Asianet Suvarna News Asianet Suvarna News

Davanagere: ಪ್ರಾಣಬಿಟ್ಟೇವು ಮೀಸಲಾತಿ‌ ಬಿಡೆವೆಂದ ವಚನಾನಂದ ಸ್ವಾಮೀಜಿ

ವೀರಶೈವ ಲಿಂಗಾಯತರಿಗೆ 2 ಎ ಮೀಸಲಾತಿ ಸಿಗಬೇಕೆಂದು ಎಂಬುದು ಇಂದು ನಿನ್ನೆಯ ಹೋರಾಟವಲ್ಲ‌ ಹಲವು  ದಶಕಗಳ ಇತಿಹಾಸವಿದೆ ಎಂದು ಹರಿಹರದ  ಹರಪೀಠದ ವೀರಶೈವ ಪಂಚಮಸಾಲಿ ಪೀಠದ ಜಗದ್ಗುರು ವಚನಾನಂದ ಸ್ವಾಮಿಜೀ ತಿಳಿಸಿದರು.

Lingayat 2A reservation  vachananda swamiji warns to government gow
Author
First Published Oct 29, 2022, 12:16 AM IST

ವರದಿ : ವರದರಾಜ್ ಏಷ್ಯಾನೆಟ್ ಸುವರ್ಣನ್ಯೂಸ್

ದಾವಣಗೆರೆ (ಅ.28): ವೀರಶೈವ ಲಿಂಗಾಯತರಿಗೆ 2 ಎ ಮೀಸಲಾತಿ ಸಿಗಬೇಕೆಂದು ಎಂಬುದು ಇಂದು ನಿನ್ನೆಯ ಹೋರಾಟವಲ್ಲ‌ ಹಲವು  ದಶಕಗಳ ಇತಿಹಾಸವಿದೆ ಎಂದು ಹರಿಹರದ  ಹರಪೀಠದ ವೀರಶೈವ ಪಂಚಮಸಾಲಿ ಪೀಠದ ಜಗದ್ಗುರು ವಚನಾನಂದ ಸ್ವಾಮಿಜೀ ತಿಳಿಸಿದರು. ಹರಮಠದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ರಾಜ್ಯಸರ್ಕಾರ 2021 ರಲ್ಲಿ ಜಯಪ್ರಕಾಶ್ ಹೆಗ್ಡೆಯವರ ನೇತೃತ್ವದಲ್ಲಿ ಕುಲಶಾಸ್ತ್ರೀಯ ಅಧ್ಯಯನ ಮಾಡಿಸುತ್ತಿದೆ. ಜಯಪ್ರಕಾಶ್ ಸಮಿತಿ ನೀಡುವ ವರದಿ ಅನುಸರಿಸಿ  2 ಎ ಮೀಸಲಾತಿ ಸಿಗಲಿದೆ. ಈ ಡಿಸಂಬರ್ ನಲ್ಲಿ ಅದರ ಸಂಪೂರ್ಣ ವರದಿ ನೀಡಿದ ನಂತರ ಬಸವರಾಜ್ ಬೊಮ್ಮಾಯಿ ಸರ್ಕಾರ ಮೀಸಲಾತಿ ಪ್ರಕಟಿಸುತ್ತದೆ ಎಂಬ ವಿಶ್ವಾಸ ಇದೆ ಎಂದು ವಚನಾನಂದ ಶ್ರೀ ಅಭಿಪ್ರಾಯಿಸಿದರು. ನಾವು ಮೀಸಲಾತಿ ವಿಚಾರದಲ್ಲಿ ನಮ್ಮದು ಅಚಲ ನಿರ್ಧಾರ ಪ್ರಾಣ ಬಿಟ್ಟೇವು ಆದ್ರೆ ಮೀಸಲಾತಿ‌ ಬಿಡುವುದಿಲ್ಲ ಎಂದರು. 2 ಎ ಮೀಸಲಾತಿ ವಿಚಾರದಲ್ಲಿ ನಮ್ಮ ‌ಸಮುದಾಯದ ಸಾರ್ವಜನಿಕರಲ್ಲಿ ಗೊಂದಲವಿದೆ. ಆ ಗೊಂದಲವನ್ನು ಪರಿಹರಿಸಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ನಮ್ಮ ಪ್ರತಿನಿಧಿಗಳು ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಗದಗ  ಸೇರಿದಂತೆ ಹಲವಡೆ ಜಿಲ್ಲಾ  ಪ್ರವಾಸ ಮುಗಿಸಿ ಹಳ್ಳಿ ಹಳ್ಳಿಯಲ್ಲು ಸಮಾಜದ ಬಂಧುಗಳನ್ನು ಎಚ್ಚರಿಸುವ ಕೆಲಸವನ್ನು ಮಾಡುತ್ತಿದ್ದೇವೆ.ಬರುವ ಡಿಸಂಬರ್ ರೊಳಗೆ ಮೀಸಲಾತಿ ಪ್ರಕಟವಾಗುವ ಸಾಧ್ಯತೆ ಗಳಿವೆ.ಇದಕ್ಕೆ ನಮ್ಮ ಸಮುದಾಯದ ಸಚಿವರು ಶಾಸಕರು ಪ್ರಯತ್ನ ನಡೆಸಿದ್ದಾರೆ ಎಂದರು

