ಕೋಲಾರ(ಏ.16): ಲಾಕ್‌ಡೌನ್‌ ಮುಂದುವರೆದ ವಿಚಾರ ತಿಳಿದು ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಘಟನೆ ಮಾಲೂರು ತಾಲೂಕಿನ ಮಾಸ್ತಿಯಲ್ಲಿ ನಡೆದಿದೆ.

ಮಾಸ್ತಿಯ ನಿವಾಸಿ ಮುರುಗೇಶ್‌(48) ಎಂಬುವರು ಮೃತ ದುರ್ದೈವಿ. ಬಡತನ, ಮಕ್ಕಳ ಮದುವೆ ಚಿಂತೆಯಲ್ಲಿದ್ದ ಮೃತ ಮುರುಗೇಶ್‌ ಲಾಕ್‌ಡೌನ್‌ ಮುಂದುವರೆಯುವ ವಿಚಾರ ಟಿವಿಯಲ್ಲಿ ನೋಡುವಾಗ ಆತಂಕಗೊಂಡು ಕುಸಿದು ಬಿದ್ದು ಸಾವನಪ್ಪಿದರು ಎನ್ನಲಾಗಿದೆ. ಕೂಲಿ ನಾಲಿ ಮಾಡಿ ಜೀವನ ಸಾಗಿಸುತ್ತಿದ್ದ ಮೃತ ಮುರುಗೇಶ್‌ಗೆ 4 ಜನ ಹೆಣ್ಣು ಮಕ್ಕಳಿದ್ದು ಕೆಲವರಿಗೆ ಮದುವೆ ಮಾಡಬೇಕಿತ್ತು.

ಲಾಕ್ ಡೌನ್ ವಿಸ್ತರಣೆಗೆ ಬೇಸತ್ತು ನೇಣು ಬಿಗಿದು ಅರ್ಚಕ ಆತ್ಮಹತ್ಯೆ..!

ಲಾಕ್‌ಡೌನ್‌ ಮುಂದುವರೆದರೆ ತಮ್ಮ ಕೆಲಸ ಕಾರ್ಯಗಳಿಗೆ ತೊಂದರೆ ಆಗಿ ಸಂಸಾರ ನಡೆಸುವುದು ಕಷ್ಟವಾಗುತ್ತದೆ ಎಂದು ಮುರುಗೇಶ್‌ ಹೇಳಿಕೊಂಡಿದ್ದರು ಎಂದು ಅವರ ಸ್ನೇಹಿತರು ಹೇಳಿದರು. ಮಾಸ್ತಿ ಪೊಲೀಸ್‌ ಠಾಣಾ ವ್ಯಾಪ್ತಿ ಈ ಘಟನೆ ನಡೆದಿದ್ದು ಮುರುಗೇಶ್‌ ಅವರನ್ನೇ ನಂಬಿಕೊಂಡಿದ್ದ ಕುಟುಂಬಕ್ಕೆ ದಿಕ್ಕು ಕಾಣದಂತಾಗಿದೆ.