ಪ್ರಿಯಕರ ಮೊಬೈಲ್ ಕರೆ ಸ್ವೀಕರಿಸಲಿಲ್ಲ ಎಂಬ ಕಾರಣಕ್ಕೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಪ್ರೇಯಸಿ|  ಪ್ರೇಯಸಿ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ತಿಳಿದು ನೇಣಿಗೆ ಶರಣಾದ ಪ್ರಿಯಕರ| ಹುಬ್ಬಳ್ಳಿಯಲ್ಲಿ ನಡೆದ ಘಟನೆ| ಮೃತರು ಐದಾರು ವರ್ಷಗಳಿಂದ ಪರಸ್ಪರ ‌ಪ್ರೀತಿಸುತ್ತಿದ್ದರು| ಮನೆಯವರ ವಿರೋಧದ ನಡುವೇ ಕಳೆದ ಐದು ತಿಂಗಳ ಹಿಂದೆ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದರು| 2020 ರ ಏಪ್ರಿಲ್ 24ಕ್ಕೆ ಮದುವೆ ದಿನಾಂಕ ನಿಶ್ಚತ ಮಾಡಲಾಗಿತ್ತು| 

ಹುಬ್ಬಳ್ಳಿ(ನ.28): ಮೊಬೈಲ್ ಫೋನ್‌ನಿಂದ ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ನಗರದ ಕರ್ಕಿ ಬಸವೇಶ್ವರ ನಗರದಲ್ಲಿ ಬುಧವಾರ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳನ್ನು ರೇಖಾ (19) ಹಾಗೂ ವಿಷ್ಣು ಪಗಲಾಪುರ (20) ಎಂದು ಗುರುತಿಸಲಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಘಟನೆ ಹಿನ್ನೆಲೆ: 

ಪ್ರಿಯಕರ ವಿಷ್ಣು ಪಗಲಾಪುರ ಫೋನ್ ಕರೆ ಸ್ವೀಕರಿಸಲಿಲ್ಲ ಎಂಬ ಕಾರಣಕ್ಕೆ ರೇಖಾ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಇತ್ತ ಪ್ರೇಯಸಿ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ತಿಳಿದು ವಿಷ್ಣು ಪಗಲಾಪುರ ಕೂಡ ನೇಣಿಗೆ ಶರಣಾಗಿದ್ದಾನೆ. 
ಮೃತರು ಐದಾರು ವರ್ಷಗಳಿಂದ ಪರಸ್ಪರ ‌ಪ್ರೀತಿಸುತ್ತಿದ್ದರು. ಮನೆಯವರ ವಿರೋಧದ ನಡುವೇ ಕಳೆದ ಐದು ತಿಂಗಳ ಹಿಂದೆ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ. 2020 ರ ಏಪ್ರಿಲ್ 24ಕ್ಕೆ ಮದುವೆ ದಿನಾಂಕವನ್ನು ನಿಶ್ಚತ ಮಾಡಲಾಗಿತ್ತು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಬುಧವಾರ ರೇಖಾ, ವಿಷ್ಣುಗೆ ದಿನವೀಡಿ ಫೋನ್ ಕರೆ ಮಾಡಿದ್ದಾಳೆ. ಆದರೆ, ವಿಷ್ಣು ಮಾತ್ರ ಫೋನ್ ಕರೆ ಸ್ವೀಕರಿಸಿರಲಿಲ್ಲ, ಇದರಿಂದ ಮನನೊಂದ ಯುವತಿ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ರೇಖಾ ಸಾವನ್ನಪ್ಪಿದ ವಿಷಯ ತಿಳಿಯುತ್ತಿದಂತೆ ತನ್ನ ಅಜ್ಜಿಯ ಮನೆಗೆ ತೆರಳಿದ ವಿಷ್ಣು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ಬೆಂಡಿಗೇರಿ‌‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.