿರ್ಧಿಷ್ಟ ಮನೆಗಳಿಲ್ಲದೆಯೇ ಪಟೇಗಾರ ಪಾಳ್ಯದ ಶೆಡ್ ನಲ್ಲಿ ವಾಸವಾಗಿದ್ದರು.

ಮೃತ ರಾಬಿನ್ ಪತ್ನಿ ಮೇಲೆ ತನ್ವೀರ್ ಕಣ್ಣು ಹಾಕಿದ್ದು ಇದನ್ನು ತಿಳಿದ ರಾಬಿನ್  ತನ್ವೀರ್‌ನೊಂದಿಗೆ ಜಗಳವಾಡಿದ್ದಾನೆ. ಹೀಗಾಗಿ ತನ್ವೀರ್, ರಾಬಿನ್ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ ಮಾಡಿದ್ದಾನೆ. 

ಘಟನೆ ಬಳಿಕ ಆರೋಪಿ ತನ್ವೀರ್‌ನನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ವಿಜಯನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.