ಸರ್ಕಾರಿ, ಖಾಸಗಿ ಕೆಲಸಕ್ಕೆ ಸೇರುವವರು ಕೇವಲ ಉದ್ಯೋಗಿಗಳಲ್ಲ, ಕರ್ಮಯೋಗಿಗಳು. ನಾವೆಲ್ಲ ಒಂದುಗೂಡಿ ದೇಶವನ್ನು ಅಭಿವೃದ್ಧಿಯ ಪಥದತ್ತ ಕೊಂಡ್ಯೊಯ್ಯುವ ಮೂಲಕ ಭಾರತವನ್ನು ನಂ. 1 ದೇಶ ಮಾಡಲು ಶ್ರಮಿಸಬೇಕು ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. 

ಹುಬ್ಬಳ್ಳಿ (ಜು.23): ಸರ್ಕಾರಿ, ಖಾಸಗಿ ಕೆಲಸಕ್ಕೆ ಸೇರುವವರು ಕೇವಲ ಉದ್ಯೋಗಿಗಳಲ್ಲ, ಕರ್ಮಯೋಗಿಗಳು. ನಾವೆಲ್ಲ ಒಂದುಗೂಡಿ ದೇಶವನ್ನು ಅಭಿವೃದ್ಧಿಯ ಪಥದತ್ತ ಕೊಂಡ್ಯೊಯ್ಯುವ ಮೂಲಕ ಭಾರತವನ್ನು ನಂ. 1 ದೇಶ ಮಾಡಲು ಶ್ರಮಿಸಬೇಕು ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. 

ಶನಿವಾರ ವಿದ್ಯಾನಗರದ ಬಿವಿಬಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಆದಾಯ ತೆರಿಗೆ ಇಲಾಖೆ, ರೈಲ್ವೆ ಇಲಾಖೆ, ಅಂಚೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಸರ್ಕಾರಿ ಉದ್ಯೋಗಗಳಲ್ಲಿ ಹೊಸದಾಗಿ ನೇಮಕಗೊಂಡವರಿಗೆ ನೇಮಕಾತಿ ಪತ್ರಗಳ ವಿತರಣೆಯ 7ನೇ ರೋಜಗಾರ್‌ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸಂಸ್ಕೃತಿ, ಪರಿಸರ, ಕನ್ನಡವನ್ನು ಉಳಿಸಿ: ಹಿರೇಮಗಳೂರು ಕಣ್ಣನ್‌ ಸಲಹೆ

ಪ್ರಧಾನ ಮಂತ್ರಿಗಳ ಬಹು ಅಪೇಕ್ಷಿತ ಕಾರ್ಯಕ್ರಮವಾಗಿರುವ ಈ ರೋಜಗಾರ್‌ ಮೇಳ ಹುಬ್ಬಳ್ಳಿಯಲ್ಲಿ ನಡೆದಿರುವುದು ಸಂತಸದ ಸಂಗತಿ. ಕಳೆದ 6 ಮೇಳದಲ್ಲಿ 4.30 ಲಕ್ಷ ಯುವಕರಿಗೆ ಕೇಂದ್ರ ಸರ್ಕಾರಿ ಉದ್ಯೋಗ ಕೊಡಲಾಗಿದೆ. ಶನಿವಾರದ 7ನೇ ರೋಜಗಾರ್‌ ಮೇಳ ದೇಶಾದ್ಯಂತ 44 ಕಡೆಗಳಲ್ಲಿ ನಡೆದಿದ್ದು, 70 ಸಾವಿರ ಯುವಕರು ನೇಮಕಾತಿ ಪತ್ರ ಪಡೆದುಕೊಂಡಿದ್ದಾರೆ.

