ಮೆಕ್ಕೆಜೋಳ ಬೆಳೆದ ಪ್ರತಿ ರೈತರಿಗೆ 5 ಸಾವಿರ ರುಪಾಯಿ ಪೋತ್ಸಾಹ ಧನ: ರೇಣುಕಾಚಾರ್ಯ
ಸರ್ಕಾರದ ಮಾರ್ಗಸೂಚಿಯಂತೆ ಕಂದಾಯ ಹಾಗೂ ತೋಟಗಾರಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸಮೀಕ್ಷೆ ನಡೆಸಿ ಮುಸುಕಿನಜೋಳ ಬೆಳೆದ ಪ್ರತಿಯೊಬ್ಬ ರೈತರಿಗೆ 5 ಸಾವಿರ ಪೋತ್ಸಾಹ ಧನ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲು ಕ್ರಮವಹಿಸಿದ್ದಾರೆ ಎಂದು ಹೊನ್ನಾಳಿ ಶಾಸಕ ರೇಣುಕಾಚಾರ್ಯ ತಿಳಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಹೊನ್ನಾಳಿ(ಜೂ.18): ಮುಸುಕಿನ ಜೋಳ ಬೆಳೆದ ರೈತರಿಗೆ ಲಾಕ್‌ಡೌನ್ ಹಿನ್ನೆಲೆ ಸಕಾಲದಲ್ಲಿ ಮಾರುಕಟ್ಟೆಗೆ ಸಾಗಾಟಕ್ಕೆ ಅಡಚರಣೆ ಉಂಟಾದ ಕಾರಣ ಮೆಕ್ಕೆಜೋಳ ಬೆಳೆದ ಪ್ರತಿ ರೈತರಿಗೆ ಮುಖ್ಯಮಂತ್ರಿ ಯಡಿಯೂರಪ್ಪ 5 ಸಾವಿರ ಪೋ›ತ್ಸಾಹ ಧನ ಬಿಡುಗಡೆ ಮಾಡಿ ರೈತರ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆಂದು ಶಾಸಕ ರೇಣುಕಾಚಾರ್ಯ ಹೇಳಿದರು. ತಾಲೂಕು ಕಚೇರಿಯಲ್ಲಿ ನಡೆದ ಕಂದಾಯ, ತೋಟಗಾರಿಕೆ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮೊದಲನೇ ಹಂತದಲ್ಲಿ ಏಕ ಮಾಲೀಕತ್ವದ ಪಹಣಿ ಹೊಂದಿರುವ ಅವಳಿ ತಾಲೂಕಿನ ಮೆಕ್ಕೆಜೋಳ ಬೆಳೆದ 16344 ರೈತರಿಗೆ 8.17 ಕೋಟಿ ರೂ. ಬಿಡುಗಡೆಯಾಗಿದೆ. ಸರ್ಕಾರದ ಮಾರ್ಗಸೂಚಿಯಂತೆ ಕಂದಾಯ ಹಾಗೂ ತೋಟಗಾರಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸಮೀಕ್ಷೆ ನಡೆಸಿ ಮುಸುಕಿನಜೋಳ ಬೆಳೆದ ಪ್ರತಿಯೊಬ್ಬ ರೈತರಿಗೆ 5 ಸಾವಿರ ಪೋತ್ಸಾಹ ಧನ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲು ಕ್ರಮವಹಿಸಿದ್ದಾರೆ ಎಂದರು.
ಎರಡನೇ ಹಂತದಲ್ಲಿ ಬಾಕಿ ಇರುವ ಜಂಟಿ ಖಾತೆ ಹೊಂದಿರುವ 32593 ರೈತರಿಗೆ ಕುಟುಂಬದ ಒಬ್ಬರ ಹೆಸರಿಗೆ ಪೋತ್ಸಾಹ ಧನ ನೀಡುವಂತೆ ಒಪ್ಪಿಗೆ ಪತ್ರ ನೀಡಿದರೆ ಅಂತಹವರಿಗೆ ಮಾತ್ರ ಪೋತ್ಸಾಹ ಧನ ನೀಡಲಾಗುವುದು, ಒಪ್ಪಿಗೆ ಪತ್ರ ಪಡೆದು ಪೋತ್ಸಾಹ ಧನ ನೀಡುವ ಕ್ರಮ ಸ್ವಲ್ಪ ತಡವಾಗಬಹುದು ಅದಕ್ಕಾಗಿ ಕೃಷಿ ಸಚಿವರನ್ನು ಬೇಟಿ ಮಾಡಿ ತೋಟಗಾರಿಕೆ ಇಲಾಖೆಯಲ್ಲಿ ಜಾರಿಗೆ ತಂದಿರುವ ಮಾದರಿಯಲ್ಲಿ ಸ್ವಯಂ ಘೋಷಣ ಪತ್ರ ಪಡೆದು ಜಂಟಿ ಖಾತೆ ಇರುವ ರೈತರಿಗೆ ಕೂಡ 5ಸಾವಿರ ಪೋತ್ಸಾಹ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಲಾಗುವುದು ಎಂದ ಅವರು, ಅವಳಿ ತಾಲೂಕಿನಲ್ಲಿ ಹೂವು ಬೆಳೆದ ರೈತರಿಗೆ ಪರಿಹಾರ ನೀಡಲು 15.45 ಲಕ್ಷ ರೂ. ಬಿಡುಗಡೆಯಾಗಿದೆ, ಹೂವು ಬೆಳೆಗಾರರು ಈಗಾಗಲೆ ಅರ್ಜಿಗಳನ್ನು ಸಲ್ಲಿಸಿದ್ದಾರೆ ಎಂದು ಹೇಳಿದರು.
17 ಬೆಳೆಗಳ ಬೆಂಬಲ ಬೆಲೆ ಏರಿಸಿ: ಮೋದಿಗೆ ಸಿದ್ದು ಪತ್ರ
ಇಡೀ ಜಿಲ್ಲೆಯಲ್ಲಿಯೇ ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕಿನ ಕಂದಾಯ, ಕೃಷಿ ಹಾಗೂ ತೋಟಗಾರಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಜಂಟಿಯಾಗಿ ಸಂಪೂರ್ಣ ಸಮೀಕ್ಷೆ ನಡೆಸಿ ಮೆಕ್ಕೆಜೋಳ ಬೆಳೆದ ರೈತರಿಗೆ ಪೋತ್ಸಾಹ ಧನ ಬರುವಂತೆ ಮಾಡಿದ್ದಾರೆ ಅವರಿಗೆ ಅಭಿನಂದನೆಗಳು ಎಂದರು.
ತಾಲೂಕು ತೋಟಗಾರಿಕೆ ಸಿಬ್ಬಂದಿ ಕಚೇರಿಯಲ್ಲಿಯೇ ಇರುವುದಿಲ್ಲ, ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಹಾಗೂ ಬಹುಮುಖ್ಯವಾಗಿ ಮಧ್ಯವರ್ತಿಗಳ ಮುಖಾಂತರ ರೈತರ ಕೆಲಸಗಳು ನಡೆಯುತ್ತಿವೆ, ಕೂಡಲೇ ಅವರಿಗೆ ನೋಟಿಸ್ ಜಾರಿ ಮಾಡಿ ಎಂದು ಸಹಾಯಕ ನಿರ್ದೇಶಕ ಜೆ.ಶಂಕರ್‌ಗೆ ಶಾಸಕರು ಸೂಚಿಸಿದರು.