ಕೇಂದ್ರ ಸರ್ಕಾರದ ಹಲವಾರು ಮಂತ್ರಿಗಳ ಜೊತೆ ಸಂಪರ್ಕದಲ್ಲಿದ್ದೇವೆ ಕೇಂದ್ರದಲ್ಲಿ ಓಬಿಸಿ ಗೆ ಪಂಚಮಸಾಲಿ ಲಿಂಗಾಯತರು ಸೇರ್ಪಡೆಯಾಗಬೇಕು ಅದಕ್ಕು ಪ್ರಯತ್ನವು ನಡೆದಿದೆ. ಕೇಂದ್ರವು ಇದೀಗ ಹಸಿರು ನಿಶಾನೆ ಸಿಕ್ಕಿರುವುದರಿಂದ ಅದು  ಇನ್ನೊಂದು ಕಡೆ ಆಗುತ್ತದೆ ಎಂದರು.‌

ಸರ್ಕಾರ ಅರಾತುರಿಯಲ್ಲಿ ಮಾಡಿ ಮೀಸಲಾತಿ ಗೊಂದಲ ಆಗಬಾರದು ಕಾನೂನು ತೊಡಕು ಬರದಂತೆ ಎಚ್ಚರವಹಿಸಬೇಕು.ಮಹಾರಾಷ್ಟ್ರ ದಲ್ಲಿ ಶೇ 14 ಮೀಸಲಾತಿ ಯನ್ನು ಕೊಟ್ಟರು ಅದು ಸುಪ್ರೀಂ ಕೋರ್ಟ್ ನಲ್ಲಿ ರಿಜಕ್ಟ್ ಆಯಿತು. ಏಕೆಂದರೆ ಅಲ್ಲಿ ಕುಲ ಶಾಸ್ತ್ರೀಯ ಅಧ್ಯಯನ ಆಗಿರಲಿಲ್ಲ.ಆ ಕಾರಣಕ್ಕೆ ಸರ್ಕಾರ ಎಚ್ಚರ ವಹಿಸಬೇಕೆಂದು ಮನವಿ ಮಾಡಿದರು.

ನಮ್ಮದು ಮಂದಗಾಮಿಗಳ ಹೋರಾಟ ನಮ್ಮ ಹೋರಾಟಕ್ಕೆ ನೂರಕ್ಕು ನೂರರಷ್ಟು ಪ್ರತಿಫಲ ಸಿಕ್ಕೇ ಸಿಗುತ್ತದೆ. ನಾವು ಸರ್ಕಾರಕ್ಕೆ ಯಾವುದೇ ಗಡುವು ಕೊಡುವುದಿಲ್ಲ. ಮೀಸಲಾತಿಯಷ್ಟೇ ಕೇಳುತ್ತೇವೆ. ನಿರಂತರ ಪ್ರಯತ್ನವನ್ನು ಎಲ್ಲಿ ಬೇಕು ಅಲ್ಲಿ ಮಾಡುತ್ತಿದ್ದೇವೆ ಎಂದು ಹೇಳಿದರು. ಇಡೀ ಪಂಚಮಸಾಲಿ ಸಮಾಜದ ಬಂಧುಗಳಿಗೆ ಬೇಕಾಗಿರುವುದು ಮೀಸಲಾತಿ ಅದನ್ನೇ ಪಡೆದೇ ತೀರುತ್ತೇವೆ ಎಂದರು. 

ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಪ್ರಾಮಾಣಿಕವಾಗಿ ಸ್ಪಂದಿಸುವೆ: ಜಾರಕಿಹೊಳಿ

ಎಸ್ಸಿಎಸ್ಟಿ ಮೀಸಲಾತಿಯನ್ನು ಘೋಷಣೆ ಮಾಡಿರುವುದನ್ನು ಸ್ವಾಗತಿಸುತ್ತೇವೆ. ನಮ್ಮ ಸಮುದಾಯಕ್ಕು ಮೀಸಲಾತಿಯನ್ನು  ಶೀಘ್ರ ಘೋಷಣೆ ಮಾಡುತ್ತದೆ. ಸರ್ಕಾರದ ಮೇಲೆ ನೂರಕ್ಕು ನೂರು ಭರವಸೆ ಇದೆ. 

