Asianet Suvarna News Asianet Suvarna News

ಹಿರಿಯರನ್ನು ಗೌರವಿಸುವ ಮನೋಭಾವ ಎಲ್ಲರಲ್ಲೂ ಮೂಡಲಿ

ಹಿರಿಯರಲ್ಲಿ ಅಗಾಧವಾದ ಅನುಭವವಿದ್ದು, ಅವರ ಮಾರ್ಗದರ್ಶನದಲ್ಲಿ ನಡೆದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯವಿದ್ದು ಈ ನಿಟ್ಟಿನಲ್ಲಿ ಹಿರಿಯರನ್ನು ಗೌರವಾದರದಿಂದ ನೋಡುವ ಮನೋಭಾವ ಎಲ್ಲರಲ್ಲೂ ಮೂಡಬೇಕಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ವಿ. ದೀಪಾ ತಿಳಿಸಿದರು.

Let the attitude of respecting elders arise in everyone snr
Author
First Published Oct 21, 2023, 7:51 AM IST

   ತಿಪಟೂರು :  ಹಿರಿಯರಲ್ಲಿ ಅಗಾಧವಾದ ಅನುಭವವಿದ್ದು, ಅವರ ಮಾರ್ಗದರ್ಶನದಲ್ಲಿ ನಡೆದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯವಿದ್ದು ಈ ನಿಟ್ಟಿನಲ್ಲಿ ಹಿರಿಯರನ್ನು ಗೌರವಾದರದಿಂದ ನೋಡುವ ಮನೋಭಾವ ಎಲ್ಲರಲ್ಲೂ ಮೂಡಬೇಕಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ವಿ. ದೀಪಾ ತಿಳಿಸಿದರು.

ನಗರದ ಶಾರದ ನಗರದಲ್ಲಿರುವ ಶಾರದ ವೃದ್ಧಾಶ್ರಮದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಮತ್ತು ಶಾರದ ಹಿರಿಯರ ಆಶ್ರಮದ ಸಹಯೋಗದೊಂದಿಗೆ ನಡೆದ ಹಿರಿಯ ನಾಗರಿಕರ ದಿನಾಚರಣೆ ಮತ್ತು ಮಾನಸಿಕ ಸ್ವಾಥ್ಯ ದಿನಾಚರಣೆಯಲ್ಲಿ ಮಾತನಾಡಿದ ಅವರು, ಸಮಾಜ ಅಭಿವೃದ್ದಿಗೆ ಹಿರಿಯರ ಅನುಭವ ಮುಖ್ಯವಾಗಿದ್ದು, ಕಿರಿಯರು ಭಾವನಾತ್ಮಕವಾಗಿ ಅವರನ್ನು ಅರ್ಥಮಾಡಿಕೊಂಡು ಶಾಂತಿಯುತ ಸಮಾಜ ನಿರ್ಮಾಣ ಮಾಡಬೇಕು. ಮಕ್ಕಳು ಹಿರಿಯರಿಗೆ ಸಮಯ ಕೊಟ್ಟು ಅವರ ಕಷ್ಟ ಸುಖಗಳಲ್ಲಿ ಭಾಗಿಯಾಗುವ ಮೂಲಕ ಕಾಳಜಿ ವಹಿಸಬೇಕು. ಹಿರಿಯರು ಮನಸ್ಸಿನಲ್ಲಿ ಒಂಟಿ ಎಂಬ ಭಾವನೆ ಬಿಟ್ಟು ಪುಸ್ತಕ ಓದುವ ಹವ್ಯಾಸ, ಲಘು ವ್ಯಾಯಮವನ್ನು ರೂಢಿಸಿಕೊಂಡು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು.

