Asianet Suvarna News Asianet Suvarna News

ಬಳ್ಳಾರಿ: ಹರಪನಹಳ್ಳಿಯಲ್ಲೂ ಗಾಂಧೀಜಿ ಹೆಜ್ಜೆ ಗುರುತು..!

1934ರಲ್ಲಿ ಪರ​ಪ​ನ​ಹಳ್ಳಿ ಸರ್ಕಾರಿ ಪಪೂ ಕಾಲೇ​ಜಿ​ನಲ್ಲಿ ತಂಗಿದ್ದ ಗಾಂಧೀ​ಜಿ| ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ಪಟ್ಟಣ| ದಾವಣಗೆರೆಯಿಂದ ಹರಪನಹಳ್ಳಿ ಮಾರ್ಗವಾಗಿ ಬಳ್ಳಾರಿ ಜಿಲ್ಲಾ ಸಂಚಾರ ಕೈಗೊಂಡಿದ್ದ ಮಹಾತ್ಮಾ ಗಾಂಧೀಜಿ| 

Mahatma Gandhi Visited on 1934 in Harapanahalli in Ballari Districtgrg
Author
Bengaluru, First Published Oct 2, 2020, 1:34 PM IST
  • Facebook
  • Twitter
  • Whatsapp

ಬಿ. ರಾಮಪ್ರಸಾದ್‌ ಗಾಂಧಿ

ಹರಪನಹಳ್ಳಿ(ಅ.02): ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟು ಶಾಂತಿ, ಸಹನೆಯಿಂದ ಏನನ್ನಾದರೂ ಸಾಧಿಸಬಹುದು ಎಂದು ಜಗತ್ತಿಗೆ ತೋರಿಸಿಕೊಟ್ಟು ರಾಷ್ಟ್ರಪಿತರಾದ ಮಹಾತ್ಮಾ ಗಾಂಧೀಜಿ ಹಿಂದುಳಿದ ಹರಪನಹಳ್ಳಿಯಲ್ಲೂ ತಮ್ಮ ಹೆಜ್ಜೆ ಗುರುತುಗಳನ್ನು ಬಿಟ್ಟು​ ಹೋ​ಗಿದ್ದಾರೆ.

ಮಹಾತ್ಮಾ ಗಾಂಧೀಜಿ ಅವರು ದಾವಣಗೆರೆಯಿಂದ ಹರಪನಹಳ್ಳಿ ಮಾರ್ಗವಾಗಿ ಬಳ್ಳಾರಿ ಜಿಲ್ಲಾ ಸಂಚಾರ ಕೈಗೊಂಡಿದ್ದರು. ಆ ಸಂದರ್ಭದಲ್ಲಿ ಮಾರ್ಚ್‌ 2, 1934ರ ಶುಕ್ರವಾರ ಸಂಜೆ ಸುಮಾರು 4 ಗಂಟೆಗೆ ಗಂಗಾಧರ ರಾವ್‌ ದೇಶಪಾಂಡೆ, ಠಕ್ಕರ್‌ ಬಾಪಾರ ಅವರೊಂದಿಗೆ ಪಟ್ಟಣದ ಸ.ಪ.ಪೂ ಕಾಲೇಜಿ (ಅಂದು ಸರ್ಕಾರಿ ಪ್ರೌಢ ಶಾಲೆ)ನ ಒಂದು ಕೋಣೆಯಲ್ಲಿ ಒಂದು ರಾತ್ರಿ ತಂಗಿದ್ದರು. ಈ ಕೊಠಡಿಯಲ್ಲಿ ಮೊದಲಿನಿಂದಲೂ ತರಗತಿಗಳನ್ನು ನಡೆಸಲು ಹಾಗೂ ಈ ಕೊಠಡಿಯಲ್ಲಿ ಅಲ್ಲಿಂದ ಇಲ್ಲಿ ವರೆಗೂ ಯಾರೂ ಪಾದರಕ್ಷೆ ಧರಿಸಿ ಹೋಗುವಂತಿಲ್ಲ. ಅಷ್ಟಕ್ಕೆ ಸೀಮಿತವಾಗಿದ್ದ ಈ ಕೊಠಡಿಗೆ ಕಳೆದ 3 ವರ್ಷಗಳ ಹಿಂದೆ ಅಭಿವೃದ್ಧಿಗೆ ಮಹೂರ್ತ ಕೂಡಿ ಬಂದಿತು.

