ಹಾಸನ [ಡಿ.24]:  ಅನ್ಯಕೋಮಿನ ಯುವತಿಯನ್ನು ಪ್ರೀತಿ ಮಾಡುತ್ತಿದ್ದ ಕಾರಣಕ್ಕೆ ಹಿಂದೂ ಯುವಕನಿಗೆ ಥಳಿಸಿದ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ. 

ಹಾಸನದ ಸಕಲೇಶಪುರ ತಾಲೂಕಿನ ಮಲ್ಲಗದ್ದೆ ಗ್ರಾಮದ ನಂದಿಶ್ ಎಂಬ ಯುವಕನಿಗೆ ಮನಬಂದಂತೆ ಥಳಿಸಲಾಗಿದೆ. 

ಸಕಲೇಶಪುರದ ಮುಸಲಿಂ ಯುವತಿಯೊಂದಿಗೆ ಆಟೋದಲ್ಲಿ ತೆರಳುತ್ತಿದ್ದ ವೇಳೆ ಬಂಧ ಯುವಕರ ಗುಂಪೊಂದು ನಂದೀಶ್ ಮೇಲೆ ಹಲ್ಲೆ ಮಾಡಿದೆ. 

BJP ಸಂಸದರೋರ್ವರ ಕಾರು ಚಾಲಕನಿಂದ ಕಿರುಕುಳ : ಮಹಿಳೆ ಆತ್ಮಹತ್ಯೆ...

ಈ ವೇಳೆ ಹಲ್ಲೆ ಮಾಡದಂತೆ ಕೇಳಕೊಂಡರೂ ಗುಂಪು ಆತನಿಗೆ ಥಳಿಸಿದ್ದು ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. 

ಬಳಿಕ ಪೊಲೀಸರು ಆಟೋ ಚಾಲಕ ಹಾಗೂ ಯುವಕ ಯುವತಿಯನ್ನು ವಿಚಾರಣೆ ನಡೆಸಿದ್ದು, ಇಬ್ಬರೂ ಪರಸ್ಪರ ಪ್ರೀತಿ ಮಾಡುತ್ತಿದ್ದು ಈ ನಿಟ್ಟಿನಲ್ಲಿ ಹಲ್ಲೆ ನಡೆಸಿದ್ದಾಗಿ ಹೇಳಿದ್ದಾರೆ.