Asianet Suvarna News Asianet Suvarna News

ನಗರ ಸ್ಥಳೀಯ ಚುನಾವಣಾ ಫಲಿತಾಂಶ : ಕಲ್ಬುರ್ಗಿಯಲ್ಲಿ ’ಕೈ’ ಪ್ರಾಬಲ್ಯ

ಕಲಬುರಗಿ ಜಿಲ್ಲೆಯಲ್ಲಿ ಎಂದಿನಂತೆ ಕಾಂಗ್ರೆಸ್ ಪ್ರಾಭಲ್ಯ ಮುಂದುವರೆದಿದೆ |  ಒಟ್ಟು 6 ಪುರಸಭೆಯಲ್ಲಿ 3 ಕಾಂಗ್ರೆಸ್, 2 ಬಿಜೆಪಿ, 1 ಅತಂತ್ರವಾಗಿದೆ | ಪ್ರಿಯಾಂಕ ಖರ್ಗೆ ಉಸ್ತುವಾರಿಗೆ ಗೆಲುವು 

Local Body Election 2018: Kalaburgi
Author
Bengaluru, First Published Sep 3, 2018, 5:07 PM IST

ಕಲಬುರಗಿ (ಸೆ. 03): ನಗರಸಭಾ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಹೊರ ಬಿದ್ದಿದೆ. ಕಲಬುರಗಿ ಜಿಲ್ಲೆಯಲ್ಲಿ ಎಂದಿನಂತೆ ಕಾಂಗ್ರೆಸ್ ಪ್ರಾಬಲ್ಯ ಮುಂದುವರೆದಿದೆ. 

ಒಟ್ಟು 6 ಪುರಸಭೆಯಲ್ಲಿ 3 ಕಾಂಗ್ರೆಸ್,  ಬಿಜೆಪಿ 2 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.  1 ಸ್ಥಾನ ಅತಂತ್ರವಾಗಿದೆ. 

ಶಹಭಾದ್​​​ ನಗರಸಭೆಯನ್ನು ಬಿಜೆಪಿ ತೆಕ್ಕೆಯಿಂದ ಕಾಂಗ್ರೆಸ್​ ಕಿತ್ತುಕೊಂಡು ಗೆಲುವಿನ ನಗೆ ಬೀರಿದೆ. ಆಳಂದದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದು  ಶಾಸಕ, ಸಂಸದರ ಬಲದಿಂದ ಬಿಜೆಪಿಗೆ ಅಧಿಕಾರ ಸಿಗಲಿದೆ. 

ಶಾಸಕ ಅಜಯ್ ಸಿಂಗ್​​​ ತನ್ನ ಸ್ವಂತ ಕ್ಷೇತ್ರದಲ್ಲೇ ಮುಖಭಂಗ ಅನುಭವಿಸಿದ್ದಾರೆ.  ಮಾಲೀಕಯ್ಯ ಗುತ್ತೇದಾರ್ ಸೋಲನುಭವಿಸಿದ್ದಾರೆ.  ಪ್ರಿಯಾಂಕ ಖರ್ಗೆ ಇಲ್ಲಿನ  ಉಸ್ತುವಾರಿ ವಹಿಸಿಕೊಂಡಿದ್ದು ಸಮರ್ಥವಾಗಿ ಸಂಘಟನೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. 

Follow Us:
Download App:
  • android
  • ios