ಬಳ್ಳಾರಿ: ವಿಜಯನಗರ ಶ್ರೀಕೃಷ್ಣದೇವರಾಯ ವಿವಿಗೆ ಸಚಿವ ಆನಂದ ಸಿಂಗ್‌ ಭೇಟಿ

ಗಾಂಧೀಜಿ ಮೂರ್ತಿ ಪ್ರತಿಷ್ಠಾಪನೆ:

ಮಾಜಿ ಶಾಸಕ, ದಿ. ಎಂ.ಪಿ. ರವೀಂದ್ರ ಈ ಕೊಠಡಿಯನ್ನು ಗಾಂಧಿ ತಂಗಿದ್ದ ಸವಿನೆನಪಿಗಾಗಿ ಏಕೆ ಅಭಿವೃದ್ಧಿ ಪಡಿಸಬಾರದು ಎಂದು ಆಲೋಚಿಸಿ ಯೋಜನೆ ರೂಪಿಸಿ ಗಾಂಧೀಜಿ ವಿಶ್ರಾಂತಿ ಪಡೆಯುತ್ತಿರುವ ಏಕ ಶಿಲಾ ಮೂರ್ತಿಯನ್ನು ಮೈಸೂರು ಭಾಗದ ಕೃಷ್ಣ ಶಿಲೆಯಲ್ಲಿ ಶಿಲ್ಪ ಕಲಾವಿದೆ ಎಂ. ಸಂಜಿತಾ ಹಾಗೂ ತಂಡದವರಿಂದ ತಯಾರಿಸಿ ಇಲ್ಲಿಗೆ ತರಿಸಿ ಇಲ್ಲಿ ಪ್ರತಿಷ್ಠಾಪನೆ ಮಾಡಿಸಿದರು.

ಸುತ್ತಲೂ 9 ಗೋಡೆ ಕಲಾ ಕೃತಿಗಳಿವೆ. ಕಲಾ ಕೃತಿಗಳು ನೋಡುಗರನ್ನು ಸೆಳೆಯುತ್ತಿವೆ. ಗಾಂಧಿ ಮೂರ್ತಿ ಪ್ರತಿಷ್ಠಾಪಿಸಿ​ದ ಕೊಠಡಿಗೆ ಅಂಟಿಕೊಂಡ ಇನ್ನೊಂದು ಕೊಠಡಿಯಲ್ಲಿ ಗಾಂಧೀಜಿಗೆ ಸಂಬಂಧ ಪಟ್ಟ ಹಾಗೂ ಸ್ವಾತಂತ್ರ್ಯ ಸಂಗ್ರಾಮದ ಪುಸ್ತಕಗಳ ಗ್ರಂಥಾಲಯ ಸ್ಥಾಪನೆಗೂ ಯೋಜನೆ ರೂಪಿಸಲಾಗಿತ್ತು. ಆದರೆ, ಅದು ಇನ್ನೂ ಈಡೇರಿಲ್ಲ. ಈಗಿನ ಶಾಸಕ ಕರುಣಾಕರರೆಡ್ಡಿ ಅಂತಹ ಗ್ರಂಥಾಲಯ ಸ್ಥಾಪನೆ ಮಾಡಬೇಕು ಎಂಬುದು ಸಾಹಿತಿಗಳ, ಚಿಂತಕರ ಒತ್ತಾಸೆಯಾಗಿದೆ.
 

Follow Us:
Download App:
  • android
  • ios