ಶಿವಮೊಗ್ಗ : ರೈಲಿಗೆ ಸಿಲುಕಿ ವ್ಯಕ್ತಿ ಆತ್ಮಹತ್ಯೆ

  • ಚಲಿಸುವ ರೈಲಿಗೆ ಸಿಲುಕಿ ವ್ಯಕ್ತಿಯೋರ್ವ  ಆತ್ಮಹತ್ಯೆಗೆ ಶರಣು
  • ಶಿವಮೊಗ್ಗದ ಹರಿಗೆ ಮತ್ತು ಮಲವಗೊಪ್ಪದ ನಡುವೆ ಇರುವ ಯಲವಟ್ಟಿ ರೈಲ್ವೆ ಗೇಟ್ ಬಳಿ ದುರ್ಘಟನೆ
Man commits Suicide in Shivamogga snr

ಶಿವಮೊಗ್ಗ (ಆ.08): ಚಲಿಸುವ ರೈಲಿಗೆ ಸಿಲುಕಿ ವ್ಯಕ್ತಿಯೋರ್ವ  ಆತ್ಮಹತ್ಯೆಗೆ ಶರಣಾದ ಘಟನೆ ಶಿವಮೊಗ್ಗದಲ್ಲಿ ಶನಿವಾರ ಸಂಜೆ ನಡೆದಿದೆ. 

ಶಿವಮೊಗ್ಗದ ಹರಿಗೆ ಮತ್ತು ಮಲವಗೊಪ್ಪದ ನಡುವೆ ಇರುವ ಯಲವಟ್ಟಿ ರೈಲ್ವೆ ಗೇಟ್ ಬಳಿ ದುರ್ಘಟನೆ ನಡೆದಿದೆ.  ಮೃತ ವ್ಯಕ್ತಿಯನ್ನು ಶಿವಮೊಗ್ಗದ ರಾಗಿಗುಡ್ಡ ನಿವಾಸಿ ಅವಿನಾಶ್ ಎಂದು ಗುರುತಿಸಲಾಗಿದೆ. 

ಕೋಲಾರ: ಮೊಬೈಲ್‌ ಫೋನ್‌ ಸಾಗಿಸುತ್ತಿದ್ದ ಲಾರಿ ದರೋಡೆ..!

ಶನಿವಾರ ಸಂಜೆ ಸುಮಾರು 5 ಗಂಟೆ ವೇಳೆಗೆ ಈ ಘಟನೆ ಸಂಭವಿಸಿದ್ದು, ತಾಳಗುಪ್ಪ - ಮೈಸೂರು ಇಂಟರ್ ಸಿಟಿ ರೈಲಿಗೆ ಅವಿನಾಶ್ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ. 

ಅವಿನಾಶ್‌ ರಾಗಿಗುಡ್ಡದ ನಿವಾಸಿಯಾಗಿದ್ದು ಡಿಟಿ ಕಂಪನಿಯಲ್ಲಿ ಮೆಡಿಕಲ್ ರೆಪ್ರಸೆಂಟಿಟಿವ್ ಎಂದು ಹೇಳಲಾಗುತ್ತಿದೆ. ಇಬ್ಬರು ಸಹೋದರಿಯರು ತಂದೆ ಇದ್ದು, ಈತನ ತಂದೆ ಸ್ವಂತ ವ್ಯಾಪಾರ ಮಾಡಿಕೊಂಡಿದ್ದಾರೆ. 

ಅವಿನಾಶ ಆತ್ಮಹತ್ಯೆ ಮಾಡಿಕೊಳ್ಳಲು ನಿಖರ ಕಾರಣ ತಿಳಿದುಬಂದಿಲ್ಲ. 

ಈ ಸಂಬಂಧ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. 

Latest Videos
Follow Us:
Download App:
  • android
  • ios