ಸ್ವಾವಲಂಬನೆ ಆಗಬೇಕು: ಮೊಬೈಲ್‌ ಉತ್ಪಾದನೆಯಲ್ಲಿ ಭಾರತ ಪ್ರಪಂಚದಲ್ಲಿ 2ನೇ ಸ್ಥಾನದಲ್ಲಿದ್ದು, ಆಟೋಮೊಬೈಲ್‌ ಕ್ಷೇತ್ರದಲ್ಲಿ 3ನೇ ಸ್ಥಾನ ಹೊಂದಿದೆ. ಮೇಕ್‌ ಇನ್‌ ಇಂಡಿಯಾ, ಮೇಡ ಇನ್‌ ಇಂಡಿಯಾ ಮೂಲಕ ಸ್ವದೇಶ ಉತ್ಪಾದನೆಗೆ ಹೆಚ್ಚಿನ ಪ್ರೋತ್ಸಾಹ ದೊರೆತಿದೆ. ಖಾದ್ಯ ತೈಲ, ಸೈನಿಕ ವಸ್ತುಗಳು, ರಸಗೊಬ್ಬರ, ಪೆಟ್ರೋಲಿಯಂ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸ್ವಾವಲಂಬನೆ ಸಾಧಿಸಬೇಕಿದೆ ಎಂದರು.

ದೇಶದ ರೈಲು ನಿಲ್ದಾಣಗಳು ವಿಮಾನ ನಿಲ್ದಾಣಗಳಂತೆ ಅಭಿವೃದ್ಧಿ ಹೊಂದಿವೆ. ರೈಲ್ವೆ, ವಿಮಾನಯಾನ, ಅಂಚೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಅಭಿವೃದ್ಧಿಯಾಗುತ್ತಿವೆ. ಮೋದಿ ಅವರ ಸಂಕಲ್ಪದಂತೆ ಮುಂದಿನ 25 ವರ್ಷಗಳಲ್ಲಿ ಭಾರತ ಪ್ರಪಂಚದಲ್ಲಿ ಮೊದಲ ಸ್ಥಾನಕ್ಕೆ ಬರಬೇಕು. ನೀವು ಬೆಳೆಯಿರಿ, ನೀವು ಸೇವೆ ಸಲ್ಲಿಸುವ ಇಲಾಖೆಯನ್ನು ಬೆಳೆಸಿರಿ. ಸೇವೆಗೆ ಸೇರುವ ಇಲಾಖೆಗಳಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿ. ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಜೊತೆಜೊತೆಯಾಗಿ ಕಾರ್ಯನಿರ್ವಹಿಸೋಣ. ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸಿದರು.

ಬಿ.ಕೆ.ಹರಿಪ್ರಸಾದ್‌ ನೋವು ಸರ್ಕಾರಕ್ಕೆ ಅಪಾಯಕಾರಿ: ಕೋಟ ಶ್ರೀನಿವಾಸ ಪೂಜಾರಿ

ಈ ವೇಳೆ ಆದಾಯ ತೆರಿಗೆ ಇಲಾಖೆ 1, ರೈಲ್ವೆ ಇಲಾಖೆ 52, ಎಲ್‌ಐಸಿ 50, ಐಐಟಿ 18, ಅಂಚೆ ಇಲಾಖೆ 17, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ 10 ಒಟ್ಟಾರೆ 148 ಜನರಿಗೆ ಕಾರ್ಯಕ್ರಮದಲ್ಲಿ ನೇಮಕಾತಿ ಪತ್ರ ನೀಡಲಾಯಿತು. ಆದಾಯ ತೆರಿಗೆ ಮುಖ್ಯ ಆಯುಕ್ತ ಮನೋಜ ಜೋಶಿ, ಪ್ರಧಾನ ಮುಖ್ಯ ಆಯುಕ್ತೆ ಶಮಾ ಬನಸಿಯಾ, ಪ್ರಧಾನ ಆದಾಯ ತೆರಿಗೆ ಆಯುಕ್ತ ಅಸಿತ್‌ ಸಿಂಗ್‌, ಆದಾಯ ತೆರಿಗೆ ಆಯುಕ್ತ ಎಂ.ಕೆ. ಬಿಜು, ಕೇಶವ ದೀಕ್ಷಿತ್‌ ಸೇರಿದಂತೆ ಹಲವರಿದ್ದರು.