ಶ್ರೀಕೃಷ್ಣ ಪರಮಾತ್ಮನೂ ಕೂಡ ಶೂದ್ರ ಸಮುದಾಯದವನು: ಸಚಿವ ರಾಜಣ್ಣ
ರಾಜಕೀಯ ಅಧಿಕಾರವನ್ನು ಗಳಿಸಬೇಕು. ರಾಜಕೀಯ ಅಧಿಕಾರಗಳಿಸಿದರೆ ಮಾತ್ರ ಸ್ವಾಭಿಮಾನದ ಬದುಕು ಪಡೆಯುವುದಕ್ಕೆ ಸಾಧ್ಯವಾಗುತ್ತದೆ. ರಾಜಕೀಯ ಅಧಿಕಾರಕ್ಕಾವಿಲ್ಲದೆ ಇನ್ನೊ ಬ್ಬರನ್ನು ಬೇಡುವಂತಹ ಸ್ಥಿತಿಗೆ ಹೋಗಬಾರದು. ನಾವೆ ಲ್ಲಾರು ಮಹರ್ಷಿ ವಂಶಜರು. ಮಹರ್ಷಿನ ದರೋಡೆಕೋರ ಅಂತ ಹೇಳುತ್ತಿರುವುದು ಸುಳ್ಳು. ಆ ರೀತಿ ಯಾರು ಹೇಳುತ್ತಾರೋ ಅವನು ದಡ್ಡ, ಅಯೋಗ್ಯ. ಸಭೆಗಳಲ್ಲಿ ಬಂದು ಹೇಳುವಂತಹದ್ದು ಸರಿಯಲ್ಲ: ಸಚಿವ ಕೆ.ಎನ್.ರಾಜಣ್ಣ
ತುಮಕೂರು(ಅ.22): ಶೂದ್ರರು ಹಿಂದೂ ಧರ್ಮದ ರಾಮಾಯಾಣ ಮಹಾಭಾರತ ಗ್ರಂಥ ಬರೆದಿದ್ದಾರೆ. ಶ್ರೀ ಕೃಷ್ಣನೇ ಶೂದ್ರ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು.
ನಗರದಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ರಾಜಕೀಯ ಅಧಿಕಾರವನ್ನು ಗಳಿಸಬೇಕು. ರಾಜಕೀಯ ಅಧಿಕಾರಗಳಿಸಿದರೆ ಮಾತ್ರ ಸ್ವಾಭಿಮಾನದ ಬದುಕು ಪಡೆಯುವುದಕ್ಕೆ ಸಾಧ್ಯವಾಗುತ್ತದೆ. ರಾಜಕೀಯ ಅಧಿಕಾರಕ್ಕಾವಿಲ್ಲದೆ ಇನ್ನೊ ಬ್ಬರನ್ನು ಬೇಡುವಂತಹ ಸ್ಥಿತಿಗೆ ಹೋಗಬಾರದು. ನಾವೆ ಲ್ಲಾರು ಮಹರ್ಷಿ ವಂಶಜರು. ಮಹರ್ಷಿನ ದರೋಡೆಕೋರ ಅಂತ ಹೇಳುತ್ತಿರುವುದು ಸುಳ್ಳು. ಆ ರೀತಿ ಯಾರು ಹೇಳುತ್ತಾರೋ ಅವನು ದಡ್ಡ, ಅಯೋಗ್ಯ. ಸಭೆಗಳಲ್ಲಿ ಬಂದು ಹೇಳುವಂತಹದ್ದು ಸರಿಯಲ್ಲ ಎಂದು ಹೇಳಿದರು.
ಕುಣಿಗಲ್: ಸಾಲಗಾರರ ಕಿರುಕುಳಕ್ಕೆ ಬೇಸತ್ತು ದಂಪತಿ ಆತ್ಮಹತ್ಯೆಗೆ ಯತ್ನ, ಪತಿ ಸಾವು, ಪತ್ನಿ ಗಂಭೀರ!
