Asianet Suvarna News Asianet Suvarna News

ಫೇಸ್‌ಬುಕ್ ಲೈವ್ ನಲ್ಲಿ ಸಪ್ತಪದಿ ತುಳಿದ ಪ್ರೇಮಿಗಳು!

ಫೇಸ್‌ಬುಕ್ ಲೈವ್ ನಲ್ಲಿ ಮದುವೆ! ಕುಟುಂಬದ ವಿರೋಧಕ್ಕೆ ಮನೆ ಬಿಟ್ಟ ಜೋಡಿ! ಕಿರಣ್, ಅಂಜನಾ ಮದುವೆಯಾದ ಪ್ರೇಮಿಗಳು! ಫೇಸ್‌ಬುಕ್ ಲೈವ್ ನಲ್ಲೇ ಸಪ್ತಪದಿ ತುಳಿದ ಜೋಡಿ

ತುಮಕೂರು(ಆಸ11): ಫೇಸ್‌ಬುಕ್ ಲೈವ್ ಮಾಡಿಕೊಂಡು ಪ್ರೇಮಿಗಳು ಸಪ್ತಪದಿ ತುಳಿದ ಘಟನೆ ಜಿಲ್ಲೆಯ ಮಧುಗಿರಿಯಲ್ಲಿ ನಡೆದಿದೆ. ಇಲ್ಲಿನ ಮಧುಗಿರಿ ಪಟ್ಟಣ ನಿವಾಸಿಗಳಾದ ಕಿರಣ್ ಹಾಗೂ ಅಂಜನಾ  ವಿವಾಹವಾದ ಜೋಡಿಗಳು.

ಪ್ರೇಮ ವಿವಾಹಕ್ಕೆ ಹುಡುಗಿ ಮನೆಯವರ ವಿರೋಧ ಇದ್ದ ಹಿನ್ನೆಲೆಯಲ್ಲಿ ಮನೆಯಿಂದ ಓಡಿ ಹೋಗಿ ಈ ಜೋಡಿ ವಿವಾಹವಾಗಿದೆ. ಅಲ್ಲದೇ ಮದುವೆಯಾಗುವ ದೃಶ್ಯವನ್ನು ಫೇಸ್ ಬುಕ್‌ನಲ್ಲಿ ಲೈವ್ ಮಾಡಿದ ಜೋಡಿ, ನಾವಿಬ್ಬರು ಒಪ್ಪಿ‌ ಮದುವೆಯಾಗಿದ್ದೇವೆ, ನಮ್ಮನ್ನು ದೂರ ಮಾಡಿದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದೆ.

ಈ ಕುರಿತು ಹೆಚ್ಚಿನ ಮಾಹಿತಿಗೆ ಈ ವಿಡಿಯೋ ನೋಡಿ...