ಉಡುಪಿ (ಅ.04): ಕೋವಿಡ್‌ ಸೋಂಕಿತ ವ್ಯಕ್ತಿಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ಜಿಲ್ಲೆ ಕಾರ್ಕಳದಲ್ಲಿ ಶನಿವಾರ ನಡೆದಿದೆ.

ವೃತ್ತಿಯಲ್ಲಿ ಛಾಯ ಚಿತ್ರಗ್ರಾಹಕರಾಗಿದ್ದ 46 ಹರೆಯದ ವ್ಯಕ್ತಿ ಮೃತರು. ಅವರು ಇಲ್ಲಿನ ಮಾರ್ಕೆಟ್‌ ರಸ್ತೆಯ ರಾಧಿಕಾ ಟಾಕೀಸ್‌ ಬಳಿ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು. 

ಕೊರೋನಾ ಲಾಕ್‌ಡೌನ್‌ನಿಂದ ಸಂಪಾದನೆ ಇಲ್ಲದೇ ಸಂಕಷ್ಟದಲ್ಲಿದ್ದ ಅವರಿಗೆ ಇತ್ತೀಚೆಗೆ ಜ್ವರ ಕಾಣಿಸಿಕೊಂಡಿತ್ತು. ನಂತರ ಕೋವಿಡ್‌ ಸೋಂಕು ಪತ್ತೆಯಾಗಿದ್ದು, ಮನೆಯಲ್ಲಿದ್ದು ಚಿಕಿತ್ಸೆ ಪಡೆಯುತಿದ್ದರು. 

ಕೋವಿಡ್‌ ಹಿನ್ನೆಲೆಯಲ್ಲಿ ತೀವ್ರವಾಗಿ ನೊಂದುಕೊಂಡಿದ್ದ ಅವರು ಶನಿವಾರ ಸಂಜೆ ಮನೆ ಮುಂಭಾಗದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.