ಬೆಳಗಾವಿ(ಡಿ.30): ಮಹಾರಾಷ್ಟ್ರ ಎನ್‌ಸಿಪಿ ಶಾಸಕ ರಾಜೇಶ್ ಪಾಟೀಲ್ ಉದ್ಧಟತನದ ಹೇಳಿಕೆಗೆ ನೀಡುವ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ರಾಜೇಶ್ ಪಾಟೀಲ್ ಹೇಳಿಕೆಗೆ ಕನ್ನಡಪರ ಸಂಘಟನೆಗಳ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.

"

ಭಾನುವಾರ ನಗರದಲ್ಲಿ ಮಹಾರಾಷ್ಟ್ರದ ಚಂದಗಡ ಕ್ಷೇತ್ರದ ಎನ್‌ಸಿಪಿ ಶಾಸಕ ರಾಜೇಶ್ ಪಾಟೀಲ್‌ಗೆ ನಾಡವಿರೋಧಿ ಎಂಇಎಸ್ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಜೇಶ್ ಪಾಟೀಲ್‌, ಮಹಾರಾಷ್ಟ್ರದಲ್ಲಿ ಬೆಳಗಾವಿ ಸೇರಿಸಿ ಬೆಳಗಾವಿ ಶಾಸಕನಾಗೋದೇ ನನ್ನ ಆಸೆಯಾಗಿದೆ. ಮುಂದಿನ 5 ವರ್ಷಗಳಲ್ಲಿ ಗಡಿವಿವಾದ ಬಗೆಹರಿದು ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರ್ಪಡೆ ಮಾಡಿಸುತ್ತೇನೆ ಎಂದು ಹೇಳಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಕಳೆದ ಬಾರಿಯೂ ನನ್ನ ಆಪೇಕ್ಷೆ ವ್ಯಕ್ತಪಡಿಸಿದ್ದೇನೆ. ನಾನು ಚಂದಗಡ ಕ್ಷೇತ್ರದ ಶಾಸಕ ಆಗಿ ಇಂದು ನಿಮ್ಮ ಮುಂದೆ ಇದ್ದೇನೆ. ಮುಂದಿನ ಐದು ವರ್ಷಗಳಲ್ಲಿ ಗಡಿವಿವಾದ ಬಗೆಹರಿದು ಬೆಳಗಾವಿಯ ಶಾಸಕನಾಗಿ ಮಹಾರಾಷ್ಟ್ರದ ಸದನದಲ್ಲಿ ಇರಬೇಕೆಂಬುದು ನನ್ನ ಮಹದಾಸೆಯಾಗಿದೆ. ಎಲ್ಲರ ಆಶೀರ್ವಾದದಿಂದ ನಾನು ನಿಮ್ಮ ಸೇವೆ ಮಾಡುವ ಸೌಭಾಗ್ಯ ಸಿಗಲಿ ಎಂದು ಪರಮಾತ್ಮನಲ್ಲಿ ಪ್ರಾರ್ಥನೆ ಮಾಡುತ್ತೇನೆ. ಎರಡು ರಾಜ್ಯಗಳ ಜನರಿಗೆ ಆ ದೇವರು ಸುದ್ಬುದ್ಧಿ ನೀಡಲಿ‌. ನನ್ನ ಸನ್ಮಾನಿಸಿದ ನಿಮಗೆಲ್ಲಾ ಧನ್ಯವಾದ. ಜೈ ಹಿಂದ್. ಜೈ ಮಹಾರಾಷ್ಟ್ರ ಎಂದು ಕನ್ನಡ ನೆಲದಲ್ಲಿ ಘೋಷಣೆ ಕೂಗಿದ್ದಾರೆ. ರಾಜೇಲ್ ಪಾಟೀಲ್ ಹೇಳಿಕೆಗೆ ರಾಜ್ಯಾದ್ಯಂತ ವ್ಯಾಪಕ ಆಕ್ರೋಷ ವ್ಯಕ್ತವಾಗುತ್ತಿದೆ. 

ರಾಜೇಶ್ ಪಾಟೀಲ್ ಈ ಹಿಂದೆ ಶಾಸಕನಾಗಿ ಪ್ರಮಾಣ ವಚನ ಸ್ವೀಕರಿಸುವಾಗಲೂ ಬೆಳಗಾವಿ, ಬೀದರ್, ಭಾಲ್ಕಿ ಮಹಾರಾಷ್ಟ್ರಕ್ಕೆ ಸೇರಬೇಕೆಂದು ಉದ್ಧಟತನದ ಹೇಳಿಕೆ ನೀಡಿದ್ದರು.