ಪಂಚಮಸಾಲಿ ಸಮುದಾಯದಲ್ಲು ಬಡವರಿದ್ದಾರೆ.ಅವರ ಮಕ್ಕಳಿಗೆ ಆರ್ಥಿಕ ಉದ್ಯೋಗದಲ್ಲಿ ಮೀಸಲಾತಿ ಬೇಕಾಗಿದೆ ಬಾವಿಬೆಟ್ಟಪ್ಪ ಸೇರಿದಂತೆ ಹಲವು‌ ಮಹನೀಯರ ನಿರಂತರ ಹೋರಾಟದ ಫಲವಾಗಿ ಮೀಸಲಾತಿ ಸಿಗುತ್ತಿದೆ. ನಾವು ಆಶಾಭಾವನೆಯಿಂದ ಇದ್ದೇವೆ ಎಂದರು.

SC ST Reservation ಹೆಚ್ಚಳಕ್ಕೆ ಗವರ್ನರ್ ಅಂಕಿತ, ಅಹೋರಾತ್ರಿ ಧರಣಿ ಅಂತ್ಯಗೊಳಿಸಿದ ಸ್ವಾಮೀಜಿ

ಜಾತಿ ಕಾಲಂ19 ವೀರಶೈವ ಲಿಂಗಾಯತ ಪಂಚಮಸಾಲಿ ಎಂದು ಬರೆಸಲು ಸ್ವಾಮೀಜಿ ಸಮಾಜಕ್ಕೆ ಕರೆ
ನಾವು 2009 ರಲ್ಲಿ 3ಬಿ ಮೀಸಲಾತಿ ಸಿಕ್ಕರು ಒಬ್ಬೇ ಒಬ್ಬ ಪಂಚಮಸಾಲಿ ಆ ಸೌಲಭ್ಯ ಪಡೆದುಕೊಂಡಿಲ್ಲ‌. ಇವತ್ತಿಗು ನಾವು ಜನರಲ್ ಲ್ಲೇ ಇದ್ದೇವೆ.ನಾಮಕಾವಸ್ಥೆಗೆ ಮಾತ್ರ  3 ಬಿ ಲ್ಲೇ ಇದ್ದೇವೆ. ನಮ್ಮ ಜನಕ್ಕೆ    ಆ ಸೌಲಭ್ಯವನ್ನು ಹೇಗೆ ಪಡೆಯಬೇಕೆಂಬುದು ಗೊತ್ತಿಲ್ಲ. ಜಾತಿ ಪ್ರಮಾಣಪತ್ರದಲ್ಲಿ ವೀರಶೈವ ಲಿಂಗಾಯತ , ಹಿಂದು ಲಿಂಗಾಯತ ಎಂದು ಬರೆಸುತ್ತಿದ್ದಾರೆ‌. ಕಾಲಂ ನಂಬರ್ 19 ರಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಅಂತಾ ಇದೆ ಅದನ್ನು ನಮ್ಮವರು ಬರೆಸಬೇಕು. ಆ ಸರ್ಟಿಪಿಕೇಟ್ ನ್ನು ನಮ್ಮ ಸಮಾಜದವರು ತೆಗೆದುಕೊಳ್ಳಬೇಕು. ಆ ಸರ್ಟಿಪಿಕೇಟ್ ತೆಗೆದುಕೊಂಡಿಲ್ಲ ಎಂದ್ರೆ ಮುಂದೆ 2 ಎ ಮೀಸಲಾತಿ ಪಡೆಯುವುದಕ್ಕೆ ಅರ್ಹರೆ ಇರೋದಿಲ್ಲ ಆಗ ಗೊಂದಲವಾಗುತ್ತದೆ.ಈ ಗೊಂದಲವನ್ನು‌ ಪರಿಹರಿಸಲು ನಾವು ರಾಜ್ಯ ಪ್ರವಾಸ ಮಾಡಿ ಜಿಲ್ಲಾವಾರು ಜಾಗೃತಿ ಮೂಡಿಸುತ್ತಿದ್ದೇವೆ. ಗ್ರಾಮ ಮಟ್ಟದ ಅದ್ಯಕ್ಷರಿಂದ ಹಿಡಿದು ಅದಕ್ಕೆಂದು ಸಮಿತಿಗಳನ್ನು ಜಾಗೃತಿ ಮೂಡಿಸುತ್ತಿದ್ದೇವೆಂದು ವಚನಾನಂದ ಶ್ರೀಗಳು ತಿಳಿಸಿದರು.

Follow Us:
Download App:
  • android
  • ios