Asianet Suvarna News Asianet Suvarna News

ಮಹದಾಯಿ ನದಿ ವಿಚಾರ; ರಾಜಕಾರಣಿಗಳು ಪ್ರಮಾಣಿಕ ಪ್ರಯತ್ನ ಮಾಡಿಲ್ಲ

ಉತ್ತರ ಕರ್ನಾಟಕದ ರೈತರು ಕಳೆದ 40 ವರ್ಷಗಳಿಂದ ಮಹದಾಯಿ ನದಿಯನ್ನು ಮಲಪ್ರಭಾ ನದಿಗೆ ಜೋಡಣೆ ಮಾಡಬೇಕೆಂಬ ಬೇಡಿಕೆಗೆ ರಾಜಕಾರಣಿಗಳು ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ ರೈತ ಮುಖಂಡ ಬೇಸರ ವ್ಯಕ್ತಪಡಿಸಿದ್ದಾನೆ

Mahadayi river issue; Politicians have not madeA concerted effort rav
Author
Bangalore, First Published Jul 20, 2022, 2:08 PM IST

ವರದಿ: ಪರಮೇಶ್ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ 

ಧಾರವಾಡ(ಜು.20):  ಉತ್ತರ ಕರ್ನಾಟಕದ ರೈತರು ಕಳೆದ 40 ವರ್ಷಗಳಿಂದ ಮಹದಾಯಿ ನದಿಯನ್ನು ಮಲಪ್ರಭಾ ನದಿಗೆ ಜೋಡಣೆ ಮಾಡಬೇಕೆಂಬ ಬೇಡಿಕೆಗೆ ರಾಜಕಾರಣಿಗಳು ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ ಎನ್ನುವದು ಸತ್ಯ, ಈ ವಿಷಯವಾಗಿ ಹೋರಾಟ ಮಾಡಿ ನಾಯಕರಾಗಿ ಬೆಳೆದು ರಾಜಕೀಯ ಪ್ರವೇಶ ಮಾಡಿ ದೊಡ್ಡ ದೊಡ್ಡ ಹುದ್ದೆಗಳನ್ನು ಹಲವರು ಅನುಭವಿಸಿದರು ಆಗಲಾದರೂ ಮಹದಾಯಿ ಯೋಜನೆ ಜಾರಿ ಮಾಡಲಿಲ್ಲ.  16 ಜುಲೈ 2015 ರಂದು ರೈತಸೇನಾ ಕರ್ನಾಟಕದ ನೇತೃತ್ವದಲ್ಲಿ ನರಗುಂದದಲ್ಲಿ ಪ್ರಾರಂಭವಾದ ನಿರ್ಣಾಯಕ ಹೋರಾಟ ಇಡೀ ರಾಷ್ಟ್ರ ಮಟ್ಟ ಮತ್ತು ಅಂತರರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದ್ದು ಈಗ ಇತಿಹಾಸ, ಇಡೀ ವಿಶ್ವದಲ್ಲಿಯೇ ಎಂಟು ವರ್ಷಗಳ ಕಾಲ ಸುಧೀರ್ಘ ಹೋರಾಟ ಎಲ್ಲಿಯೂ ನಡೆದಿಲ್ಲ ಇದು ನಮ್ಮ ದೇಶಕ್ಕೆ ಅಪಮಾನವಾಗುವ ಸಂಗತಿ.
ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಸಿಗುವರೆಗೂ ಹೋರಾಟ: ಕೂಡಲ ಶ್ರೀ

ರೈತಸೇನಾ ಕರ್ನಾಟಕ(Raita Sena Karnataka) ನಿರಂತರವಾಗಿ ಆಳುವ ಸರಕಾರಗಳ ಗಮನ ಸೆಳೆಯಲು ನೂರಾರು ವಿಭಿನ್ನ ಹೋರಾಟ ನಡೆಸಿದ್ದು ತಮಗೆಲ್ಲ ತಿಳಿದ ಸಂಗತಿ. 2015 ರ ವೇಳೆಗೆ ನಿರಂತರ 5-6 ವರ್ಷ ಸತತ ಬರಗಾಲ(drought) ಇದ್ದದ್ದರಿಂದ ರೈತರು(Farmers) ಒಗ್ಗಟ್ಟಾಗಿ ಬೃಹತ್ ಸಂಖ್ಯೆಯಲ್ಲಿ ಸೇರಿ ಹೋರಾಟ(Protest) ಮಾಡಿದರು , ನಂತರ ಮಳೆ ಆದ ಮೇಲೆ ಹೋರಾಟ ಮಾಡುವವರ ಸಂಖ್ಯೆ ಕಡಿಮೆಯಾಯಿತು , ರೈತಸೇನಾ ಕರ್ನಾಟಕದ ಹೋರಾಟ ಮಾತ್ರ ನಿರಂತರವಾಗಿ ಈಗಲೂ ನಡೆದಿದೆ ಎಲ್ಲ ತರಹದ ಹೋರಾಟ ಮಾಡಿ ಅಂತಿಮವಾಗಿ ರಾಷ್ಟ್ರದ ಪ್ರಥಮ ಪ್ರಜೆ ರಾಷ್ಟ್ರಪತಿಯವರ ಬಳಿ ದೆಹಲಿಗೆ ಹೋಗಿ ಮಧ್ಯಸ್ಥಿಕೆಯ ಮೂಲಕ ನಮ್ಮ ರಾಜ್ಯದ ಪಾಲಿನ ನೀರು ಕೊಡಿಸಿ ಇಲ್ಲವೇ ದಯಾಮರಣಕ್ಕೆ ಅವಕಾಶ ಕೊಡಿ ಎಂದು ಮನವಿ‌ ಸಲ್ಲಿಸಿದೆವು ಅವರಿಂದ ಯಾವುದೇ ಉತ್ತರ ಬರದಿದ್ದಾಗ

