ನೆಲಮಂಗಲ (ಮಾ.10):  ಲಾರಿ ಚಾಲಕನಿಗೆ ಚಾಕು ಇರಿದು ಮಾರಣಾಂತಿಕ ಹಲ್ಲೆ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. 

ನೆಲಮಂಗಲ ತಾಲ್ಲೂಕು ರಾಷ್ಟ್ರೀಯ ಹೆ‌ದ್ದಾರಿ 4ರ ತುಮಕೂರು ರಸ್ತೆ ಹನುಮಂತಪುರ ಬಳಿ ಎರಡು ದಿನಗಳ ಹಿಂದೆಯೇ ಈ ದುರ್ಘಟನೆ ನಡೆದಿದೆ. ದ್ವಿಚಕ್ರವಾಹನದಲ್ಲಿ ಬಂದ ನಾಲ್ವರು ಅಪರಿಚಿತರು ಈ ದುಷ್ಕೃತ್ಯ ಎಸಗಿದ್ದಾರೆ. 

ಮಹಾರಾಷ್ಟ್ರ ಮೂಲದ ಭರತ್ ವಿಠಲ್ ಕಾಂಬ್ಳೆ 62 ವರ್ಷ ವಯಸ್ಸಿನ ಲಾರಿ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ನೆಲಮಂಗಲ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.   

ಕೆಲಸ ಮಾಡುತ್ತಿದ್ದ ಕಂಪನಿಯಲ್ಲೇ ಯುವಕ ಆತ್ಮಹತ್ಯೆ : ಡೆತ್‌ನೋಟ್‌ನಲ್ಲೇನಿತ್ತು..?

ವಿಜಯ ಲಾಜಿಸ್ಟಿಕ್ಸ್ ಕಂಪನಿಯಲ್ಲಿ ಲಾರಿ ಚಾಲಕ ಭರತ್ ಕೆಲಸ ಮಾಡುತ್ತಿದ್ದು, ಹೆದ್ದಾರಿಯಲ್ಲಿ ಅಡ್ಡಗಟ್ಟಿ ಚಾಕುವಿನಿಂದ ಇರಿದು 11 ಸಾವಿರ ಕಿತ್ತುಕೊಂಡಿದ್ದರು. 

ಈ ಪ್ರಕರಣ ಸಂಬಂಧ ಇದೀಗ ತ್ಯಾಮಗೊಂಡ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.