ಕೆಆರ್‌ ಕ್ಷೇತ್ರ ಮಧುಮೇಹ ಮುಕ್ತವಾಗಿಸೋಣ : ರಾಮದಾಸ್‌

ಮಧುಮೇಹ ಕಾಯಿಲೆ ಇಂದು ದಿನೇ ದಿನೇ ಉಲ್ಬಣಗೊಳ್ಳುತ್ತಿದ್ದು, ಅದರ ವಿರುದ್ಧ ಸಮರ ಸಾರುವ ಸಂಕಲ್ಪ ಕೈಗೊಂಡಿರುವ ಶಾಸಕ ಎಸ್‌.ಎ. ರಾಮದಾಸ್‌ ಅವರು, ಈ ಕುರಿತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರೊಂದಿಗೆ ಸುದೀರ್ಘ ಚರ್ಚೆ ನಡೆಸಿದರು.

Lets make KR constituency  diabetes free Ramdas snr

 ಮೈಸೂರು :  ಮಧುಮೇಹ ಕಾಯಿಲೆ ಇಂದು ದಿನೇ ದಿನೇ ಉಲ್ಬಣಗೊಳ್ಳುತ್ತಿದ್ದು, ಅದರ ವಿರುದ್ಧ ಸಮರ ಸಾರುವ ಸಂಕಲ್ಪ ಕೈಗೊಂಡಿರುವ ಶಾಸಕ ಎಸ್‌.ಎ. ರಾಮದಾಸ್‌ ಅವರು, ಈ ಕುರಿತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರೊಂದಿಗೆ ಸುದೀರ್ಘ ಚರ್ಚೆ ನಡೆಸಿದರು.

ಇತ್ತೀಚೆಗೆ ದೆಹಲಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಜಿ. ಮನ್ಸುಖ್‌ ಮಾಂಡವಿಯಾ ಅವರನ್ನು ಭೇಟಿ ಮಾಡಿದ ಶಾಸಕ ಎಸ್‌.ಎ. ರಾಮದಾಸ್‌ ಅವರು, ಮೈಸೂರಿನ ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ ಮುಂದಿನ ವರ್ಷಗಳ ಯೋಜನೆಯೊಂದಿಗೆ ಮಧುಮೇಹ ಮುಕ್ತ ಕ್ಷೇತ್ರವಾಗಿಸಲು ಸಂಕಲ್ಪ ಮಾಡಿರುವ ಹಾಗೂ ರೂಪಿಸಲಾದ ಯೋಜನೆಗಳ ಬಗ್ಗೆ ಸಚಿವರಿಗೆ ವಿವರಿಸಿದರು.

ವಯಸ್ಕರಲ್ಲಿ ಸಾಂಕ್ರಾಮಿಕವಲ್ಲದ ರೋಗಗಳ ಬಗ್ಗೆ ವಿಶೇಷವಾಗಿ ಮಧುಮೇಹದ ಬಗ್ಗೆ ಜಾಗೃತಿ ಮೂಡಿಸಲು ಕೆಲಸ ಮಾಡುತ್ತಿದ್ದೇವೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮತ್ತು ಮೊಬೈಲ್‌ ಟೀಮ್‌ ಮೂಲಕ ನಿಯಮಿತವಾಗಿ 30 ವರ್ಷಕ್ಕಿಂತ ಹೆಚ್ಚು ವಯಸ್ಸಿನವರಿಗೆ ತಪಾಸಣೆ ನಡೆಸುತ್ತಿದ್ದೇವೆ ಎಂದು ಸಚಿವರಿಗೆ ದಾಖಲೆಗಳ ಸಮೇತ ಮನವರಿಕೆ ಮಾಡಿದರು.

ನನ್ನ ಪ್ರತಿನಿಧಿತ್ವದ ಕೆ.ಆರ್‌. ಕ್ಷೇತ್ರದಲ್ಲಿ ಈ ನಿಟ್ಟಿನಲ್ಲಿ ಆರೋಗ್ಯ ಮತ್ತು ಆಯುಷ್‌ ಇಲಾಖೆ, ನ್ಯಾಚುರೋಪತಿ ಇಲಾಖೆಗಳ ಸಹಯೋಗದಲ್ಲಿ ಹಲವು ಕ್ರಮಗಳನ್ನು ಕೈಗೊಂಡಿದ್ದೇವೆ. ಮಾರ್ಪಾಡು ಜೀವನ ಶೈಲಿಯ ಚಟುವಟಿಕೆಗಳ ತಡೆಗಟ್ಟುವಿಕೆ ಮತ್ತು ಆರೋಗ್ಯ ಪ್ರಚಾರದ ಚಟುವಟಿಕೆಗಳನ್ನು ಸುಧಾರಿಸಲು ಥೀಮ್‌ ಆಧಾರಿತ ಉದ್ಯಾನವನವನ್ನು ರಚಿಸುವ ಮುಖೇನ ದೈಹಿಕ ಚಟುವಟಿಕೆಗಳನ್ನು ಉತ್ತೇಜಿಸುವುದು. ಓಪನ್‌ ಜಿಮ್ನಾಷಿಯಂ, ವಾಕಿಂಗ್‌ ಪಾತ್‌ಗಳನ್ನು ರಚಿಸುವುದು, ಮಧುಮೇಹಕ್ಕೆ ಸಂಬಂಧಿಸಿದ ಹೋರ್ಡಿಂಗ್‌ಗಳ ಮಾಹಿತಿಯನ್ನು ಹಾಕುವುದನ್ನು ಮಾಡಲಾಗಿದೆ.

ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮತ್ತು ಶಿಬಿರ ವಿಧಾನದ ಆಧಾರದ ಮೇಲೆ ನಿಯಮಿತವಾಗಿ 30 ವರ್ಷ ಮೇಲ್ಪಟ್ಟವಯಸ್ಸಿನ ಜನಸಂಖ್ಯೆಯನ್ನು ತಪಾಸಣೆ ಮಾಡುವುದು. ಮಧುಮೇಹ ಕುರಿತು ಇತ್ತೀಚೆಗೆ ಮನೆ ಮನೆಗೆ ಸಮೀಕ್ಷೆ ನಡೆಸಲಾಗಿದ್ದು, ಈವರೆಗರ 24313 ಕೈ ಮಧುಮೇಹ ರೋಗಿಗಳನ್ನು ಪತ್ತೆ ಹಚ್ಚಲಾಗಿದೆ ಎಂಬ ಮಾಹಿತಿ ನೀಡಿದರು.

ಪತ್ತೆಯಾದ ಮಧುಮೇಹ ರೋಗಿಗಳಲ್ಲಿ ಔಷಧಿಗಳ ನಿಯಮಿತ ಪೂರೈಕೆ, ನಿಯಮಿತ ಅನುಸರಣೆ, ಚಿಕಿತ್ಸೆಯ ಅನುಸರಣೆಯನ್ನು ತಿಳಿದುಕೊಳ್ಳುವುದು ಮತ್ತು ನಿಯಂತ್ರಣ ದರವನ್ನು ನಿರ್ಣಯಿಸುವುದು ಒಂದೆಡೆಯಾದರೆ, ಉತ್ತಮ ನಿಯಂತ್ರಣಕ್ಕಾಗಿ ಕುಟುಂಬದ ಸದಸ್ಯರು ಮತ್ತು ಮಧುಮೇಹ ರೋಗಿಗಳಿಗೆ ಸಲಹೆ ನೀಡುವ ಕೆಲಸವನ್ನೂ ಸಮರೋಪಾದಿಯಲ್ಲಿ ಮಾಡಲಾಗುತ್ತಿದೆ ಎಂದು ಸಚಿವರಿಗೆ ತಿಳಿಸಿದರು.

-- ಡಯಾಬಿಟಿಕ್‌ ಸೆಂಟರ್‌ಗೆ ಮನವಿ--

ಬಿಪಿಎಲ್‌ ಕುಟುಂಬಗಳಿಗೆ ಆಯುಷ್ಮಾನ್‌ ಭಾರತ್‌, ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ ವಿಮಾ ಯೋಜನೆಯನ್ನು ಬಳಸಿಕೊಳ್ಳಲು ಜಾಗೃತಿ ಮೂಡಿಸಲಾಗಿದೆಯಲ್ಲದೆ, ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಬೋರ್‌ವೆಲ್‌ ನೀರನ್ನು ಉದ್ಯಾನವನಕ್ಕೆ ಉಪಯೋಗಿಸಿ ಸರ್‌ಫೇಸ್‌ ವಾಟರ್‌ ಕಲ್ಪಿಸಲು ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರತ್ಯೇಕ ಡಯಾಬಿಟಿಸ್‌ ಸೆಂಟರ್‌ ಪ್ರಾರಂಭಿಸಲು ಕೇಂದ್ರ ಸಚಿವರಲ್ಲಿ ಶಾಸಕರು ಮನವಿ ಮಾಡಿದರು.

ಕೆ.ಆರ್‌. ಕ್ಷೇತ್ರದಲ್ಲಿ ಮುಂದಿನ ಐದು ವರ್ಷಗಳಲ್ಲಿ ಮಧುಮೇಹ ಮುಕ್ತ ಕ್ಷೇತ್ರವನ್ನು ರಚಿಸುವ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ಈ ಸಂಬಂಧ ನಿಮ್ಮ ಸಂಪೂರ್ಣ ಬೆಂಬಲ ಮತ್ತು ಸಹಕಾರವನ್ನು ನೀಡುವಂತೆ ಶಾಸಕ ರಾಮದಾಸ್‌ ಅವರು ಸಚಿವರಲ್ಲಿ ಪತ್ರದ ಮೂಲಕ ಮನವಿ ಮಾಡಿದರು.

Latest Videos
Follow Us:
Download App:
  • android
  • ios