ಸರ್ವೋಚ್ಛ ನ್ಯಾಯಾಲಯ(Supreme Court)ದಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ(PIL) ಸಲ್ಲಿಸಿದಾಗ 2018 ರಲ್ಲಿ ನ್ಯಾಯಾಧಿಕರಣ ನಮ್ಮ ರಾಜ್ಯಕ್ಕೆ 13.4 TMC ನೀರನ್ನು ಹಂಚಿಕೆ ಮಾಡಿತು, ಸುಮಾರು 2900 ಪುಟಗಳ ತೀರ್ಪಿನಲ್ಲಿ ಒಂದು ಕಡೆ ನ್ಯಾಯಾಧೀಶರು ಹೇಳಿದ್ದಾರೆ ಯಾವ ರಾಜ್ಯದ ವಕೀಲರು ಕೂಡಾ ಸಮರ್ಥವಾಗಿ ವಾದ ಮಂಡನೆ ಮಾಡಿಲ್ಲ ರೈತರ ಹೊರಾಟವನ್ನು ಗಮನಿಸಿ ಮಾನವೀಯತೆಯ ಆಧಾರದಲ್ಲಿ ನೀರನ್ನು ಹಂಚಿಕೆ ಮಾಡಿದ್ದೇವೆ ಎಂದು ಹೇಳಿದ್ದು ರೈತಸೇನಾ ಕರ್ನಾಟಕದ ಹೋರಾಟಕ್ಕೆ ಹೆಮ್ಮೆಯ ವಿಷಯ ,ನ್ಯಾಯಾಧಿಕರಣದ ತೀಪು ಬಂದು ನಾಲ್ಕು ವರ್ಷಗಳಾಗುತ್ತ ಬಂತು ಇನ್ನೂ ಕಾಮಗಾರಿ ಪ್ರಾರಂಭವಾಗಿಲ್ಲ ರಾಜಕಾರಣಿಗಳಿಗೆ ಈ ಸಮಸ್ಯೆಯನ್ನು ಜೀವಂತವಾಗಿ ಇಡಬೇಕಾಗಿದೆ.

ಟ್ಯಾಂಕರ್ ಪಲ್ಟಿಯಾಗಿ ಸೋರಿದ್ದ ರಾಸಾಯನಿಕ; ಜಲಚರಗಳು ಸಾವು!

ರಾಜಕಾರಣಿಗಳು ಈ ಸಮಸ್ಯೆಯನ್ನು ಬಗೆಹರಿಸದಿದ್ದರೂ ನಾವೆಲ್ಲ‌ ಅವರಿಗೆ ಮತ ಹಾಕುತ್ತೇವೆ ಅವರನ್ನು ಟೀಕಿಸುವದು ಬೇಡ ಯಾಕಂದರೆ ನಾವೇ ಇನ್ನೂ ಜಾಗೃತರಾಗಿಲ್ಲ ನಾವೆಲ್ಲ ಜಾಗೃತರಾಗಿ ಬರಲಿರುವ ದಿನಗಳಲ್ಲಿ ಈ ಯೋಜನೆಯ ಕಾಮಗಾರಿ ಪ್ರಾರಂಭಿಸುವ ನಿಟ್ಟಿನಲ್ಲಿ ಹೋರಾಟ ಮಾಡುವ ಅನಿವಾರ್ಯತೆ ಇದೆ  ಕಾರಣ ನಾಳೆ 21-07-2022 ರಂದು ನರಗುಂದ ರೈತ ಹೋರಾಟ ವೇದಿಕೆಯಲ್ಲಿ ರೈತ ಹುತಾತ್ಮ ದಿನಾಚರಣೆಯ ನಿಮಿತ್ಯ ಬೃಹತ್ ರೈತ ಸಮಾವೇಶ ಹಮ್ಮಿಕೊಂಡಿದ್ದಾರಡ ಅಂದು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ರೈತರೆಲ್ಲ ಸೇರಿ ಆಳುವ ಸರಕಾರಗಳಿಗೆ ಗಟ್ಟಿಯಾದ ಸಂದೇಶ ನೀಡಬೇಕಾಗಿದೆ.

ಅಂದು ಕರ್ನಾಟಕದ ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಹೋರಾಟದ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗುವದು
 ಕಾರಣ ರೈತಬಂಧುಗಳು ಪಕ್ಷಾತೀತವಾಗಿ ಮತ್ತು ಜ್ಯಾತ್ಯಾತೀತವಾಗಿ ಹೆಚ್ಚಿನ‌ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಈ ಮೂಲಕ ಮನವಿ ಮಾಡಿಕೊಂಡಿದ್ದಾರೆ ವೀರೇಶ ಸೊಬರದಮಠ.

Follow Us:
Download App:
  • android
  • ios