ಮಂಗಳೂರು(ಮಾ.18): ಬೆಂಗಳೂರು ಲೋಕಾಯುಕ್ತರ ಆದೇಶದಂತೆ ಕೊರೊನಾ ಜಾಗೃತಿಗಾಗಿ ಲೋಕಾಯುಕ್ತರ ತಂಡ ನಿಯೋಜನೆಗೊಂಡಿದ್ದು, ಲೋಕಾಯುಕ್ತ ಡಿವೈಎಸ್ಪಿ ವಿಜಯಪ್ರಸಾದ್‌ ಮತ್ತು ಸಿಬ್ಬಂದಿ ಶಶಿಧರ್‌ ಅವರನ್ನು ಒಳಗೊಂಡ ತಂಡ ಮಂಗಳವಾರ ಪುತ್ತೂರಿಗೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿದ ಲೋಕಾಯುಕ್ತ ಡಿವೈಎಸ್‌ಪಿ ವಿಜಯಪ್ರಸಾದ್‌ ಅವರು ಜಿಲ್ಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಭೇಟಿ ನಡೆಸಿ ಪರಿಶೀಲನೆ ನಡೆಸಲಿದ್ದೇವೆ ಎಂದಿದ್ದಾರೆ.

ಇಸ್ಕಾನ್‌ನಲ್ಲಿ ಜನರಿಗೆ ಪ್ರವೇಶ ನಿಷೇಧ

ಪುತ್ತೂರು, ಸುಳ್ಯ ಕಡಬ ಭಾಗದ ಆಸ್ಪತ್ರೆಗಳು ಮತ್ತು ಸಾರ್ವಜನಿಕ ವ್ಯವಸ್ಥೆಗಳ ಕುರಿತು ಡಿವೈಎಸ್ಪಿ ವಿಜಯಪ್ರಸಾದ್‌ ಮತ್ತು ಸಿಬ್ಬಂದಿ ಶಶಿಧರ್‌, ಬೆಳ್ತಂಗಡಿ ಮತ್ತು ಬಂಟ್ವಾಳ ತಾಲೂಕಿನಲ್ಲಿ ಡಿವೈಎಸ್ಪಿ ಕಲಾವತಿ ಮತ್ತು ತಂಡ, ಮಂಗಳೂರು ಮತ್ತು ಮೂಡುಬಿದಿ​ರೆ ತಾಲೂಕಿನಲ್ಲಿ ಡಿವೈಎಸ್ಪಿ ಭಾರತಿ ಮತ್ತು ತಂಡ ಈ ಪರಿಶೀಲನಾ ಕಾರ್ಯ ನಡೆಸಲಿದ್ದಾರೆ ಎಂದು ತಿಳಿಸಿದರು. ಕೊರೊನಾ ಸೋಂಕು ಪೀಡಿತ ಲಕ್ಷಣಗಳಿರುವ ವ್ಯಕ್ತಿಗಳು ಕಂಡುಬಂದಲ್ಲಿ ತನ್ನ ಮೊಬೈಲ್‌ ಸಂಖ್ಯೆ 8861688100 ಇದಕ್ಕೆ ಮಾಹಿತಿ ನೀಡಬಹುದು ಎಂದು ತಿಳಿಸಿದ್ದಾರೆ.