ಹೊಸಕೋಟೆ [ಡಿ.10]: ಉಪ ಕದನದ ಜಿದ್ದಾಜಿದ್ದಿನ ತ್ರಿಕೋನ ಸ್ಪರ್ಧೆಯಲ್ಲಿ ಕುಕ್ಕರ್ ಭರ್ಜರಿಯಾಗಿ ವಿಜಿಲ್ ಹಾಕಿದೆ. ಶತಾಯಗತಾಯ ಕೋಟೆಯಲ್ಲಿ ಕಮಲ ಅರಳಿಸುವ ಹೋರಾಟ ನಡೆಸಿದ ಎಂಟಿಬಿ ನಾಗರಾಜ್ ಸೋಲೊಪ್ಪಿಕೊಂಡಿದ್ದಾರೆ. 

ಯುವ ಮೋರ್ಚಾ ಕಾರ್ಯದರ್ಶಿಯಾಗಿ ಹೊಸಕೋಟೆ ಕ್ಷೇತ್ರದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದ ಶರತ್ ಪಕ್ಷ ಬಿಟ್ಟು ಹೋದ ನಂತರ ಆ ಮತಗಳು ಕೂಡ ಎಂಟಿಬಿಗೆ ಸಿಕ್ಕಲಿಲ್ಲ. ಸ್ಥಳೀಯ ಬಿಜೆಪಿ ಬೆಂಬಲ ಶರತ್ ಬಚ್ಚೇಗೌಡಗೆ ಸಿಕ್ಕಿತ್ತು.

ಕುರುಬ ಸಮುದಾಯದ ಮತಗಳ ಹಂಚಿಕೆ, ಬಿಜೆಪಿಯಲ್ಲಿದ್ದ ಬೆಂಬಲಿಗರು ಶರತ್ ಹಿಂದೆ ಹೆಜ್ಜೆ ಹಾಕಿದ್ದು, ಬಿಜೆಪಿಗೆ ಮೈನೆಸ್ ಪಾಯಿಂಟ್ ಗಳಾದವು. ಮೂಲ ಬಿಜೆಪಿಗರು ಹಾಗೂ ಎಂಟಿಬಿ ಬೆಂಬಲಿಗರು ಕಮಲ ಅರಳಿಸಲು
ನಡೆಸಿದ ಯತ್ನ ಫಲ ನೀಡಲಿಲ್ಲ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅಲ್ಲದೆ ಬಿಜೆಪಿಗೆ ಎಂಟಿಬಿ ಬಂದ ತಕ್ಷಣ ಆ ಪಕ್ಷದಲ್ಲಿದ್ದ ಎರಡನೇ ಹಂತದ ನಾಯಕರಾಗಲಿ, ವಿವಿಧ ಮೋರ್ಚಾಗಳ ಪದಾಧಿಕಾರಿಗಳಾಗಲಿ ಎಂಟಿ ಬಿಗೆ ಕ್ಷೇತ್ರದಲ್ಲಿ ರತ್ನಗಂಬಳಿ ಹಾಕಿ ಸ್ವಾಗತಿಸಲಿಲ್ಲ. ಎರಡನೇ ಹಂತದ ನಾಯಕ ರ್ಯಾರು ಅವರೊಂದಿಗೆ ಗುರುತಿಸಿಕೊಳ್ಳಲೇ ಇಲ್ಲ. 

ಒಕ್ಕಲಿಗರು, ಪರಿಶಿಷ್ಟ ಜಾತಿ, ಮುಸ್ಲಿಂ ಹಾಗೂ ಕುರುಬ ಸಮುದಾಯದವರು ಸ್ಪಂದಿಸದೇ ಎಂಟಿಬಿಗೆ ಕೈ ಕೊಟ್ಟಿದ್ದು ಸೋಲಿಗೆ ಕಾರಣವಾಯಿತು ಎಂದು ಹೇಳಲಾಗಿದೆ.