ಕರ್ನಾಟಕದ ಸಿಎಂ ಯಾರೆಂದು ಮೊದಲು ಕಾಂಗ್ರೆಸ್ ಸ್ಪಷ್ಟಪಡಿಸಲಿ

ಕರ್ನಾಟಕದ ಸಿಎಂ ಯಾರು ಎಂದು ಮೊದಲು ಕಾಂಗ್ರೆಸ್ ಸ್ಪಷ್ಟಪಡಿಸಲಿ ಎಂದು ಬಿಜೆಪಿ ಜಿಲ್ಲಾ ಸಹ ವಕ್ತಾರ ಡಾ.ಕೆ. ವಸಂತ್ ಕುಮಾರ್ ಆಗ್ರಹಿಸಿದ್ದಾರೆ.

Let the Congress clarify first who is the CM of Karnataka snr

  ಮೈಸೂರು :  ಕರ್ನಾಟಕದ ಸಿಎಂ ಯಾರು ಎಂದು ಮೊದಲು ಕಾಂಗ್ರೆಸ್ ಸ್ಪಷ್ಟಪಡಿಸಲಿ ಎಂದು ಬಿಜೆಪಿ ಜಿಲ್ಲಾ ಸಹ ವಕ್ತಾರ ಡಾ.ಕೆ. ವಸಂತ್ ಕುಮಾರ್ ಆಗ್ರಹಿಸಿದ್ದಾರೆ.

ಪ್ರಸ್ತುತ ಕರ್ನಾಟಕಕ್ಕೆ ಯಾರು ಮುಖ್ಯಮಂತ್ರಿ ಎಂಬುದೇ ಪ್ರಶ್ನೆಯಾಗಿದೆ? ಶಾಸಕನಲ್ಲದ ಒಬ್ಬ ವ್ಯಕ್ತಿ ಮುಖ್ಯಮಂತ್ರಿಗಳಿಗೆ ಕರೆ ಮಾಡಿ ನಾನು ಹೇಳಿದ್ದನ್ನು ಮಾಡಬೇಕು ಎಂದು ಆಗ್ರಹಪಡಿಸುತ್ತಿರುವುದನ್ನು ನೋಡಿದರೆ ಕರ್ನಾಟಕದ ಮುಖ್ಯಮಂತ್ರಿ ಡಾ. ಯತೀಂದ್ರ ಸಿದ್ದರಾಮಯ್ಯ ಅಥವಾ ಸಿದ್ದರಾಮಯ್ಯ ಅವರೋ ಎಂಬುದನ್ನು ಕಾಂಗ್ರೆಸ್ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರಜಾಪ್ರಭುತ್ವದ ನೀತಿ ನಿಯಮಗಳನ್ನೇ ಗಾಳಿಗೆ ತೂರಿ ಸಿದ್ದರಾಮಯ್ಯ ಅವರ ಮಗ ಅಧಿಕಾರಿಗಳ ಸಭೆ ನಡೆಸುವುದು, ವರ್ಗಾವಣೆ ಮಾಡಲು ಶಿಫಾರಸು ಮಾಡುವುದು, ಆ ಮೂಲಕ ಸರ್ಕಾರವನ್ನೇ ನಡೆಸುವಂತಹ ಪ್ರಯತ್ನವನ್ನು ಮಾಡುತ್ತಿರುವುದು ನಾಚಿಕೇಡಿನ ಸಂಗತಿ. ಈ ರೀತಿಯ ಪ್ರಜಾಪ್ರಭುತ್ವ ಮತ್ತು ಸಂವಿಧಾನ ವಿರೋಧಿ ನೀತಿ ಸರಿಯಲ್ಲ ಎಂದು ಅವರು ಖಂಡಿಸಿದ್ದಾರೆ.

