Asianet Suvarna News Asianet Suvarna News

ಜಾತಿ ಗಣತಿ ವರದಿ ಸರ್ಕಾರವೇ ಹುಡಕಲಿ: ಅರವಿಂದ ಲಿಂಬಾವಳಿ

ಕಾಂತರಾಜ ವರದಿ ಮೂಲ ಪ್ರತಿ ಕಂಪ್ಯೂಟರ್ ನಲ್ಲಿ ಇದ್ದೆ ಇರುತ್ತದೆ. ಅದನ್ನು ಕಳ್ಳತನ ಮಾಡಲು ಸಾಧ್ಯವಿಲ್ಲ. ಸಮಾಜದಲ್ಲಿ ಜಾತಿ ಗಣತಿ ಯೋಜನೆ ಜಾರಿಯಾಗಬಾರದು ಎನ್ನುವವರು ಸಾಮಾಜಿಕವಾಗಿ ಯೋಚನೆ ಮಾಡಬೇಕು ಎಂದ ಮಾಜಿ ಸಚಿವ ಅರವಿಂದ ಲಿಂಬಾವಳಿ 

Let the Government of Karnataka Search the Caste Census Report Says Arvind Limbavali grg
Author
First Published Nov 23, 2023, 12:01 PM IST

ಬೆಳಗಾವಿ(ನ.23):  ಜಾತಿ ಗಣತಿಯ ಕಾಂತ ರಾಜ ವರದಿ ಕಾಣೆಯಾಗಿರುವುದನ್ನು ಸರ್ಕಾರ ಹುಡುಕಬೇಕು ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಹೇಳಿದರು. ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂತರಾಜ ವರದಿ ಮೂಲ ಪ್ರತಿ ಕಂಪ್ಯೂಟರ್ ನಲ್ಲಿ ಇದ್ದೆ ಇರುತ್ತದೆ. ಅದನ್ನು ಕಳ್ಳತನ ಮಾಡಲು ಸಾಧ್ಯವಿಲ್ಲ. ಸಮಾಜದಲ್ಲಿ ಜಾತಿ ಗಣತಿ ಯೋಜನೆ ಜಾರಿಯಾಗಬಾರದು ಎನ್ನುವವರು ಸಾಮಾಜಿಕವಾಗಿ ಯೋಚನೆ ಮಾಡಬೇಕು ಎಂದರು.

ಸಂವಿಧಾನದ ಪ್ರಕರಾ ಜಾತಿ ಗಣತಿ ಮಾಡಲು ಬರುವುದಿಲ್ಲ. ಯಾವ ಜಾತಿಯವರು ಎಷ್ಟು ಜನಾ ಇದ್ದಾರೆ. ಜಾತಿ, ಸಾಮಾಜಿಕ, ಆರ್ಥಿಕವಾಗಿ ಎಲ್ಲವನ್ನೂ ಇಟ್ಟುಕೊಂಡು ಕಾಂತ ರಾಜ ವರದಿ ಮಾಡಿದ್ದಾರೆ.ಇದರಲ್ಲಿ ಸ್ವಾಭಾವಿಕವಾಗಿ ಯಾವ ಯಾವ ಜಾತಿ ಹಿಂದುಳಿದಿವೆ. ಅವುಗಳ ಪರಿಸ್ಥಿತಿ ಏನಿದೆ ಎನ್ನುವ ಪರಿಸ್ಥಿತಿ ಹೊರಗಡೆ ಬರುತ್ತದೆ. ಅದು ಬಂದ ಮೇಲೆ ನಮ್ಮ ಅಸ್ಥಿತ್ವ ಏನು ಎಂಬುವುದು ಕೆಲವರಿಗೆ ಪ್ರಶ್ನೆ ಉದ್ಬವವಾಗಿರಬಹುದು. ಇದಕ್ಕೆ ಹೆದರುವ ಅವಶ್ಯಕತೆ ಇಲ್ಲ ಎಂದರು.

ಬೆಳಗಾವಿಯಲ್ಲಿ ಮತ್ತೆ ಎಂಇಎಸ್ ಪುಂಡಾಟ: ಮಹಾಮೇಳಾವ್‌ಗೆ ನಾಡದ್ರೋಹಿಗಳ ಸಿದ್ಧತೆ

ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿಯೇ ಕಾಂತ ರಾಜ ಆಯೋಗ ಮಾಡಿದ್ದು. ಅದು ಬಂದಿದೆ. ಅದನ್ನು ಜಾರಿಗೆ ತರಬೇಕಲ್ಲ. ಸದನದಲ್ಲಿ ಚರ್ಚೆ ಮಾಡಬೇಕು ಎಂದರು.

ಹೊಂದಾಣಿಕೆ ಮಾಡಿಕೊಂಡು ಲೋಕಸಭಾ ಚುನಾವಣೆ ಗೆಲ್ಲಿಸಲು ವಿರೋಧ ಪಕ್ಷದ ನಾಯಕ ಹಾಗೂ ರಾಜ್ಯಾಧ್ಯಕ್ಷ ಸ್ಥಾನ ಮಾಡಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಂಡು ಕೆಲವರು ಬಿಜೆಪಿ ಶಾಸಕರಾಗಿದ್ದಾರೆ ಎಂದು ಪರೋಕ್ಷವಾಗಿ ಬಿ.ವೈ.ವಿಜಯೇಂದ್ರ ಹಾಗೂ ಆರ್.ಅಶೋಕಗೆ ಲಿಂಬಾವಳಿ ಟಾಂಗ್ ನೀಡಿದರು.

Latest Videos
Follow Us:
Download App:
  • android
  • ios