ನಗರ ಸ್ಥಳೀಯ ಚುನಾವಣಾ ಫಲಿತಾಂಶ ಪ್ರಕಟ | ಬೀದರ್‌ನಲ್ಲಿ ಒಂದೇ ಒಂದು ಪುರಸಭೆಗೆ ಚುನಾವಣೆ | ಕಾಂಗ್ರೆಸ್’ಗೆ ಗೆಲುವು 

ಬೀದರ್ (ಸೆ. 03): ನಗರ ಸ್ಥಳೀಯ ಚುನಾವಣಾ ಫಲಿತಾಂಶ ಹೊರ ಬಿದ್ದಿದೆ. ಬೀದರ್ ಜಿಲ್ಲೆಯಲ್ಲಿ ಒಂದೇ ಒಂದು ಪುರಸಭೆಗೆ ಚುನಾವಣೆ ನಡೆಸಲಾಗಿತ್ತು.

ಹಳ್ಳಿಖೇಡ ಪುರಸಭೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಹೈದರಾಬಾದ್-ಕರ್ನಾಟಕ ಭಾಗದ ಪ್ರಮುಖ ನಗರವಿದು. ರಾಜಕೀಯವಾಗಿಯೂ ಪ್ರಾಮುಖ್ಯತೆ ಪಡೆದಿದೆ. ಇತ್ತೀಚಿಗೆ ರಾಹುಲ್ ಗಾಂಧಿ ಇಲ್ಲಿಗೆ ಭೇಟಿ ಕೊಟ್ಟಿದ್ದು ಕಾಂಗ್ರೆಸ್ ಶತಾಯ ಗತಾಯ ಇಲ್ಲಿ ಅಧಿಕಾರ ಸ್ಥಾಪಿಸಲು ಯೋಚನೆ ನಡೆಸುತ್ತಿದೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮುಂಬರುವ ಲೋಕಸಭಾ ಚುನಾವಣೆಗೆ ಬೀದರ್‌ನಿಂದ ಸ್ಪರ್ಧಿಸುತ್ತಾರೆ ಎನ್ನುವ ಮಾತು ಕೇಳಿ ಬರುತ್ತಿದೆ. 

ಹಳ್ಳಿಖೇಡ ಪುರಸಭೆಯ ಈ ಕಾಂಗ್ರೆಸ್ ಗೆಲುವು ಕೈ ಪಾಳಯಕ್ಕೆ ಇನ್ನಷ್ಟು ಶಕ್ತಿ ತುಂಬಲಿದೆ. 

ಸ್ಥಳೀಯ ಸಂಸ್ಥೆ ಚುನಾವಣೆ 2018 : ಇಲ್ಲಿದೆ ಸೋಲು-ಗೆಲುವಿನ ಲೆಕ್ಕಾಚಾರ