ಇದೊಂಥರಾ 'ಕಿರಿಕ್ ಪಾರ್ಟಿ'ಯನ್ನು ನೆನಪಿಸುವ ಘಟನೆ. ಸ್ನೇಹಿತರೊಂದಿಗೆ ನಾಲ್ಕನೇ ಮಹಡಿಯಲ್ಲಿ ಪಾರ್ಟಿ ಮಾಡುತ್ತಿದ್ದ ಯುವಕ ಕೆಳಗೆ ಬಿದ್ದು, ಅಸುನೀಗಿದ್ದಾನೆ. ಆದರೆ, ಸಾವಿಗೆ ನಿಖರ ಕಾರಣ ತಿಳಿದು ಬಾರದಿದ್ದರೂ, ಕಿರಿಕ್ ಚಿತ್ರದಲ್ಲಿ ನಡೆದಂಥ ಘಟನೆ ಇರಬಹುದೆಂದು ಹೇಳಲಾಗುತ್ತಿದೆ.
ಹುಬ್ಬಳ್ಳಿ(ಜು.12): ಮಹಡಿಯಿಂದ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಪುಣೆ ಮೂಲದ ಅರುಣಕುಮಾರ ನವಲೆ(30) ಮೃತರು. ಅರುಣಕುಮಾರ ಕೆಲಸ ನಿಮಿತ್ತ ಸ್ನೇಹಿತರೊಂದಿಗೆ ಹುಬ್ಬಳ್ಳಿಗೆ ಆಗಮಿಸಿದ್ದರು.
ಹುಬ್ಬಳ್ಳಿಯ ತೃಪ್ತಿ ಇಂಟರ್ನ್ಯಾಷನಲ್ ಹೋಟೆಲ್‌ನಲ್ಲಿ ಸ್ನೇಹಿತರೊಂದಿಗೇ ಅರುಣಕುಮಾರ ಅವರೂ ಉಳಿದುಕೊಂಡಿದ್ದರು. ತಡರಾತ್ರಿ ಕುಡಿದು ಪಾರ್ಟಿ ಮಾಡುತ್ತಿದ್ದ ಸಂದರ್ಭ ಎಲ್ಲರೂ ಜೊತೆಗೇ ಡ್ಯಾನ್ಸ್ ಮಾಡುತ್ತಿದ್ದರು.
ಸ್ನೇಹಿತರೊಂದಿಗೆ ಡ್ಯಾನ್ಸ್ ಮಾಡುವ ಸಂದರ್ಭ ಕಿಟಕಿಯಿಂದ ಅರುಣಕುಮಾರ ನವಲೆ ಆಯತಪ್ಪಿ ಬಿದ್ದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
