ರಕ್ಷಿತಾ ಹತ್ಯೆ ಪ್ರಕರಣ: ರೇಖಾಚಿತ್ರ ಸಹಾಯದಿಂದ ಆರೋಪಿ ಅಂದರ್!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 3, Aug 2018, 2:56 PM IST
Malur Girl Murder Case: Police arrested the accuse
Highlights

ಮಾಲೂರು ವಿದ್ಯಾರ್ಥಿನಿ ಹತ್ಯೆ ಪ್ರಕರಣ! ರೇಖಾಚಿತ್ರ ಆಧರಿಸಿ ಆರೋಪಿ ಬಂಧನ! 10ನೇ ತರಗತಿ ವಿದ್ಯಾರ್ಥಿ ಹತ್ಯೆ ಪ್ರಕರಣ! ರಂಜಿತ್ ಎಂಬ ಆರೋಪಿಯನ್ನು ಬಂಧಿಸಿದ ಪೊಲೀಸರು

 

ಕೋಲಾರ(ಆ.೩): ಜಿಲ್ಲೆಯ ಮಾಲೂರಿನಲ್ಲಿ ನಡೆದಿದ್ದ 10ನೇ ತರಗತಿ ವಿದ್ಯಾರ್ಥಿನಿ ಅತ್ಯಾಚಾರ ಯತ್ನ ಹಾಗೂ ಕೊಲೆ ಪ್ರಕರಣದ ಆರೊಪಿಯನ್ನು ಬಂಧಿಸುವಲ್ಲಿ ಮಾಲೂರು ಪೋಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಯನ್ನು ರಂಜಿತ್ (22) ಎಂದು ಗುರುತಿಸಲಾಗಿದ್ದು, ಈತ ಸಹ ಮಾಲೂರಿನ ನಿವಾಸಿಯಾಗಿದ್ದಾನೆ.ಲೂರು ಪೋಲೀಸರು ಯಶಸ್ವಿಯಾಗಿದ್ದಾರೆ. ಇವನು ಮೃತ ಬಾಲಕಿಯ ಮನೆ ಸಮೀಪವೇ ಗಾರೆ ಕೆಲಸ ನಿರ್ವಹಿಸುತ್ತಿದ್ದ ಎಂದು ತಿಳಿದುಬಂದಿದೆ.

ಆರೋಪಿಯ ರೇಖಾಚಿತ್ರದ ಆಧಾರದಲ್ಲಿ ರಂಜಿತ್ ಬಂಧನವಾಗಿದ್ದು ಕೊಲೆಗೆ ನಿಖರ ಕಾರಣ ಇನ್ನೂ ಪತ್ತೆಯಾಗಿಲ್ಲ. ಸಧ್ಯ ರಂಜಿತ್ ನನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲು ಪೋಲೀಸರು ನಿರ್ಧರಿಸಿದ್ದಾರೆ.

ಕಳೆದ ಬುಧವಾರ ಹೋಬಳಿ ಮಟ್ಟದ ಕ್ರೀಡಾಕೂಟ ಮುಗಿಸಿ ಮನೆಗೆ ತೆರಳುತ್ತಿದ್ದ 1 ಬಿಜೆಎಸ್ ಶಾಲೆಯ ವಿದ್ಯಾರ್ಥಿನಿಯನ್ನು ಅಪಹರಿಸಿದ್ದ ದುಷ್ಕರ್ಮಿಗಳು, ಮಾಲೂರು  ರೈಲ್ವೇ ಅಂಡರ್ ಪಾಸ್ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹತ್ಯೆ ಮಾಡಿದ್ದರು. ಮೊಂಡು ಆಯುಧದಿಂದ ವಿದ್ಯಾರ್ಥಿನಿಯ ತಲೆಗೆ ಹೊಡೆದು ಕೊಲೆ ಮಾಡಲಾಗಿತ್ತು. ಹತ್ಯೆಗೆ ಮುನ್ನ ಅತ್ಯಾಚಾರಕ್ಕೆ ಯತ್ನಿಸಿರುವ ಶಂಕೆ ವ್ಯಕ್ತವಾಗಿತ್ತು. 

loader