ಕುಮಾರಸ್ವಾಮಿಗೆ ಹೊಟ್ಟೆ ಉರಿ

ಮೈಸೂರು(ನ.18):  ಬಿಜೆಪಿಯವರು, ಕುಮಾರಸ್ವಾಮಿ ಏನೇ ಹೊಟ್ಟೆ ಹಿಸುಕಿಕೊಂಡರೂ ನಾವು ಐದು ವರ್ಷ ಅಧಿಕಾರದಲ್ಲಿ ಇದ್ದೇ ಇರುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ನಂಜನಗೂಡು ತಾಲೂಕು ಕಳಲೆ ಗ್ರಾಮದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಅಂತಾ ಒಬ್ಬ ಇದ್ದಾನೆ. ಅವನಿಗೆ ಬರೀ ಹೊಟ್ಟೆ ಉರಿ. ನಾವು ಅಧಿಕಾರಕ್ಕೆ ಬಂದಿದ್ದೇವೆ ಅಂತಾ ಹೊಟ್ಟೆ ಕಿವುಚಿ ಕೊಳ್ಳುತ್ತಾನೆ. ಇಂಥವರ ಬಗ್ಗೆ ಬಿ ಕೇರ್ ಫ್ಹುಲ್ [ಎಚ್ಚರಿಕೆಯಿಂದಿರಿ]. ನಾವು ಇನ್ನೂ ಐದು ವರ್ಷ ಇದ್ದೇ ಇರುತ್ತೇವೆ. ಬಿಜೆಪಿ, ಕುಮಾರಸ್ವಾಮಿ ಏನೇ ಹೊಟ್ಟೆ ಹಿಸುಕಿಕೊಂಡರು ನಾವು ಐದು ವರ್ಷ ಇರುವುದಾಗಿ ಹೇಳಿದರು.

ಮೋದಿ ಕೈ ಬೀಸಿದ ಕೂಡಲೇ ಮತ ಬರಲ್ಲ. ಮೋದಿ ನಂಜನಗೂಡಿಗೆ ಬಂದು ಕೈ ಬೀಸಿ ಹೋದ ಮೇಲೆ ಕಾಂಗ್ರೆಸ್ ನಾ ಎಲ್ಲರೂ ಗೆದ್ದರು. ನಾನು ಗೆದ್ದೆ, ದರ್ಶನ್ ಧ್ರುವನಾರಾಯಣ್, ಅನಿಲ್ ಚಿಕ್ಕಮಾದು ಗೆದ್ದ. ಎಲ್ಲರೂ ದೊಡ್ಡ ಲೀಡ್ ನಲ್ಲೆ ಗೆದ್ವಿ. ಉಚಿತ ಯೋಜನೆಗಳನ್ನು ಮೋದಿ ಅಣಕಿಸಿದ್ದರು. ಈಗ ಎಲ್ಲಾ ಕಡೆ ಉಚಿತ ಯೋಜನೆ ಘೋಷಣೆ ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು. ಗ್ಯಾರಂಟಿ ಜಾರಿ ಆದರೆ ರಾಜ್ಯ ಆರ್ಥಿಕ ದಿವಾಳಿ ಆಗುತ್ತೆ ಅಂತಾ ಮೋದಿ ಹೇಳಿದ್ದರು. ಗ್ಯಾರಂಟಿ ಜಾರಿ ಮಾಡಿದ ಮೇಲೂ ರಾಜ್ಯ ಅರ್ಥಿಕವಾಗಿ ಸದೃಢ ವಾಗಿದೆ ಎಂದರು.

ಅನೈತಿಕ ರಾಜಕಾರಣದ ಅಧ್ಯಾಯಕ್ಕೆ ಮುನ್ನುಡಿ ಬರೆದವರು ಕುಮಾರಸ್ವಾಮಿ: ವೆಂಕಟೇಶ್ ಕಿಡಿ

ದೇವನೊಬ್ಬ ನಾಮ ಹಲವು

ದೇವರು ಒಬ್ಬನೇ ಇರೋದು. ಹೆಸರು ಬೇರೆ ಬೇರೆ ಇವೆ. ಕೋಟಿಗಟ್ಟಲೇ ದೇವರುಗಳು ಇವೆ ಎಂದು ಸಿದ್ದರಾಮಯ್ಯ ಪುನರುಚ್ಚರಿಸಿದರು. ಗ್ರಾಮದಲ್ಲಿ ಕಡೇಮಾಳಮ್ಮ ದೇವಾಲಯ ಉದ್ಘಾಟಿಸಿ ಮಾತನಾಡಿದ ಅವರು, ಕಡೇಮಾಳಮ್ಮ ದೇವಾಲಯ ಜೀರ್ಣೋದ್ಧಾರವಾಗಿದೆ. ಬಹಳ ಸಂತೋಷದಿಂದ ದೇವಾಲಯ ಉದ್ಘಾಟಿಸಿದ್ದೇನೆ.

Latest Videos
Follow Us:
Download App:
  • android
  • ios