ಮಹರ್ಷಿ ವಾಲ್ಮೀಕಿ 24 ಸಾವಿರ ಶ್ಲೋಕಗಳನ್ನು ಸಂಸ್ಕೃತದಲ್ಲಿ ರಚನೆ ಮಾಡಿದವರು. ದೇವರ ಅಪರಾವತಾರ ಶ್ರೀರಾಮನನ್ನು ಸೋಲಿಸುವ ವಿದ್ಯೆಯನ್ನು ಲವ ಕುಶರಿಗೆ ಕಲಿಸಿದ್ದಂತಹ ಮಹಾನ್ ವ್ಯಕ್ತಿ. ಯಾವನೋ ಬೀದಿಯಲ್ಲಿ ಹೋಗೋನು ದರೋಡೆಕೋರ ಅಂತ ಹೇಳಿದರೆ ಅವನೇನು ನೋಡ್ಕೊಂಡು ಬಂದಿದ್ದ. ವರ್ಣಾಶ್ರಮವನ್ನು ಪ್ರಸ್ತಾಪಿಸುವಾಗ, ಕೆಲವರು ನಾವೆಲ್ಲಾ ತಲೆಯಿಂದ ಹುಟ್ಟಿದ್ದೇವೆ, ಭುಜದಿಂದ ಹುಟ್ಟಿದ್ದೇವೆ, ನಾಭಿಯಿಂದ ಹುಟ್ಟಿದ್ದೇವೆ ಅಂತ ಹೇಳಿಕೊಳ್ಳುತ್ತಾರೆ. ಶೂದ್ರರು ಕಾಲಿನಿಂದ ಹುಟ್ಟಿದವರು ಅಂತ ವರ್ಗೀಕರಣ ಮಾಡುವವರಿಗೆ ಬುದ್ದಿವಾದ ಹೇಳಬೇಕು ಎಂದರು ನಾಭಿ, ಭುಜ, ತಲೆಯಿಂದ ಹುಟ್ಟಿದವರು ಯಾಕಪ್ಪ ರಾಮಾಯಣ ಬರೆಯಲಿಲ್ಲ. ಮಹಾಭಾ ರತದಲ್ಲಿ ಕೃಷ್ಣ ಇರದಿದ್ದರೆ ಪಾಂಡವರಿಗೆ ಜಯನೇ ಇಲ್ಲ. ಕೃಷ್ಣ ಪರಮಾತ್ಮನೂ ಕೂಡ ಶೂದ್ರ ಸಮುದಾಯದವನು. ಶೂದ್ರರಿಂದ ಸಮಾಜಕ್ಕೆ ಕೊಟ್ಟಿರುವ ಕೊಡುಗೆಯ ಇತಿಹಾಸ ಏನಿದೆ. ಅದನ್ನೆಲ್ಲಾ ತಿರುಚಿ ಯಾರಿಗೆ ಏನು ಬೇಕೋ ಅದನ್ನ ಹೇಳಿದ್ದಾರೆ. ನಾರಾಯಣಚಾರಿ ಎಂಬುವರು ಮಹರ್ಷಿ ವಾಲ್ಮೀಕಿ ಬ್ರಾಹ್ಮಣರಿಗೆ ಸೇರಿದವರು ಅಂತ ಪುಸ್ತಕ ಬರೆದಿದ್ದಾರೆ ಎಂದು ಹೇಳಿದರು.
ಅದೇ ಏನಾದರೂ ತೊಂದರೆ, ತಪ್ಪು ಆದ ಇದೆನೆಲ್ಲಾ ಬೇಡರು, ನಾಯಕರು ಮಾಡಿದ್ದಾರೆ ಹೇಳ್ತಾರೆ. ಕೆಟ್ಟದನ್ನು ನಮ್ಮ ಕಡೆಗೆ ತೋರಿಸುತ್ತಾರೆ. ಒಳ್ಳೆಯದನ್ನು ಅವರು ತೋರಿಸಿಕೊಳ್ಳುತ್ತಾರೆ. ಯಾವುದೇ ಸಭೆ ಸಮಾರಂಭದಲ್ಲಿ ಯಾರೇ ಭಾಷಣಕಾರರು ಇದ್ರು ಕೂಡ ಮಹರ್ಷಿ ವಾಲ್ಮೀಕಿ ದರೋಡೆಕೊರ ಇದ್ದ ಅಂತ ಹೇಳಿದರೆ ಖಂಡನೆ ಮಾಡಿ ಎಂದು ಹೇಳಿದರು.