ಕಾರವಾರ [ಡಿ.26]: ಸಂಬಳ ಪಡ್ಕೊಂಡ್ರೂ ಕೆಲಸ ಮಾಡಲ್ಲ... ನಾಚಿಕೆಯಾಗಲ್ವಾ ? ಹೀಗೆಂದು ಸಚಿವ ಮಾಧುಸ್ವಾಮಿ  ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. 

ಕಾರವಾರ ಜಿಲ್ಲಾ ಪಂಚಾಯತ್ ಗೆ ಭೇಟಿ ನೀಡಿದ ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ತಮ್ಮ ಇಲಾಖೆಯ ಕಾಮಗಾರಿಗಳ ಪ್ರಗತಿ ಪರಿಶೀಲನೆ ಕೈಗೊಂಡಿದ್ದು,  ಈ ವೇಳೆ ಸಮರ್ಪಕ ಮಾಹಿತಿ ನೀಡಲು ವಿಫಲರಾದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. 

ಕಾಮಗಾರಿ ಕೈಗೊಳ್ಳಲು ನಿರ್ಲಕ್ಷ್ಯವಹಿಸಿದ್ದ ಹಿನ್ನೆಲೆ, ಸಂಬಳ ತೆಗೆದುಕೊಳ್ಳುವ ನಿಮಗೆ ಜವಾಬ್ದಾರಿಯುತವಾಗಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲವೇ.? ಕೆಲಸ ಮಾಡದೇ ಇದ್ದರೇ ಏನು ಮಾಡಬೇಕು.? ಎಂದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

 ಇನ್ನು ರಾಜ್ಯ ನನ್ನದು ಎನ್ನುವ ಭಾವನೆ ಇಟ್ಟುಕೊಂಡು ಮಂತ್ರಿಯಾಗಿದ್ದರೆ ಏನು ಮಾಡುತ್ತಿದ್ದಿರಿ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ ಸಚಿವ ಮಾಧುಸ್ವಾಮಿ ನಿರ್ಲಕ್ಷ್ಯದ ವಿರುದ್ಧ ಅಸಮಾಧಾನ ಹೊರಹಾಕಿದರು.

ಈ ವೇಳೇ ಜಿಲ್ಲೆಯ ವಿವಿಧ ಪ್ರಗತಿ ಪರಿಶೀಲನೆಯನ್ನೂ ಅಧಿಕಾರಿಗಳು ಮಾಡಿದರು.