ಪ್ಯಾನಲ್ ವಕೀಲರಾದ ಎಸ್.ವಿ. ಶೋಭಾದೇವಿ ಮಾತನಾಡಿ, ಅವಿಭಕ್ತ ಕುಟುಂಬಗಳ ಸಂಖ್ಯೆ ಕಡಿಮೆಯಾದಂತೆಲ್ಲಾ ಹಿರಿಯರ ಮೇಲಿನ ಗೌರವಗಳು ಕಡಿಮೆಯಾಗುತ್ತಿವೆ. ಒತ್ತಡದ ಜೀವನ, ಸಮಯದ ಅಭಾವದಿಂದ ಹಿರಿಯರ ಬಗ್ಗೆ ಯಾರು ತಲೆಕೆಡಿಸಿಕೊಳ್ಳುತ್ತಿಲ್ಲ. ಅವರನ್ನು ಉದಾಸೀನ ಮನೋಭಾವದಿಂದ ನೋಡುತ್ತಿದ್ದಾರೆ. ಇದರಿಂದ ವೃದ್ದಾಶ್ರಮಗಳ ಸಂಖ್ಯೆಯೂ ಹೆಚ್ಚಾಗತ್ತಿದ್ದು, ಯಾರು ಹಿರಿಯರನ್ನು ನಿರ್ಲಕ್ಷಿಸದೆ ಪ್ರೀತಿಯಿಂದ ಕಾಣಬೇಕು ಎಂದರು.

ಕಾರ್ಯಕ್ರಮದಲ್ಲಿ ವಕೀಲರು, ಆಶ್ರಮದ ವೃದ್ದರು ಹಾಗೂ ಸಿಬ್ಬಂದಿ ಇದ್ದರು.

ಮನೆ ಬಾಗಿಲಿಗೆ ಪಡಿತರ

ಬೆಂಗಳೂರು (ಅ.13): ಆಂಧ್ರ ಪ್ರದೇಶ ರಾಜ್ಯದಲ್ಲಿ ಪಡಿತರ ಚೀಟಿಯನ್ನು ಹೊಂದಿರುವ ಫಲಾನುಭವಿಗಳ ಮನೆ ಬಾಗಿಲಿಗೆ ಪಡಿತರ ವಿತರಣೆ ಮಾಡಲಾಗುತ್ತಿದೆ. ಈ ಯೋಜನೆಯನ್ನು ಕರ್ನಾಟಕದಲ್ಲಿಯೂ ಜಾರಿಗೊಳಿಸುವ ಬಗ್ಗೆ ಚಿಂತನೆ ಮಾಡಿದ್ದ ಆಹಾಯ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಹೆಚ್. ಮುನಿಯಪ್ಪ ಅವರು, ಈಗ ಪಡಿತರ ಚೀಟಿ ಹೊಂದಿರುವ ಹಿರಿಯ ನಾಗರಿಕರಿಗೆ (75 ವರ್ಷ ಮೇಲ್ಪಟ್ಟ) ಮನೆ ಬಾಗಲಿಗೆ ಆಹಾರ ಧಾನ್ಯಗಳನ್ನು ವಿತರಣೆ ಸಿದ್ಧತೆ ಮಾಡಿದ್ದಾರೆ.

ಇನ್ನು ಕರ್ನಾಟಕದಲ್ಲಿ ಅನ್ನಭಾಗ್ಯ ಯೋಜನೆಯಡಿ ವಿತರಿಸುವ ಪಡಿತರವನ್ನು 75 ವರ್ಷ ದಾಟಿದವರ ಮನೆ ಬಾಗಿಲಿಗೇ ತಲುಪಿಸಲು ಆಹಾರ ಇಲಾಖೆ ಸಿದ್ಧತೆ ನಡೆಸಿದೆ. ರಾಜ್ಯಕ್ಕೆ ಅಗತ್ಯವಿರುವ ಅಕ್ಕಿಯನ್ನು ಎಫ್‌ಸಿಐ ನಿಗದಿಪಡಿಸಿದ ದರದಲ್ಲಿ (ಪ್ರತಿ ಕೆ.ಜಿಗೆ 34) ಪೂರೈಸಲು ಛತ್ತೀಸಗಢ ಮತ್ತು ತೆಲಂಗಾಣ ರಾಜ್ಯ ಸರ್ಕಾರಗಳು ಒಪ್ಪಿಗೆ ಸೂಚಿಸಿವೆ. ಈ ತಿಂಗಳಿಂದ ಅನ್ನ ಭಾಗ್ಯ ಯೋಜನೆಯಡಿ ಪೂರ್ಣ ಪ್ರಮಾಣದಲ್ಲಿ 10 ಅಕ್ಕಿ ಪೂರೈಸಲು ನಿರ್ಧರಿಸಿರುವ ಇಲಾಖೆ, ಪಡಿತರ ವಿತರಣೆಯಲ್ಲಿ ಹಿರಿಯ ನಾಗರಿಕರಿಗೆ ಅನುಕೂಲ ಮಾಡಿಕೊಡಲು ಮತ್ತೊಂದು ನಿರ್ಧಾರ ತೆಗೆದುಕೊಂಡಿದೆ.

