ಮಡಿಕೇರಿ: ಗದ್ದೆಗಳಲ್ಲಿ ಕೊಳವೆ ಹುಳುವಿನ ಬಾಧೆ

ಪ್ರವಾಹ ಬಂದು ಹೋದ ನಂತರ ಜನರು ರೋಗಭೀತಿಯಲ್ಲಿದ್ದರೆ ಇದೀಗ ಬೆಳೆಗಳಿಗೂ ರೋಗಭೀತಿ ಆವರಿಸಿದೆ. ಮಡಿಕೇರಿಯಲ್ಲಿ ಭತ್ತದ ಬೆಳೆಗೆ ಕೊಳವೆ ಹುಳುಗಳ ಕಾಟ ಹೆಚ್ಚಾಗಿದ್ದು, ರೈತರು ಚಿಂತೆಗೀಡಾಗಿದ್ದಾರೆ. ಕೊಳವೆ ಹುಳುಗಳು ಭತ್ತದ ಎಲೆಯಲ್ಲಿ ಕೊಳವೆ ಮಾಡಿಕೊಂಡು, ಎಲೆಗಳ ಹಸಿರು ಹರಿತನ್ನು ಕೆರೆದು ತಿನ್ನುತ್ತವೆ. ಬೆಳೆ ಬಿಳುಚಿಕೊಂಡು ಕಾಗದದಂತೆ ಬೆಳ್ಳಗೆ ಕಾಣುತ್ತದೆ. ನಂತರ ಈ ಕೊಳವೆ ಕತ್ತರಿಸಿ ನೀರಿನಲ್ಲಿ ಬಿದ್ದು ತೇಲುತ್ತವೆ.

madikeri paddy field diseased

ಮಡಿಕೇರಿ(ಸೆ.30): ಸೋಮವಾರಪೇಟೆ ತಾಲೂಕಿನ ಶಾಂತಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಭತ್ತದ ಗದ್ದೆಗಳಲ್ಲಿ ಕೊಳವೆ ಹುಳುವಿನ ಬಾಧೆ ಕಾಣಿಸಿಕೊಂಡಿದ್ದು, ರೈತರು ಅಗತ್ಯ ಕ್ರಮ ಕೈಗೊಳ್ಳುವ ಮೂಲಕ ಕೀಟ ಬಾಧೆಯನ್ನು ನಿಯಂತ್ರಿಸಬೇಕೆಂದು ಕೃಷಿ ಇಲಾಖೆ ಅಧಿಕಾರಿ ಜಹಾನ್ ತಾಜ್ ಸಲಹೆ ನೀಡಿದ್ದಾರೆ.

ಕೊಳವೆ ಹುಳುಗಳು ಭತ್ತದ ಎಲೆಯಲ್ಲಿ ಕೊಳವೆ ಮಾಡಿಕೊಂಡು, ಎಲೆಗಳ ಹಸಿರು ಹರಿತನ್ನು ಕೆರೆದು ತಿನ್ನುತ್ತವೆ. ಬೆಳೆ ಬಿಳುಚಿಕೊಂಡು ಕಾಗದದಂತೆ ಬೆಳ್ಳಗೆ ಕಾಣುತ್ತದೆ. ನಂತರ ಈ ಕೊಳವೆ ಕತ್ತರಿಸಿ ನೀರಿನಲ್ಲಿ ಬಿದ್ದು ತೇಲುತ್ತವೆ.

ಮಡಿಕೇರಿ ದಸರಾ ಜನೋತ್ಸವಕ್ಕೆ ವಿದ್ಯುಕ್ತ ಚಾಲನೆ

ಈ ಕೀಟ ಬಾಧೆಯಿಂದ ರೈತರಿಗೆ ನಷ್ಟವಾಗಲಿದ್ದು, ಮುಂಜಾಗ್ರತಾ ಕ್ರಮ ಮೂಲಕ ಕೀಟಬಾಧೆಯನ್ನು ಹತೋಟಿಗೆ ತರಬೇಕು ಎಂದು ತಿಳಿಸಿದ್ದಾರೆ. ಇಂತಹ ಕೀಟಗಳನ್ನು ತುರ್ತು ನಿರ್ವಹಣೆ ಮಾಡಬೇಕಿದೆ. ಪೈರಿನ ಮೇಲೆ ಹಗ್ಗವನ್ನು ಎಳೆಯುವ ಮೂಲಕ ಕೊಳವೆ ಹುಳುಗಳನ್ನು ಕೆಳಗೆ ಬೀಳಿಸಬೇಕಾಗಿದೆ.

ಹಾಳೆಗಳಲ್ಲಿನ ನೀರನ್ನು ಸಂಪೂರ್ಣವಾಗಿ ಬಸಿಯುವಂತೆ ಮಾಡಬೇಕು. ನಂತರ ಕ್ಲೋರೋಫೈರಿಪಾಸ್ ಅಥವಾ ಕ್ವಿನಾಲ್ಫಾಸ್ ಸಿಂಪರಣೆ ಮಾಡಬೇಕು. ಈ ಕ್ರಮಗಳಿಂದ ಕೀಟವನ್ನು ಪರಿಣಾಮಕಾರಿಯಾಗಿ ಹತೋಟಿ ಮಾಡಬಹುದು ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.

ಮಡಿಕೇರಿ ದಸರೆಯಲ್ಲಿ ‘ಕುಂಗ್‌ ಫು’ ಸಮರಾಂಗಣ

Latest Videos
Follow Us:
Download App:
  • android
  • ios