ಯುವಜನತೆ ಇತಿಹಾಸ ತಿಳಿದುಕೊಳ್ಳಲಿ: ಅರುಣ್
ಇಂದಿನ ಯುವಕ, ಯುವತಿಯರಿಗೆ ಕಿತ್ತೂರು ರಾಣಿ ಚೆನ್ನಮ್ಮಳ ವೀರತನ ಅರ್ಥ ಮಾಡಿಸುವ ಕೆಲಸ ಮಾಡಿದರೆ ಮಾತ್ರ ಅವರ ಜಯಂತಿಗೊಂದು ಅರ್ಥ ಬರುತ್ತದೆ. ಇವತ್ತು ಇತಿಹಾಸವನ್ನು ಕೇಳದೆ ಇರುವ ಸ್ಥಿತಿಗಳೂ ಇದೆ. ಶಿಕ್ಷಣ ಪದ್ಧತಿಯಲ್ಲೂ ಕೆಲ ಬದಲಾವಣೆ ಅಗತ್ಯವಿದೆ. ಯಾಕೆ ನಾವು ಇತಿಹಾಸವನ್ನು ತಿಳಿದುಕೊಳ್ಳಬೇಕು. ಆದರ್ಶ ವ್ಯಕ್ತಿಗಳ ಬಗ್ಗೆ ಯಾಕೆ ನಾವು ತಿಳಿದುಕೊಳ್ಳಬೇಕು ಎಂಬುದನ್ನು ಯುವಕರಿಗೆ ತಿಳಿಸುವ ಅಗತ್ಯವಿದೆ ವಿಧಾನ - ಪರಿಷತ್ ಸದಸ್ಯ ಡಿ.ಎಸ್.ಅರುಣ್
ಶಿವಮೊಗ್ಗ(ಅ.24) ನಗರದ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಾಜ್ಯ ವೀರಶೈವ ಲಿಂಗಾಯಿತ ಪಂಚಾಮಶಾಲಿ ಸಂಘದ ಸಹಯೋಗದಲ್ಲಿ ಭಾನುವಾರ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಣೆಯನ್ನು ಸರಳವಾಗಿ ಆಚರಣೆ ಮಾಡಲಾಯಿತು.
Chikkaballapura: ಹಿಂದೂಗಳು ಕೋಮುವಾದಿಗಳಲ್ಲ ಜಾತ್ಯತೀತರು
ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಮಾತನಾಡಿ, ಇಂದಿನ ಯುವಕ, ಯುವತಿಯರಿಗೆ ಕಿತ್ತೂರು ರಾಣಿ ಚೆನ್ನಮ್ಮಳ ವೀರತನ ಅರ್ಥ ಮಾಡಿಸುವ ಕೆಲಸ ಮಾಡಿದರೆ ಮಾತ್ರ ಅವರ ಜಯಂತಿಗೊಂದು ಅರ್ಥ ಬರುತ್ತದೆ. ಇವತ್ತು ಇತಿಹಾಸವನ್ನು ಕೇಳದೆ ಇರುವ ಸ್ಥಿತಿಗಳೂ ಇದೆ. ಶಿಕ್ಷಣ ಪದ್ಧತಿಯಲ್ಲೂ ಕೆಲ ಬದಲಾವಣೆ ಅಗತ್ಯವಿದೆ. ಯಾಕೆ ನಾವು ಇತಿಹಾಸವನ್ನು ತಿಳಿದುಕೊಳ್ಳಬೇಕು. ಆದರ್ಶ ವ್ಯಕ್ತಿಗಳ ಬಗ್ಗೆ ಯಾಕೆ ನಾವು ತಿಳಿದುಕೊಳ್ಳಬೇಕು ಎಂಬುದನ್ನು ಯುವಕರಿಗೆ ತಿಳಿಸುವ ಅಗತ್ಯವಿದೆ ಎಂದರು.
ವೀರರಾಣಿ ಚೆನ್ನಮ್ಮನ ಶೌರ್ಯ ಮತ್ತು ಅವರ ವೀರತನ ಯುವ ಪೀಳಿಗೆಗೆ ಪ್ರೇರಣೆಯಾಗಬೇಕು. ಇತಿಹಾಸ ಕೇಳುವ ಪರಿಸ್ಥಿತಿ ಮತ್ತು ತಾಳ್ಮೆ ಕಡಿಮೆಯಾಗುತ್ತಿದೆ. ಆಸಕ್ತಿ ಇಲ್ಲವಾಗಿದೆ ಇತಿಹಾಸ ಪುರುಷರ ಚರಿತ್ರೆಯನ್ನು ತಿಳಿಸುವ ಕೆಲಸ ಶಿಕ್ಷಣ ಪದ್ಧತಿಯಲ್ಲಿ ಕಡ್ಡಾಯವಾಗಿ ಆಗಬೇಕಿದೆ. ಶಿಕ್ಷಣ ಪದ್ಧತಿಯಲ್ಲಿ ಬದಲಾವಣೆಯೂ ಮಾಡಬೇಕಿದೆ. ಸಮಸ್ಯೆಗಳು ಬಂದಾಗ ಹಿಂದಿನ ಇತಿಹಾಸ ಪುರುಷರು. ಮತ್ತು ಮಹಾಪುರುಷರು ಯಾವ ರೀತಿ ಎದುರಿಸಿದರು ಎಂಬ ಅರಿವು ಯುವಪೀಳಿಗೆಗೆ ಬೇಕಾಗಿದೆ ಸಮಾಜ ಕೂಡ ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕರ್ತವ್ಯ ಮಾಡಬೇಕು ಎಂದರು.
Chikkaballapura : 28ಕ್ಕೆ ಜಿಲ್ಲಾದ್ಯಂತ ಕೋಟಿ ಕಂಠ ಗೀತ ಗಾಯನ
ಜಿಲ್ಲಾಧಿಕಾರಿ ಡಾ.ಆರ್.ಸೆಲ್ವ ಮಣಿ, ಜಿಪಂ ಸಿಇಒ ಎನ್.ಡಿ.ಪ್ರಕಾಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್, ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಸಂಘಟನಾ ಕಾರ್ಯದರ್ಶಿ ಎಂ.ಸಿದ್ದೇಶ್, ಜಿಲ್ಲಾಧ್ಯಕ್ಷ ಚಂದ್ರಪ್ಪ ಮೆಡ್ಲೇರಿ. ನಗರಾಧ್ಯಕ್ಷ ಟಿ.ಎಂ. ಕುಮಾರ್, ಚೆನ್ನಪ್ಪ. ಹಾಗೂ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.