ಕರ್ನಾಟಕ ಲೋಡ್‌ಶೆಡ್ಡಿಂಗ್‌ಗೆ ಬಿಜೆಪಿ ಆಡಳಿತವೇ ಕಾರಣ: ಇಂಧನ ಸಚಿವ ಜಾರ್ಜ್‌ ಆರೋಪ

ರಾಜ್ಯದಲ್ಲಿ ಈವರೆಗೆ ಪಡಿತರ ಕಾರ್ಡ್‌ (ಬಿಪಿಎಲ್‌ ಮತ್ತು ಎಪಿಎಲ್) ಹೊಂದಿರುವ ಕುಟುಂಬದ ಒಬ್ಬ ಸದಸ್ಯರು ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗೆ ತೆರಳಿ ಬಯೊಮೆಟ್ರಿಕ್‌ ನೀಡಿದ ನಂತರ ತಮ್ಮ ಕುಟುಂಬಕ್ಕೆ ನಿಗದಿಪಡಿಸಿದ ಅಕ್ಕಿ ಹಾಗೂ ಇತರೆ ಪಡಿತರ ಪಡೆಯುತ್ತಿದ್ದರು. ಆದರೆ, ವಯಸ್ಸಾದವರು ಪಡಿತರ ಕೇಂದ್ರಗಳಿಗೆ ಹೋಗಲು ಸಮಸ್ಯೆ ಅನುಭವಿಸುತ್ತಿದ್ದರು. ಹೀಗಾಗಿ, ಮನೆಯಲ್ಲಿ ಒಬ್ಬಂಟಿ ವೃದ್ಧರಿದ್ದರೆ ಅವರ ಮನೆ ಬಾಗಿಲಿಗೆ ಪಡಿತರ ವಿತರಣೆ ಮಾಡುವ ಯೋಜನೆ ರೂಪಿಸಲಾಗಿದೆ ಎಂದು ತಿಳಿದುಬಂದಿದೆ.

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಜಾರಿಗೊಳಿಸುತ್ತಿರುವ ಮನೆ ಬಾಗಿಲಿಗೆ ಪಡಿತರ ಪಡೆಯಲು ಸಂಬಂಧಪಟ್ಟಂತಹ ಕುಟುಂಬದಲ್ಲಿ 75 ವರ್ಷದೊಳಗಿನ ಸದಸ್ಯರು ಇರಬಾರದು. ಒಂದು ವೇಳೆ 75 ವರ್ಷದೊಳಗಿನ ಸದಸ್ಯರಿದ್ದಲ್ಲಿ ಅವರೇ ವಿತರಣಾ ಕೇಂದ್ರಗಳಿಗೆ ಬಂದು ಪಡಿತರ ಪಡೆಯಬೇಕು. ಹೀಗಾಗಿ, ಸರ್ಕಾರದಿಂದ ಪಡಿತರ ಚೀಟಿ ಹೊಂದಿದ ಒಂಟಿ ವೃದ್ಧರು, 75 ದಾಟಿದ ದಂಪತಿಗಳ ಪ್ರತ್ಯೇಕ ಪಟ್ಟಿಯನ್ನು ಸಿದ್ಧಪಡಿಸಿದೆ. ಜೊತೆಗೆ, 75 ವರ್ಷದೊಳಗಿನ ಇತರೆ ಸದಸ್ಯರಿದ್ದರೂ ಅವರು ಕೆಲಸದ ನಿಮಿತ್ಯ ಬೇರೆ ಪ್ರದೇಶಗಳಿಗೆ ತೆರಳಿದ್ದರೆ, ಅಂತಹ ಸಮಯದಲ್ಲಿ ಊರಲ್ಲಿರುವ ವೃದ್ಧರ ಮನೆ ಬಾಗಿಲಿಗೇ ಪಡಿತರ ನೀಡಲು ಮುಂದಾಗಿದೆ.

Follow Us:
Download App:
  • android
  • ios