Asianet Suvarna News Asianet Suvarna News

ಕುಡಿದ ಮತ್ತಲ್ಲಿ ಭಾವನಿಗೆ ಗುಂಡಿಟ್ಟು ಕೊಂದ ಭಾಮೈದ

  • ಕುಡಿದ ಅಮಲಿನಲ್ಲಿ ಮಾತಿಗೆ ಮಾತು ಬೆಳೆದು ಕೊಲೆ
  • ಬಾವನನ್ನು ಬಾಮೈದ ಗುಂಡಿಕ್ಕಿ ಕೊಲೆ ಮಾಡಿದ  
  • ಕೋಲಾರ ಜಿಲ್ಲೆ ಮಾಲೂರು ತಾಲೂಕು ಗೊಲ್ಲಹಳ್ಳಿ ಗ್ರಾಮದಲ್ಲಿ ಘಟನೆ
Man  killed his brother in law in Kolar snr
Author
Bengaluru, First Published Jul 5, 2021, 7:22 AM IST
  • Facebook
  • Twitter
  • Whatsapp

ಮಾಲೂರು (ಜು.05): ಕುಡಿದ ಅಮಲಿನಲ್ಲಿ ಮಾತಿಗೆ ಮಾತು ಬೆಳೆದು ಬಾವನನ್ನು ಬಾಮೈದ ಗುಂಡಿಕ್ಕಿ ಕೊಲೆ ಮಾಡಿದ ಘಟನೆ ಶನಿವಾರ ರಾತ್ರಿ ಗೊಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ. 

ತಾಲೂಕಿನ ಲಕ್ಕೂರು ಹೋಬಳಿಯ ಚಿಕ್ಕತಿರುಪತಿ ಗ್ರಾಪಂನ ಗೊಲ್ಲಹಳ್ಳಿಯ ಮುನಿಯಪ್ಪ (35 ) ಗುಂಡೇಟಿಗೆ ಬಲಿಯಾದವರು. ಆರೋಪಿ ವೆಂಕಟೇಶ್‌ ಪರಾರಿಯಾಗಿದ್ದಾನೆ. ಮುನಿಯಪ್ಪ ಹಾಗು ವೆಂಕಟೇಶ್‌ ಅವರು ಭಾವ ಭಾಮೈದನರಾಗಿದ್ದು ಪ್ರತಿನಿತ್ಯ ಕುಡಿದು ಕ್ಷುಲಕ ಕಾರಣಕ್ಕೆ ಜಗಳವಾಡಿಕೊಳ್ಳುತ್ತಿದ್ದರು ಎನ್ನಲಾಗಿದೆ.

ಮಗನ ವಯಸ್ಸಿನವನ ಜೊತೆ ಅಕ್ರಮ ಸಂಬಂಧ : ಗಂಡನನ್ನೇ ಕೊಂದಳು .

 ಶನಿವಾರ ರಾತ್ರಿಯೂ ಕುಡಿದ ಅಮಲಿನಲ್ಲಿ ಮತ್ತೇ ಜಗಳವಾಡಿದ್ದು ವೆಂಕಟೇಶ್‌ ಬಂದೂಕಿನಿಂದ ಗುಂಡು ಹಾರಿಸಿದ ಪರಿಣಾಮ ಮುನಿಯಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಾಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow Us:
Download App:
  • android
  • ios